29 ವರ್ಷಗಳ ಹಿಂದೆ ಲೆಟರ್ ಬರೆದು ಸಮುದ್ರಕ್ಕೆ ಎಸೆದಿದ್ದಳು.. ಈಗ ಫೇಸ್ಬುಕ್ನಲ್ಲಿ ಕಾಣಿಸಿದೆ.! ಇಷ್ಟಕ್ಕೂ ಆಕೆಏನು ಬರೆದಿದ್ದಳು?
ಕೆಲವು ಸಿನಿಮಾಗಳು ಇದೇ ರೀತಿಯ ಕಥೆಯಾಧಾರಿತವಾಗಿ ಬಂದಿರುವುದು ನೆನಪಿರಬಹುದು. ಟಾಲಿವುಡ್ನಲ್ಲಿ ಬಂದ ಶಿವಮಣಿ ಸಿನಿಮಾ ಇದೇ ರೀತಿಯದು. ನಾಗಾರ್ಜುನ, ಅಸಿನ್, ರಕ್ಷಿತಾ ಅಭಿನಯದ ಸಿನಿಮಾ ಅದು. ಅದರಲ್ಲಿ ಅಸಿನ್ ತನ್ನನ್ನು ರಕ್ಷಿಸು ಎಂದು ಒಂದು ಪತ್ರ ಬರೆದು ಸೀಸೆಯಲ್ಲಿ ಹಾಕಿ ಬಳಿಕ ಆ ಸೀಸೆಯನ್ನು ಸಮುದ್ರಕ್ಕೆ ಎಸೆಯುತ್ತಾಳೆ. ಆ ಸೀಸೆ ಸಮುದ್ರದಲ್ಲಿ ತೇಲಾಡುತ್ತಾ ಪ್ರಯಾಣಿಸಿ ಕೆಲವು ವರ್ಷಗಳ ಬಳಿಕ ಬೇರೆ ಕಡೆ ರಕ್ಷಿತಾಗೆ ಸಿಗುತ್ತದೆ. ಅದರಲ್ಲಿರುವ ಲೆಟರ್ ಓದಿದ ರಕ್ಷಿತಾ ಅದನ್ನು ಟ್ರ್ಯಾಕ್ ಮಾಡಿ ಲವರ್ಸ್ ಸ್ಟೋರಿ ಬೆಳಕಿಗೆ ತರುತ್ತಾರೆ. ಇದು ಸಿನಿಮಾ ಆದರೂ ವಾಸ್ತವವಾಗಿ ಇಂತಹದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಆದರೆ ಅದರಲ್ಲಿ ಲವರ್ಸ್ ಯಾರೂ ಇಲ್ಲ. ಆದರೆ ಅದನ್ನು ಓರ್ವ ಮಹಿಳೆ 29 ವರ್ಷಗಳ ಹಿಂದೆ ಬರೆದಿದ್ದು.
ಆಕೆ ಹೆಸಾರು ಮಿರಾಂಡಾ ಚಾವೆಜ್. ಸದ್ಯಕ್ಕೆ ಆಕೆಯ ವಯಸ್ಸು 37 ವರ್ಷಗಳು. ಆದರೆ ಆಕೆ 8 ವರ್ಷಗಳ ವಯಸ್ಸಿನಲ್ಲಿ ಅಂದರೆ 1988 ಸೆಪ್ಟೆಂಬರ್ 26ರಂದು ಆಕೆ ಅಮೆರಿಕದ ಸೌತ್ ಕರೋಲಿನಾದಲ್ಲಿ ಇರುವ ಕೊಲ್ಲೆಟಾನ್ ಕೌಂಟಿ, ಎಡಿಸ್ಟೋ ಬೀಚ್ನಲ್ಲಿ ಒಂದು ದಿನ ತಂದೆತಾಯಿಯ ಜತೆಗೆ ವೀಕೆಂಡ್ಗೆ ಹೋಗಿದ್ದರು. ಆ ಸಮಯದಲ್ಲಿ ಆಕೆ ಏನೆಂದುಕೊಂಡಳೋ ಏನೋ ಗೊತ್ತಿಲ್ಲ. ತನ್ನ ಹೆಸರು, ವಿಳಾಸ, ತಾನು ಓದುತ್ತಿರುವ ಶಾಲೆ, ತಾನು ಅಲ್ಲಿಗೆ ಯಾಕೆ ಬಂದೆ.. ಇನ್ನಿತರೆ ವಿವರಗಳನ್ನು ಒಂದು ಲೆಟರ್ನಲ್ಲಿ ಬರೆದು ಆ ಲೆಟರನ್ನು ಮಡಿಚಿ ಒಂದು ಸೀಸೆಯಲ್ಲಿ ಹಾಕಿದಳು. ಬಳಿಕ ಆ ಸೀಸೆಗೆ ಭದ್ರವಾಗಿ ಬಿರಡೆ ಹಾಕಿ ಸಮುದ್ರಕ್ಕೆ ಎಸೆದಳು. ಅಷ್ಟೇ... ಆ ಘಟನೆ ನಡೆದು 29 ವರ್ಷಗಳು ಉರುಳಿ ಹೋದವು.
ಆ ಸೀಸೆ ಸಮುದ್ರದಲ್ಲಿ ತೇಲಾಡುತ್ತಾ ಪ್ರಯಾಣಿಸಿತು. ಇತ್ತೀಚೆಗೆ ಒಂದು ದಿನ ಜಾರ್ಜಿಯಾ ಸಪೆಲ್ ಐಲಾಂಡ್ ಬೀಚ್ನಲ್ಲಿ ಆ ಸೀಸೆ ಪ್ರತ್ಯಕ್ಷವಾಯಿತು. ಆ ಸೀಸೆ ಲಿಂಡಾ ಹಂಫೈರ್ಸ್, ಡೇವಿಡ್ ಎಂಬ ದಂಪತಿಗಳಿಗೆ ಸಿಕ್ಕಿತು. ಅದರಿಂದ ಅವರು ಆ ಸೀಸೆಯಲ್ಲಿ ಇರುವ ಲೆಟರನ್ನು ಹೊರತೆಗೆದು ಓದಿದಾಗ ಅಸಲಿ ವಿಷಯ ಗೊತ್ತಾಯಿತು. ಅದರಲ್ಲಿ ಇರುವ ವಿಳಾಸದ ಪ್ರಕಾರ ಅವರು ಮಿರಾಂಡಾರನ್ನು ಟ್ರ್ಯಾಕ್ ಮಾಡಿದರು. ಆದರೆ ಆ ವಿಳಾಸದಲ್ಲಿ ಆಕೆ ಇಲ್ಲವೆಂದು ಗೊತ್ತಾಯಿತು. ಲಿಂಡಾ ದಂಪತಿಗಳು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಆ ಪತ್ರದ ಫೋಟೋ ತೆಗೆದು ಅದನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡರು. ಹಾಗಾಗಿ ಆ ಪೋಸ್ಟ್ ವೈರಲ್ ಆಯಿತು.
ಕೊನೆಗೂ ಆ ಪೋಸ್ಟ್ ಮಿರಾಂಡಾ ಕಣ್ಣಿಗೆ ಬಿದ್ದಿದೆ. ಲಿಂಡಾ ದಂಪತಿಗಳನ್ನು ಸಂಪರ್ಕಿಸಿದರು. ತಾನು 29 ವರ್ಷಗಳ ಹಿಂದೆ ಬರೆದ ಆ ಲೆಟರನ್ನು ನೋಡಿ ಖುಷಿಯಾದರು. ಅದೊಂದು ಸಿಹಿಯಾದ ನೆನಪೆಂದು ಹೇಳಿದ್ದಾರೆ. ಹೌದು ಮತ್ತೆ, ಅಷ್ಟು ವರ್ಷಗಳ ಬಳಿಕ ತನ್ನ ಚಿಕ್ಕಂದಿನ ಬರಹವನ್ನು ಮತ್ತೊಮ್ಮೆ ನೋಡಿಕೊಳ್ಳುವ ಅವಕಾಶ ಸಿಕ್ಕಿದೆ ಅಲ್ಲವೇ. ಈ ರೀತಿಯ ಅವಕಾಶ ಎಲ್ಲರಿಗೂ ಸಿಗಲ್ಲ ಅಲ್ಲವೇ? ಹಾಗಾಗಿಯೇ ಅದು ಮರೆಯಲಾಗದ ಸಿಹಿ ನೆನಪು ಎನ್ನಬಹುದು..!

Post a Comment