Header Ads

test

ಹೊಟ್ಟೆಯಲ್ಲಿ ಕರುಳ ಕುಡಿ, ಮೈಮೇಲೆ ಸೀಮೆಎಣ್ಣೆ...ಕೈಯಲ್ಲಿ ಬೆಂಕಿಪೊಟ್ಟಣ...ಶೇ.55 ಸುಟ್ಟಗಾಯಗಳೊಂದಿಗೆಆಸ್ಪತ್ರೆಯಲ್ಲಿ ಆಕೆ.

ಸುಟ್ಟ ಗಾಯಗಳಿಂದ ನರಳುತ್ತಿರುವ ಮಗುವೊಂದರ ಬಳಿಗೆ ಹೋಗಿ ಅಮ್ಮನಂತೆ ಧೈರ್ಯ ತುಂಬುತ್ತಾಳೆ. ಆಸಿಡ್ ದಾಳಿಯಲ್ಲಿ ಮುಖವೆಲ್ಲಾ ಸುಟ್ಟು ನರಳುತ್ತಿರುವವರ ಬಳಿಗೆ ಹೋಗಿ ಅಕ್ಕನಂತೆ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾಳೆ. ಬೆಂಕಿಯಲ್ಲಿ ಸಿಕ್ಕಿಕೊಂಡು ಸುಟ್ಟ ದೇಹಗಳೊಂದಿಗೆ ವಿಲವಿಲ ಎಂದು ಒದ್ದಾಡುತ್ತಿರುವವರನ್ನು ಪ್ರೀತಿಯಿಂದ ಹತ್ತಿರಕ್ಕೆ ಬರಸೆಳೆದು, ಏನೂ ಆಗಲ್ಲ, ಕಡಿಮೆಯಾಗುತ್ತದೆ ಬಿಡು ಎಂದು ಆಪ್ಯಾಯತೆಯಿಂದ ಬರ್ನಲ್ ಹಚ್ಚುತ್ತಾಳೆ. ಸುಡುವ ನೋವನ್ನು ತಾಳಲಾರದೆ, ಆಸಿಡ್ ದಾಳಿಯಿಂದ ಮುಖದ ಆಕಾರ ಕಳೆದುಕೊಂಡಿದ್ದರೂ, ಸಮಾಜವೆಲ್ಲಾ ಆಕೆಯನ್ನು ಕೀಳಾಗಿ ಕಾಣುವುದನ್ನು ತಾಳಲಾರದೆ...ಆತ್ಮಹತ್ಯೆಯೇ ದಾರಿ ಎಂದುಕೊಂಡವರಿಗೆ ತನ್ನ ಭಾಷಣಗಳ ಮೂಲಕ ಹೊಸ ಚೈತನ್ಯ ತುಂಬುತ್ತಿದ್ದಾರೆ. ನಮ್ಮ ಶಕ್ತಿ ಕಡಿಮೆಯೇನಲ್ಲ...ಸಾಧಿಸುವ ಶಕ್ತಿ ನಮ್ಮಲ್ಲೂ ಇದೆ ಎನ್ನುತ್ತಾ ಅವರಲ್ಲಿ ಹೊಸ ಚೈತನ್ಯ ಪುಟಿದೇಳುವಂತೆ ಮಾಡುತ್ತಾರೆ. ಜೀವನವನ್ನು ಗೆಲ್ಲುವ ದಾರಿಯನ್ನು ಅವರಿಗೆ ಪರಿಚಯಿಸುತ್ತಾರೆ.

ಆಕೆಯ ಹೆಸರೇ ನಿಹಾರಿ ಮಂಡಲಿ...BSMS ಎಂಬ ಎನ್‌ಜಿಓ ಸ್ಥಾಪಿಸಿ...ಅಗ್ನಿ ಅವಘಡಗಳಿಂದ, ಆಸಿಡ್ ದಾಳಿಯಿಂದ ಗಾಯಗೊಂಡ ಸಂತ್ರಸ್ತರಿಗೆ ಚಿಕಿತ್ಸೆ...ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾ....ಈಗಾಗಲೆ ಹಲವಾರು ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ. ದೇಶವಿದೇಶಗಳಲ್ಲಿ ಪ್ರವಾಸ ಓಡಾಡುತ್ತಾ...ಅಗ್ನಿ ಅವಘಡಗಳ ಸಂತ್ರಸ್ತರಲ್ಲಿ ಸ್ಫೂರ್ತಿ ತುಂಬುತ್ತಿದ್ದಾರೆ. ಆಕೆಯ ಮಾತುಗಳು ಮಂತ್ರದಂಡದಂತೆ ಕೆಲಸ ಮಾಡುತ್ತಿವೆ. ಆಕೆಯ ಪ್ರತಿ ಪದ ಅವರಲ್ಲಿ ಹೊಸ ಚೈತನ್ಯ ತುಂಬುತ್ತದೆ....ಯಾಕೆಂದರೆ ನಿಹಾರಿ ಆ ತರಹದ ನೋವುಗಳನ್ನು ಪ್ರತ್ಯಕ್ಷವಾಗಿ ನೋಡಿ ಬಂದವರು. ಶೇ.55ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಡಿ ಗೆದ್ದ ದುರಂತ ಕಥೆ ಆಕೆಯದು...ಆ ನೋವು ಎಂಥಹದ್ದು ಎಂದು ಪ್ರತ್ಯಕ್ಷವಾಗಿ ಅನುಭವಿಸಿದ ಕಾರಣ ಅಗ್ನಿ ಅವಘಡಗಳಿಗೆ ತುತ್ತಾದವರ ನೋವೇನು ಎಂಬುದು ಆಕೆಗೆ ಚೆನ್ನಾಗಿ ಗೊತ್ತು. ಅವರ ಮಾನಸಿಕ ಸ್ಥಿತಿ ಹೇಗಿರುತ್ತದೆ, ಅವರಿಗೆ ಯಾವ ರೀತಿಯ ಚಿಕಿತ್ಸೆ ಅಗತ್ಯ, ಬಂಧುಗಳಿಂದ, ಸಮಾಜದಿಂದ ಅವರು ಏನು ನಿರೀಕ್ಷಿಸುತ್ತಾರೆ...ಇವೆಲ್ಲವನ್ನೂ ಬಿಡಿಸಿ ಹೇಳುತ್ತಾ ಸಂತ್ರಸ್ತರಿಗೆ ತನ್ನ ಕೈಲಾದ ಸಹಾಯ ಮಾಡುತ್ತಾ ಸರಕಾರ ಏನೆಲ್ಲಾ ಸಹಾಯ ಮಾಡಿದರೆ ಅವರ ಬದುಕು ಬದಲಾಗುತ್ತದೆ ಎಂದು ತಿಳಿಸುತ್ತಾ ತನ್ನ NGO ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.



ದೇಹವೆಲ್ಲಾ ಕಾಗದದಂತೆ ಸುಟ್ಟುಹೋಗುತ್ತಿದ್ದರೂ ಸಾವಿನೊಂದಿಗೆ ಹೋರಾಡಿ ಗೆದ್ದಿದ್ದಾರೆ...ಈಗ ತನ್ನಂತವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ನಿಹಾರಿ ಬಗ್ಗೆ ಸ್ವಲ್ಪ ವಿವರವಾಗಿ ತಿಳಿದುಕೊಳ್ಳೋಣ.ನಿಹಾರಿ ಕೂಡ ಎಲ್ಲರಂತಿದ್ದ ಹುಡುಗಿ...ತನ್ನದೇ ಆದ ಗುರಿ, ಆಸೆ, ಕನಸುಗಳನ್ನು ಹೊತ್ತಿದ್ದವಳು. ಅಷ್ಟರಲ್ಲೇ ಒಳ್ಳೆಯ ಸಂಬಂಧ ಎಂದು ಮದುವೆ ನಿಶ್ಚಯಿಸಿದರು ಹಿರಿಯರು...ಸರಿ ಅಂತ ತಲೆಬಗ್ಗಿಸಿ ತಾಳಿಕಟ್ಟಿಸಿಕೊಂಡಳು. ತಾನು ಕಟ್ಟಿಕೊಂಡಿದ್ದು ರಾಕ್ಷಸ ಎಂದು ಆಕೆಗೆ ಗೊತ್ತಾಗಲು ಜಾಸ್ತಿ ಸಮಯ ಬೇಕಾಗಲಿಲ್ಲ. ದುರಭ್ಯಾಸಗಳು, ಹೆಂಡತಿಯನ್ನೂ ವೇಶ್ಯೆಯಾಗಿ ನೋಡುವ .. ಸುಖ ಕೊಟ್ಟಿದ್ದಕ್ಕೆ ಇಂತಿಷ್ಟು ಎಂದು ಹಣ ಕೊಡುವ ಆತನ ಮನೋಭಾವ, ಇದೇನು ಅಂತ ಪ್ರಶ್ನಿಸಿದರೆ...ಅಷ್ಟೇ ಬಿಡು ಎಂಬ ಒಂದು ವಿಕೃತವಾದ ನೋಟ ಬೀರುತ್ತಿದ್ದ. ಚಿತ್ರಹಿಂಸೆಗಳಿಂದ ಪ್ರತಿನಿತ್ಯ ನರಕ ತೋರಿಸುತ್ತಿದ್ದ. ಈ ರೀತಿಯ ಗಂಡನೊಂದಿಗೆ ಜೀವನ ಹಂಚಿಕೊಳ್ಳುವುದು ವ್ಯರ್ಥ ಎಂದುಕೊಂಡು ಆತ್ಮಹತ್ಯೆಯೇ ದಾರಿ ಎಂದುಕೊಂಡಳು.

ಅದಾಗಲೆ ಆಕೆ 3 ತಿಂಗಳ ಗರ್ಭಿಣಿ...ಹೊಟ್ಟೆಯಲ್ಲಿ ಮಗು, ಮೈಯಲ್ಲಾ ಸೀಮೆಎಣ್ಣೆ ಹಾಕಿಕೊಂಡಿದ್ದಾಳೆ, ಕೈಯಲ್ಲಿ ಬೆಂಕಿಪಟ್ಣ....ಅಂಟಿಸಿಕೊಳ್ಳೋಣ ಎನ್ನುವಷ್ಟರಲ್ಲಿ ಒಂದು ಆಲೋಚನೆ ಬಂತು....ಹೊಟ್ಟೆಯಲ್ಲಿನ ಮಗುವಿನ ಪರಿಸ್ಥಿತಿ ಏನು? ಎಂಬುದು ಆಕೆಯ ಪ್ರಶ್ನೆ? ಹುಟ್ಟಲಿರುವುದು ಹೆಣ್ಣಾದರೆ ಆಕೆ ಕೂಡ ಇದೇ ರೀತಿಯ ನರಕದಲ್ಲಿ ಬೆಳೆಯಬೇಕಲ್ಲವೇ...ಹಾಗಿರುವಾಗ ಹುಟ್ಟುವುದೇಕೆ? ನರಕ ತರುವುದ್ಯಾಕೆ ಎಂದು ಆಕೆ ತನ್ನಲ್ಲೇ ಉತ್ತರ ಹೇಳಿಕೊಂಡಳು. ಕಡೆಗೆ ಬೆಂಕಿ ಅಂಟಿಸಿಕೊಂಡಳು...ಬಿಸಿ ನೀರು ಮೈಮೇಲೆ ಬಿದ್ದರೇನೇ ತಡೆದುಕೊಳ್ಳದ ಆ ದೇಹ...ಕಾಗದದಂತೆ ಸುಡುತ್ತಿದೆ..? ಆ ಬೆಂಕಿಯಲ್ಲಿ ದೇಹವೆಲ್ಲಾ ಸುಡುತ್ತಿದೆ....ಕೂಗಿಕೊಳ್ಳಲೂ ಬಾಯಿ ಸಹಕರಿಸುತ್ತಿಲ್ಲ..? ಕಣ್ಣುಗಳು ಕಾಣದಾಗಿದ್ದವು.

ಮೂರು ದಿನಗಳ ಕಾಲ ಕೋಮಾದಲ್ಲಿದ್ದ ಬಳಿಕ ಕಣ್ಣು ತೆರೆದಳು ನಿಹಾರಿ....ಅದಾಗಲೇ ಸುಟ್ಟ ಗಾಯಗಳಿಂದ ದೇಹವೆಲ್ಲಾ ಸುಡುತ್ತಿದೆ...ದೇಹವೆಲ್ಲಾ ಹಸಿಹಸಿ ಹುಣ್ಣುಗಳು. ಬದುಕುವುದು ಕಷ್ಟ ಎಂದು ವೈದ್ಯರು ಹೇಳಿದರು. ಆದರೆ ಆಕೆ ಬದುಕಿದಳು. ವಿಧಿಯ ಜತೆ ಹೋರಾಡಳು, ತನ್ನಂತಹ ಅಭಾಗ್ಯರನ್ನು ಸಂತೈಸಲು, ಕಾರಣಗಳು ಏನೇ ಇರಲಿ ಆತ್ಮಹತ್ಯೆ ಬೇಡ ಎಂದು ತನ್ನ ಜೀವನವನ್ನೇ ಉದಾಹರಣೆಯಾಗಿ ಕೊಡುತ್ತಾ....ಎಲ್ಲರನ್ನೂ ಮೋಟಿವೇಟ್ ಮಾಡಲು... ಆ ಕ್ಷಣದಿಂದ ಇಲ್ಲಿಯವರೆಗೂ ಪ್ರತಿ ಹೆಜ್ಜೆಯೂ, ಮಾಡುವ ಪ್ರತಿ ಕೆಲಸ ಅಗ್ನಿ ಅವಘಡಗಳಲ್ಲಿ ಗಾಯಗೊಂಡವರಿಗೆ ಅರ್ಪಿಸಿದ್ದಾರೆ... ಹ್ಯಾಟ್ಸಾಫ್ ನಿಹಾರಿ.

ಆಕೆಯನ್ನು ಭೇಟಿ ಮಾಡಬೇಕೆಂದಿದ್ದೀರಾ? ಆಕೆ ಮಾಡುತ್ತಿರುವ ಒಳ್ಳೆಯ ಕೆಲಸಕ್ಕೆ ನೀವು ಸಹ ಕೈಜೋಡಿಸಬೇಕೆ? ಹಾಗಿದ್ದರೆ ಆಕೆಯ ನಂಬರ್‌ಗೆ ಕರೆ ಮಾಡಿ. ಒಬ್ಬ ಮಾನವೀಯ ಮೂರ್ತಿಯ ಜತೆ ಹೆಜ್ಜೆ ಹಾಕೋಣ. ಅದೆಷ್ಟೋ ಮಂದಿಯ ಕಣ್ಣೀರು ಒರೆಸೋಣ.

Neehaari Mandali Face Book Id: CLick Here.

Neehaari Mandali Phone Number: +917680974918

No comments