Header Ads

test

ಮದುವೆಯಾಗಲಿರುವ ಮಗನಿಗೆ ತಾಯಿ ಈ 5 ಸಂಗತಿಗಳನ್ನು ಕಡ್ಡಾಯವಾಗಿ ತಿಳಿಸಬೇಕಂತೆ..! ಯಾಕೆ ಗೊತ್ತಾ.?

ಮದುವೆಯಾಗಲಿರುವ ಪ್ರತಿ ಮಗನಿಗೂ ತಾಯಿ ಹೇಳಬೇಕಾಗಿರುವುದು...ಅನಾದಿ ಕಾಲದಿಂದ ನಾವು ಹುಡುಗಿಗೆ ಮಾತ್ರ ಬುದ್ಧಿ ಹೇಳಿ ಕಳುಹಿಸುತ್ತೇವೆ ಅಲ್ಲವೇ? ಆದರೆ ಹುಡುಗರ ಬಗ್ಗೆ ನಾವು ಯಾವತ್ತಾದರೂ ಯೋಚಿಸಿದ್ದೀವಾ? ಇಲ್ಲ ಅಲ್ಲವೇ? ತಾಯಿ ಮಗನಿಗೆ ಹೇಳಬೇಕಾದ ಮುಖ್ಯವಾದ ಐದು ವಿಷಯಗಳು ಇಲ್ಲಿವೆ.


#1. ಯಾವುದೇ ಸಮಯದಲ್ಲೂ ತಾಯಿಯೊಂದಿಗೆ ಪತ್ನಿಯನ್ನು ಹೋಲಿಸಬಾರದು. ತಾಯಿ ಬೇರೆ ಪತ್ನಿ ಬೇರೆ. ತಾಯಿಗೆ ಇಪ್ಪತ್ತು ವರ್ಷ ಅನುಭವ ಇದೆಯಾದರೂ ನಿನ್ನ ಪತ್ನಿಯನ್ನು ನಾನು ನಿನ್ನನ್ನು ಬೆಳಸಿದಂತೆ ಆಪ್ಯಾತೆಯಿಂದ ಅಂಗೈಯಲ್ಲಿ ಹಿಡಿದು ಬೆಳೆಸಿರುತ್ತಾರೆ, ಆದಕಾರಣ ಆಕೆಗೆ ಸ್ವಲ್ಪ ಕಾಲಾವಕಾಶ ಕೊಡುವುದು ನಿನ್ನ ಕರ್ತವ್ಯ. ಬಳಿಕ ಓರ್ವ ಶ್ರೇಷ್ಠವಾದ ಪ್ರೇಮಮೂರ್ತಿಯಾದ ತಾಯಿಯಾಗಿ ನಿನ್ನ ಮಗುವನ್ನು ನೋಡಿಕೊಳ್ಳುತ್ತಾಳೆ.

#2. ಪತ್ನಿ ನಿನಗೆ ತಾಯಿಯಲ್ಲ. ಓರ್ವ ಸಖಿ ಗೆಳತಿ. ಆಕೆ ಎಲ್ಲರನ್ನೂ ಬಿಟ್ಟು ನಿನ್ನೊಂದಿಗೆ ಜೀವನ ಹಂಚಿಕೊಳ್ಳಲು ಬಂದಿದ್ದಾಳೆ. ನಿನ್ನ ತಾಯಿಗೆ ನಿನ್ನನ್ನು ಪೋಷಿಸುವಷ್ಟರ ಮಟ್ಟಿಗಷ್ಟೇ ಮುಖ್ಯ. ಆದರೆ ನಿನಗೆ ನಿನ್ನ ಪತ್ನಿಯ ಲಾಲನೆ ಪಾಲನೆ ಮುಖ್ಯ. ನೀವಿಬ್ಬರೂ ಅನ್ಯೋನ್ಯವಾಗಿ ಇರುವುದು ಬಹಳ ಮುಖ್ಯ.

#3. ಗೌರವಾನ್ವಿತ ನಿನ್ನ ಪತ್ನಿ ನಿನ್ನ ಜೀವನದಲ್ಲಿ ಏಳುಬೀಳುಗಳು ತಾರತಮ್ಯಗಳು ಎಲ್ಲವನ್ನೂ ಹಂಚಿಕೊಳ್ಳುವ ವ್ಯಕ್ತಿ. ನಿನ್ನ ಪ್ರತಿ ಹೆಜ್ಜೆಯಲ್ಲೂ ಸಹಾಯ, ಸಹಕಾರಗಳು, ಪ್ರೀತಿ-ಅನುರಾಗಗಳು ಹಂಚುವ ವ್ಯಕ್ತಿಯೊಂದಿಗೆ ಏನೂ ಮುಚ್ಚಿಡಬಾರದು. ದಾಂಪತ್ಯದಲ್ಲಿ ಬಚ್ಚಿಟ್ಟುಕೊಳ್ಳುವ ಸ್ವಾರ್ಥ ತುಂಬಾ ತಪ್ಪು. ಆಕೆಯ ಜತೆಗಿನ ಅಭಿಪ್ರಾಯಗಳನ್ನು ತಿಳಿದುಕೊಂಡು ಏಕೀಭವಿಸಿ ಪ್ರಯಾಣಿಸುವುದೇ ಸುಖಕರ ದಾಂಪತ್ಯ.

#4. ತವರು ಮನೆ ಬಿಟ್ಟು ಗಂಡನ ಮನೆಗೆ ಬಂದ ಪತ್ನಿಗೆ ಸಹಜವಾಗಿ ಇರಲು ನೀನು ಸಹಕರಿಸಬೇಕು. ಹುಟ್ಟಿದ ಮನೆಯ ಒಡಹುಟ್ಟಿದವರು, ತಂದೆತಾಯಿ ಗೋತ್ರ, ಪರಂಪರೆ ಎಲ್ಲವನ್ನೂ ಬಿಟ್ಟು ನಿನ್ನನ್ನೇ ನಂಬಿಕೊಂಡು ಬಂದಿದ್ದಾಳೆ. ಸಣ್ಣ ಪುಟ್ಟ ವ್ಯವಹಾರಗಳು ಆಕೆಯನ್ನು ಸಂಕಟಕ್ಕೆ ಗುರಿ ಮಾಡಬಹುದು. ನೀನು ಮಾತ್ರ ಆಕೆಯನ್ನು ಗಮನಿಸಿ ಆಕೆ ತವರು ಮನೆಯಲ್ಲಿ ಪಡೆಯುತ್ತಿದ್ದ ಸುಖ ಸಂತೋಷಗಳನ್ನು ಪಡೆಯುವಂತೆ ಮಾಡಬೇಕಾದದ್ದು ನಿನ್ನ ಕರ್ತವ್ಯ.

#5. ಪತ್ನಿಯನ್ನು ಯಾವಾಗಲೂ ಪ್ರೀತಿಸುತ್ತಿರಬೇಕು. ಪ್ರೀತಿಸಲು ವಯಸ್ಸಿನ ಮಿತಿ ಇಲ್ಲ. ಪತ್ನಿಯನ್ನು ಸಂತೋಷವಾಗಿ ನೋಡಿಕೊಳ್ಳಬೇಕು. ನಿಮ್ಮಿಬ್ಬರ ಪ್ರೀತಿ ಅನುರಾಗ ಜಾಸ್ತಿಯಾಗಬೇಕೆ ಹೊರತು ಕಡಿಮೆಯಾಗಬಾರದು. ಅತಿ ಮುಖ್ಯವಾದದ್ದು ನೆನಪಿನಲ್ಲಿಟ್ಟುಕೋ...ನಿಮ್ಮ ತಂದೆ ನನ್ನನ್ನು ಯಾವ ರೀತಿ ಗೌರವ ಮರ್ಯಾದೆಯಿಂದ ಪ್ರೀತಿ ಅನುರಾಗದಿಂದ ಸುಖ ಸಂತೋಷದಿಂದ ನೋಡಿಕೊಂಡರೋ ನೀನು ಸಹ ನಿನ್ನ ಪತ್ನಿಯನ್ನು ಗೌರವ ಮರ್ಯಾದೆ ಪ್ರೀತಿ ಅನುರಾಗದಿಂದ ಸುಖ ಸಂತೋಷದಿಂದ ಯಾವುದೇ ಕೊರತೆ ಇಲ್ಲದಂತೆ ಜೀವನ ಕಳೆದು ನಮ್ಮ ವಂಶವನು ವೃದ್ಧಿಸಿ ಎಲ್ಲರಿಗೂ ಆದರ್ಶವಾಗಿರಬೇಕು.

No comments