Header Ads

test

ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು! ಬಿಜೆಪಿಗೆ 14 ಮಂದಿ ಕಾಂಗ್ರೆಸ್ ಶಾಸಕರ ಬೆಂಬಲ, ಜೆಡಿಎಸ್ ಶಾಸಕರು!

ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಮತ್ತೆ ಮತ್ತೆ ಬಿಕ್ಕಟ್ಟು ತಲೆದೋರುತ್ತಿದ್ದು ಇಡೀ ದೇಶದ ಗಮನಸೆಳೆಯುತ್ತಿದೆ. ಅತ್ಯಂತ ಕಡಿಮೆ ಬಹುಮತ ಪಡೆದು ಸರಕಾರವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪಟಾಲಂನಿಂದ ಕಾಂಗ್ರೆಸ್, ಜೆಡಿಎಸ್ ಪಕ್ಷದ 14 ಮಂದಿ ಶಾಸಕರು ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದಿರುವುದಾಗಿ ತಿಳಿಸಿ ಒಮ್ಮೆಲೆ ಕಾಣಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಚುನಾವಣೆ ಸಮಯದಲ್ಲಿ ರೆಸಾರ್ಟ್ ರಾಜಕೀಯ ಮಾಡಿ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಈಗ ಇದ್ದಕ್ಕಿದ್ದಂತೆ ಶಾಸಕರು ಕೈತಪ್ಪಿ ಹೋಗಿರುವುದು ಮೈತ್ರಿ ಸರಕಾರ ಇಕ್ಕಟ್ಟಿಗೆ ಸಿಕ್ಕಿ ಒದ್ದಾಡುವಂತಾಗಿದೆ.


ಈಗಾಗಲೆ ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲಾಗಿದೆ. ಕೆಲವರು ಮೈತ್ರಿ ಸರಕಾರಕ್ಕೆ ಬೆಂಬಲ ಹಿಂಪಡೆದು ಬಿಜೆಪಿಗೆ ಬೆಂಬಲ ನೀಡಲು ಸಿದ್ಧವಾಗಿರುವುದಾಗಿ ಗೊತ್ತಾಗಿದೆ. ಕಾಂಗ್ರೆಸ್, ಜೆಡಿಎಸ್ ಮುಖಂಡರು ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರೂ ಸಹ ಅವರು ಸಂಪರ್ಕಕ್ಕೆ ಸಿಗದ ಕಾರಣ ಕರ್ನಾಟಕದ ಮೈತ್ರಿ ಸರಕಾರ ಉರುಳಿ ಹೋಗುವ ಸಾಧ್ಯತೆಗಳು ಇವೆ ಎಂಬ ಮಾತುಗಳು ರಾಜ್ಯ ರಾಜಕೀಯ ವಲಯದಲ್ಲಿ ಪ್ರಬಲವಾಗಿ ಕೇಳಿಬರುತ್ತಿವೆ.

ಇನ್ನೊಂದು ಕಡೆ ನಾಳೆ ಬಜೆಟ್​ ಮಂಡನೆಯಾಗಲಿದ್ದು, ಬಜೆಟ್​ ಮಂಡನೆಗೂ ಮುನ್ನ 9 ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್​ ಶಾಸಕಾಂಗ ಪಕ್ಷದ ವಿಶೇಷ ಸಭೆಯನ್ನು ಕರೆಯಲಾಗಿದೆ. ಈ ಸಭೆಗೆ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು. ಯಾರೇ ತಪ್ಪಿಸಿಕೊಂಡರೆ, ಅವರಯ ಸ್ವ-ಇಚ್ಛೆಯಿಂಂದ ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವದಿಂದ ಬಿಟ್ಟಬಿಡಲು ಇಚ್ಛಿಸಿದ್ದಿರಾ ಎಂದು ಪರಿಣಗಣಿಸಿ, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಭಾರತೀಯ ದಂಡಸಂಹಿಯತೆ ಅನುಚೇದ 10ರ (ಆ್ಯಂಟಿ ಡಿಫೆನ್ಸ್​ ಲಾ) ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಪತ್ರಮುಖೇನ ಎಲ್ಲ ಶಾಸಕರಿಗೆ ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಅವರು ಹೂಡಿರುವ ಈ ಆ್ಯಂಟಿ ಡಿಫೆನ್ಸ್​ ಲಾ ಬ್ರಹ್ಮಾಸ್ತ್ರದಿಂದ ಕಕ್ಕಾಬಿಕ್ಕಿಯಾಗಿರುವ ಅತೃಪ್ತ ಶಾಸಕರು ನಾಳೆ ನಡೆಯುವ ಸಿಎಲ್​ಪಿ ಸಭೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಅವರ ಮಾಸ್ಟರ್ ಪ್ಲಾನ್​ನಿಂದಾಗಿ ಹಲವು ದಿನಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಕಾಂಗ್ರೆಸ್​ ಶಾಸಕರು ಮುಂಬೈ ಹೋಟೆಲ್​ನ 10 ಲಕ್ಷ ಬಿಲ್​ ಕಟ್ಟಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಬಿಜೆಪಿ ನಾಯಕರ ಸೂಚನೆ ಮೇರೆಗೆ ಸಿಎಲ್ಪಿ ಸಭೆಗೆ ಅತೃಪ್ತ ಶಾಸಕರು ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

No comments