Header Ads

test

ಅದಕ್ಕೇ ಇರಬೇಕು ಮನುಷ್ಯ ಮೊದಲ 20 ವರ್ಷ ಆ ರೀತಿ ಇದ್ದು... ಕೊನೆಯ 10 ವರ್ಷ ಈ ರೀತಿಆಡುತ್ತಿದ್ದಾನೆ.! ಜೀವನ ಸತ್ಯ ತಿಳಿಸುವ ಕಥೆ

ಒಂದು ದಿನ ದೇವರು ಒಂದು ನಾಯಿಯನ್ನು ಸೃಷ್ಟಿಸಿದರು.

ದೇವರು ಹೇಳಿದರು: ದಿನವೆಲ್ಲಾ ಮನೆ ಮುಂದೆ ಕುಳಿತುಕೋ. ಯಾರಾದರೂ ಅಪರಿಚಿತರು ಬಂದರೆ ಬೊಗಳು. ನಾನು ನಿನಗೆ 20 ವರ್ಷಗಳ ಆಯುಸ್ಸು ಕೊಡುತ್ತೇನೆ.

ನಾಯಿ: ಸ್ವಾಮಿ ಇದೇನು ಚೆನ್ನಾಗಿಲ್ಲ.... ನಾನು ಅಷ್ಟು ವರ್ಷ ಬೊಗಳು ಸಾಧ್ಯವಾಗಲ್ಲ. ಆದಕಾರಣ ತಗೊಳ್ಳಿ 10 ವರ್ಷ ನಿಮಗೆ ಕೊಡುತ್ತೇನೆ. 10 ವರ್ಷ ಮಾತ್ರ ಬೊಗಳುತ್ತೇನೆ ಸರಿಯೇ..! ದೇವರು: ಸರಿ...



ಮರುದಿನ ದೇವರು ಒಂದು ಕೋತಿಯನ್ನು ಸೃಷ್ಟಿಸಿದರು.

ದೇವರು: ನೀನು ಕಪಿಚೇಷ್ಟೆ ಮಾಡುತ್ತಾ ಜನರನ್ನು ಸಂತೋಷಪಡಿಸು. ನಿನಗೆ 20 ವರ್ಷ ಆಯಸ್ಸನ್ನು ನೀಡುತ್ತಿದ್ದೇನೆ.

ಕೋತಿ: ಏನು!! ಕಪಿಚೇಷ್ಟೆ 20 ವರ್ಷಗಳೇ! ಅಯ್ಯೋ ಸಾಧ್ಯವಿಲ್ಲ! ನಾಯಿ ತನ್ನ 10 ವರ್ಷ ನಿನಗೆ ಕೊಟ್ಟಿದೆಯಲ್ಲವೇ ! ನಾನು ಅದೇ ರೀತಿ ಕೊಡುತ್ತೇನೆ. ದೇವರು: ಸರಿ..

ಮರುದಿನ ದೇವರು ಒಂದು ಹಸುವನ್ನು ಸೃಷ್ಟಿಸಿದ

ದೇವರು: ನೀನು ರೈತನ ಜತೆಗೆ ಹೊಲಗಳಿಗೆ ಹೋಗಿ ನಿತ್ಯ ಬಿಸಿಲಿನಲ್ಲಿ ಕಷ್ಟಪಟ್ಟು ಸಂಜೆ ಹಾಲು ಕೊಡುತ್ತಾ, ರೈತನಿಗೆ ಸಹಾಯ ಮಾಡು. ನಿನಗೆ 60 ವರ್ಷ ಆಯಸ್ಸು ನೀಡುತ್ತಿದ್ದೇನೆ.

ಹಸು: 60 ವರ್ಷ ಈ ಬಿಟ್ಟಿ ಚಾಕರಿ ನಾನು ಮಾಡಲ್ಲ. ನನಗೆ ಸಹ 20 ವರ್ಷಗಳು ಕೊಟ್ಟು ಉಳಿದ 40 ವರ್ಷ ನೀನೇ ತೆದುಕೋ...

ದೇವರು: ಸರಿ..

ಮರುದಿನ ದೇವರು ಮನುಷ್ಯನನ್ನು ಸೃಷ್ಟಿಸಿದ.

ದೇವರು: ತಿನ್ನು, ಕುಡಿ, ಆಡು, ಮದುವೆಯಾಗು, ನಿನ್ನ ಜೀವನ ಆನಂದಿಸು. ನಾನು ನಿನಗೆ 20 ವರ್ಷ ಆಯಸ್ಸು ನೀಡುತ್ತಿದ್ದೇನೆ.

ಮನುಷ್ಯ: ಏನಿದು ಅನ್ಯಾಯ ಸ್ವಾಮಿ. ಕೇವಲ 20 ವರ್ಷವೇ. ನನ್ನ 20 ವರ್ಷದ ಜತೆಗೆ ಹಸು ನಿಮಗೆ ಕೊಟ್ಟ 40, ಕೋತಿ ಮತ್ತು ನಾಯಿ ಕೊಟ್ಟ 10+10 ಒಟ್ಟು: 80 ವರ್ಷ ಬೇಕು...

ದೇವರು : ಸರಿ

ಹಾಗಾಗಿಯೇ ಮೊದಲ 20 ವರ್ಷ ಮನುಷ್ಯ ತಿನ್ನುತ್ತಿದ್ದಾನೆ, ನಿದ್ರಿಸುತ್ತಿದ್ದಾನೆ, ಆಟ ಆಡುತ್ತಿದ್ದಾನೆ, ಆನಂದಿಸುತ್ತಿದ್ದಾನೆ.. ಬಳಿಕ 40 ವರ್ಷಗಳ ಕಾಲ ಹಸು ಮಾಡುತ್ತಿರುವಂತೆ ಕುಟುಂಬಕ್ಕೆ ಸಹಾಯ ಮಾಡಲು ಗೊಡ್ಡು ಚಾಕರಿ ಮಾಡುತ್ತಿದ್ದಾರೆ. ಆ ಬಳಿಕ 10 ವರ್ಷ ಕಪಿಚೇಷ್ಟೆ ಮಾಡುತ್ತಾ ಮೊಮ್ಮಕ್ಕಳು, ಮಕ್ಕಳನ್ನು ನಗಿಸುತ್ತಿದ್ದಾನೆ...ನಂತರದ 10... ಮನೆ ಮುಂದೆ ಕುಳಿತು ಹೋಗಿ ಬರುವವರನ್ನು ನೋಡಿ ಅರಚಾಡುತ್ತಿರುತ್ತಾನೆ....
ಮನುಷ್ಯನ ಜೀವನ ಎಂದರೆ ಇದೇ...

No comments