Header Ads

test

ಆಕೆಗೆ 23, ಅವನಿಗೆ 13 ಅವರಿಬ್ಬರಿಗೂ ಮದುವೆ... ಕೊನೆಗೆ ಏನಾಯಿತು ಎಂದು ನೋಡಿದರೆ ಶಾಕ್ ಆಗುತ್ತೀರ,ತಪ್ಪದೆ ನೋಡಿ!!

ಬಾಲ್ಯ ವಿವಾಹ ನಡೆಯದಂತೆ ಸರಕಾರ ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದರೂ ಇನ್ನೂ ಬಹಳಷ್ಟು ಗ್ರಾಮಗಳಲ್ಲಿ ಬಾಲ್ಯ ವಿವಾಹ ಘಟನೆಗಳು ನಿಂತಿಲ್ಲ. ಇದರಿಂದ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ.


ಮಾನ್ಯವಾಗಿ ಬಾಲ್ಯ ವಿವಾಹಗಳಲ್ಲಿ ವಧುವಿನ ವಯಸ್ಸು ಚಿಕ್ಕದಾಗಿರುತ್ತದೆ... ವರ ಮಹಾಶಯ ಆಕೆಗಿಂತಲೂ ವಯಸ್ಸಿನಲ್ಲಿ ತುಂಬಾ ದೊಡ್ಡವನಾಗಿರುತ್ತಾನೆ. ಆದರೆ ಕರ್ನೂರು ಜಿಲ್ಲೆಯಲ್ಲಿ ನಡೆ ಘಟನೆ ಇದಕ್ಕೆ ಭಿನ್ನವಾಗಿ ಇದೆ. ಈ ಮದುವೆಯಲ್ಲಿ ಮದುಮಗನಿಗಿಂತ ಮದುಮಗಳು 10 ವರ್ಷ ದೊಡ್ಡವರು ಎಂಬುದು ಗಮನಾರ್ಹ ಸಂಗತಿ. ಅಷ್ಟೇ ಅಲ್ಲ ಇಂತಹ ಮದುವೆಗಳು ಕಾನೂನು ರೀತ್ಯ ಅಪರಾಧ. ಈ ಬಗ್ಗೆ ಗೊತ್ತಿಲ್ಲದೆಯೋ ಅಥವಾ ಕಾನೂನು ಏನು ಮಾಡುತ್ತದೆ ಬಿಡು ಎಂಬ ಧೋರಣೆಯೋ ಗೊತ್ತಿಲ್ಲ. ಬಾಲ್ಯ ವಿವಾಹಗಳು ಮಾತ್ರ ನೆರವೇರುತ್ತಲೇ ಇವೆ. ಇಬ್ಬರೂ ಕುಟುಂಬಿಕರು ಆ ಬಾಲಕನನ್ನು ಪುಟ್ಟಗೌರಿ ಮದುವೆ ತರಹ ಬದಲಾಯಿಸಿದರು. ಇಷ್ಟಕ್ಕೂ ನಡೆದ ಘಟನೆ ಏನೆಂದರೆ.

ಕರ್ನೂರು ಜಿಲ್ಲೆಗೆ ಸೇರಿದ ನಮ್ಮ ರಾಜ್ಯಕ್ಕೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯಿತಿ ಕೌತಾಳಂ ಸಮೀಪದ ಕುಗ್ರಾಮವೊಂದರಲ್ಲಿ ಒಂದು ವಾರದ ಹಿಂದೆ 13 ವರ್ಷದ ಬಾಲಕನಿಗೆ ಸುಮಾರು 23 ವರ್ಷದ ಯುವತಿಯನ್ನು ನೀಡಿ ಮದುವೆ ಮಾಡಿದ್ದಾರೆ. ಇದು ಕುಗ್ರಾಮವಾದ ಕಾರಣ ಅಲ್ಲಿನವರಿಗೆ ಈ ರೀತಿಯ ಮದುವೆ ಅಪರಾಧ ಎಂಬುದು ಗೊತ್ತಿಲ್ಲದೆ ಮದುವೆ ನಡೆಯಿತು. ಆದರೆ ಈ ಮದುವೆಗೆ ಹಾಜರಾದ ಯಾರೋ ಸ್ಮಾರ್ಟ್‌ಫೋನ್‌ನಲ್ಲಿ ಈ ಮದುವೆಯನನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಳಿಕ ಅದು ವೈರಲ್ ಆಗಿದೆ. ಹಾಗಾಗಿ ಈ ಬಾಲ್ಯ ವಿವಾಹ ಸಂಗತಿ ಬೆಳಕು ಕಂಡಿದೆ.

ಗಂಡ ಕುಡಿತಕ್ಕೆ ವ್ಯಸನಿಯಾಗಿರುವುದು, ತನ್ನ ಆರೋಗ್ಯ ಹದಗೆಟ್ಟ ಕಾರಣ ತಾನು ಸತ್ತರೆ ಕುಟುಂಬವನ್ನು ಯಾರು ನೋಡಿಕೊಳ್ಳುವವರು ಎಂಬ ಆತಂಕದಲ್ಲಿ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿರುವ ಓರ್ವ ತಾಯಿ ತೆಗೆದುಕೊಂಡ ನಿರ್ಧಾರ ಇದು. ತನ್ನ ಗಂಡು ಮಕ್ಕಳಲ್ಲಿ ಹಿರಿಯವನಾದ 13 ವರ್ಷದವನಿಗೆ ಮದುವೆ ಮಾಡಿದರೆ ಬರುವ ಸೊಸೆ ತನ್ನ ನಂತರ ಕುಟುಂಬವನ್ನು ನೋಡಿಕೊಳ್ಳುತ್ತಾಳೆ ಎಂಬ ಆಲೋಚನೆಯಲ್ಲಿ ಈ ಮದುವೆ ಮಾಡಬೇಕೆಂದು ಬಯಸಿದಳು.

ಮಗನಿಗೆ ಮದುವೆ ಮಾಡಬೇಕೆಂದು ನಿರ್ಧರಿಸಿದ ಆಕೆ ತಮ್ಮ ದೂರದ ಸಂಬಂಧಿಗಳಲ್ಲೇ ಮದುವೆ ವಯಸ್ಸಿಗೆ ಬಂದ ಯುವತಿಯನ್ನು ನೋಡಿ ಮದುವೆ ನಡೆಸಿದ್ದಾಗಿ ಗೊತ್ತಾಗಿದೆ. ಹದಿಮೂರು ವರ್ಷ ವಯಸ್ಸಿನ ಅಪ್ರಾಪ್ತ ಬಾಲಕನ ಜತೆಗೆ ಸುಮಾರು 10 ವರ್ಷ ದೊಡ್ಡವಳಾದ ಯುವತಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಮದುವೆಗೆ ಬಂದವರೆಲ್ಲಾ ಇದನ್ನು ನೋಡಿ ಶಾಕ್ ಆದರು. ಈ ಮದುವೆಯನ್ನು ನಿಲ್ಲಿಸಬೇಕೆಂದು ಕೆಲವರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅದೇನೇ ಇರಲಿ ಈ ಮದುವೆ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

No comments