ಕೊಪ್ಪಳದ ಕಾರಟಗಿಯ ಮಿನಿ ಜಿನೀಯಸ್, ಕೇವಲ 3 ವರ್ಷದ ಮುಗ್ಧ ಪೋರ: ವಿಡಿಯೋ ನೋಡಿ
ಕೊಪ್ಪಳ, ಜ.2: ಅಬ್ಬಬ್ಬಾ ಈ ವಯಸ್ಸಿನಲ್ಲೇ ಎಂತಹ ಅದ್ಬುತ ಟ್ಯಾಲೆಂಟ್. ಕೇವಲ 3 ವರ್ಷದ ಮಗುವಿಗೆ ಮಾತನಾಡಲು ಕೂಡ ಕಷ್ಟ ಆಗುವ ಸಮಯದಲ್ಲಿ ಸರಾಗವಾಗಿ ಹಾಗೂ ಗುರು ವಿಶ್ವೇಶ್ವರಯ್ಯನ ಮಾಸ್ಟರ್ ಬ್ರೈನ್ ತರಹ ಉತ್ತರ ಕೊಡುವ ಕೇವಲ ಮೂರು ವರ್ಷದ ಮುಗ್ಧ ಪೋರ. ಹೆಸರಿಗೆ ಮಾತ್ರ ಆದರೆ ಇವನ ಟ್ಯಾಲೆಂಟ್ ಮಾತ್ರ ಅಪಾರ.ಇಷ್ಟು ಸಣ್ಣ ವಯಸ್ಸಲ್ಲಿ ಅಪ್ಪ, ಅಮ್ಮ ಅನ್ನೋದೆ ಕಷ್ಟ ಅಂತದ್ದರಲ್ಲಿ ಈ ವಯಸ್ಸಿಗೇನೆ ಪ್ರಾಣಿ, ಪಕ್ಷಿ, ರಾಜಕೀಯ, ರಾಷ್ಟ್ರ ನಾಯಕರನ್ನು ಗುರುತಿಸುತ್ತಾನೆ ಈ ಪುಟ್ಟ ಪೋರ. ಏನು ಕೇಳಿದರೂ ತಟ್ಟ ಅಂತ ಉತ್ತರ ಹೇಳುವ ರೋಹಿತ್ ಸಾಮಾಜಿಕ ಜಾಲತಾಣದಲ್ಲಿ ಈತನ ಟ್ಯಾಲೆಂಟ್ ಸಖತ್ ವೈರಲ್ ಆಗಿದೆ.
ಸಾವಿರಾರು ರೂಪಾಯಿ ಡೊನೇಷನ್ ಕಟ್ಟಿ ಮಾಂಟೆಸ್ಸರಿ ಕಾನ್ವೆಂಟ್ ಅಂತ ಹೋಗೋ ಮಕ್ಕಳಿಗೆ ಇಲ್ಲದೆ ಇರುವ ಟ್ಯಾಲೆಂಟ್ ಒಂದು ಹಳ್ಳಿಯಲ್ಲಿ ಅದು ಕೂಡ ಇನ್ನೂ ಅಂಗನವಾಡಿ ಮೆಟ್ಟಿಲು ಕೂಡ ಹತ್ತದೆ ಇರುವ ಈ ಮಗುವಿನ ಜೀನಿಯಸ್ಗೆ ಹ್ಯಾಟ್ಸ್ ಆಫ್ ಹೇಳ್ಳೇಬೇಕು. ಇನ್ನೂ ತಮ್ಮ ಮಗನ ಜ್ಞಾನವನ್ನು ಕಂಡು ರೋಹಿತ್ ತಂದೆ-ತಾಯಿ ನಿಂಗರಾಜ್ ಮತ್ತು ಜ್ಯೋತಿ ಹೆಮ್ಮೆ ಪಡುತ್ತಿದ್ದಾರೆ. ಈ ಪುಟ್ಟ ಪೋರನ ಮುಗ್ದ ತೊದಲು ಉತ್ತರಗಳಿಗೆ ಜನ ಕೂಡ ಮೈಮರೆತಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಈ ಪುಟ್ಟ ರೋಹಿತ್ ಗೆ ಫುಲ್ ಪರಫೆಕ್ಟ. ಈಗಲೇ ಇಷ್ಟೊಂದು ಪ್ರತಿಭೆ ಹೊಂದಿರುವ ರೋಹಿತ್ ಭವಿಷ್ಯ ಎಷ್ಟು ಉಜ್ವಲವಾಗಲಿದೆ ಎಂದು ನಾವು ಕಾಣಬಹುದು.
watch video :
https://youtu.be/qNIp-321_Co

Post a Comment