Header Ads

test

107 ವರ್ಷಗಳ ಈ ತಿಮ್ಮಕ್ಕ ಭಾವಿ ತಲೆಮಾರಿಗಾಗಿ ಮಾಡಿದ ಕೆಲಸಕ್ಕೆ ಪದ್ಮಶ್ರೀ ಪ್ರಶಸ್ತಿ.. ಇಷ್ಟಕ್ಕೂ ಇವರುಮಾಡಿದ್ದಾದರೂ ಏನು ಗೊತ್ತಾ?

ನಾವು ಒಂದೆರಡು ಗಿಡಗಳನ್ನು ಬೆಳೆಸಿದರೇನೇ ಏನೋ ಹೆಮ್ಮೆ ಎಂಬಂತೆ ಫೀಲಾಗುತ್ತೇವೆ. ಆ ಗಿಡ ಬೆಳೆದು ದೊಡ್ಡದಾದ ಬಳಿಕ ಆ ಗಿಡವನ್ನು ನಾನೇ ನೆಟ್ಟಿದ್ದು, ಈಗ ಅದು ನಾಲ್ಕು ಮಂದಿಗೆ ನೆರಳನ್ನು ನೀಡುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ಒಂದು ಗಿಡ ಆರಂಭದ ಹಂತದಲ್ಲಿ ಅದನ್ನು ತುಂಬ ಎಚ್ಚರಿಕೆಯಿಂದ ಬೆಳೆಸಬೇಕಾಗುತ್ತದೆ. ಅದನ್ನು ಕಾಪಾಡದಿದ್ದರೆ ದನಕರುಗಳು ಆ ಗಿಡವನ್ನು ತಿಂದು ಹಾಕುವ ಸಾಧ್ಯತೆಗಳಿರುತ್ತವೆ. ಆದರೆ ಒಂದು ಗಿಡವನ್ನು ಬೆಳೆಸಿ ಅಷ್ಟೆಲ್ಲಾ ಎಚ್ಚರಿಕೆಯಿಂದ ಮಗುವಿನಂತೆ ನೋಡಿಕೊಳ್ಳುವುದು ಯಾರಿಂದ ಸಾಧ್ಯ ಹೇಳಿ. ಸರಕಾರಗಳು ಪ್ರತಿ ವರ್ಷ ಸಾವಿರಾರು, ಲಕ್ಷಾಂತರ ಗಿಡಗಳನ್ನು ನೆಡುತ್ತಿದ್ದರೂ ಅವುಗಳಲ್ಲಿ ನೂರರಷ್ಟು ಗಿಡಗಳು ಸಹ ಉಳಿಯುತ್ತಿಲ್ಲ ಎಂಬುದು ದುರಂತ.



ಅವುಗಳ ಬಗ್ಗೆ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ ಸಹ ಅವು ನಾಶ ಆಗುತ್ತಲೇ ಇರುತ್ತವೆ. ಆದರೆ ನಮ್ಮ ರಾಜ್ಯದ ತಿಮ್ಮಕ್ಕ ಮಾತ್ರ 400 ಗಿಡಗಳನ್ನು ನೆಟ್ಟು ಅವುಗಳನ್ನು ಹೆತ್ತ ಮಕ್ಕಳಂತೆ ನೋಡಿಕೊಂಡು, ಅವುಗಳಿಗೆ ಪ್ರತಿ ದಿನ ನೀರು ಹಾಕಿ ಎಚ್ಚರಿಕೆಯಿಂದ ನೋಡಿಕೊಂಡಳು. ಮಕ್ಕಳು ಇಲ್ಲದ ತಿಮ್ಮಕ್ಕ ಆ ಗಿಡಗಳನ್ನೇ ಮಕ್ಕಳಂತೆ ಬೆಳೆಸಿದರು. ಮಕ್ಕಳಿಗಿಂತಲೂ ಎಚ್ಚರಿಕೆಯಿಂದ ಪೋಷಣೆ ಮಾಡಿದರು. ತಿಮ್ಮಕ್ಕ ಬಹಳಷ್ಟು ವರ್ಷಗಳ ಹಿಂದೆ ಬೆಳೆಸಿದ ಗಿಡಗಳು ಈಗ ನಾಲ್ಕು ಮಂದಿಗಷ್ಟೇ ಅಲ್ಲ ನಾಲ್ಕು ಸಾವಿರ ಮಂದಿಗೆ ಆಸರೆ, ನೆರಳನ್ನು ನೀಡುತ್ತಿವೆ.

107 ವರ್ಷಗಳ ತಿಮ್ಮಕ್ಕ ಇನ್ನೂ ಸಹ ಗಿಡಗಳ ವಿಚಾರದಲ್ಲಿ ತುಂಬಾ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದಾರೆ. ಚಿಕ್ಕಂದಿನಿಂದ ಸಹ ಪ್ರಕೃತಿ ಎಂದರೆ ಮಮಕಾರ ಬೆಳೆಸಿಕೊಂಡಿದ್ದರು. ಮೇಕೆಗಳು, ಕುರಿಗಳನ್ನು ಮೇಯಿಸುತ್ತಾ ಬೆಳೆದ ತಿಮ್ಮಕ್ಕ ಗಿಡಗಳನ್ನು ಬೆಳೆಸಬೇಕೆಂಬ ಬಯಕೆ ಬಹಳ ಕಾಲದ ಹಿಂದೆಯೇ ಬಂದಿತ್ತು. ಆದರೆ ಆಕೆಗೆ ಸೂಕ್ತ ಬೆಂಬಲ ಇಲ್ಲದ ಕಾರಣ ಚಿಕ್ಕಂದಿನ ತನ್ನ ಆಲೋಚನೆಯನ್ನು ಪಕ್ಕಕ್ಕಿಟ್ಟಿದ್ದರು.

ಆದರೆ ಮದುವೆ ಆದ ಬಳಿಕ ಮಕ್ಕಳು ಇಲ್ಲದ ಕಾರಣ ಗಿಡಗಳನ್ನು ಬೆಳೆಸಿ ಅವುಗಳನ್ನು ಮಕ್ಕಳಂತೆ ಸಾಕಿ ಸಲುಹಿದರು. 107 ವರ್ಷದ ವಯಸ್ಸಿನಲ್ಲೂ ಸಹ ಆಕೆ ತನ್ನ ಗಿಡಗಳನ್ನು ಮಕ್ಕಳಂತೆ ನೋಡಿಕೊಂಡು ಸಂಭ್ರಮಿಸುತ್ತಾರೆ. ಹಾಗಾಗಿಯೇ ತಿಮ್ಮಕ್ಕನಿಗೆ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಕೋಟ್ಯಂತರ ಮಂದಿಗೆ ಆದರ್ಶವಾದ ತಿಮ್ಮಕ್ಕನಿಗೆ ಪದ್ಮಶ್ರೀ ಪ್ರಶಸ್ತಿಗಿಂತಲೂ ದೊಡ್ಡ ಪ್ರಶಸ್ತಿ ನೀಡಬೇಕಾಗಿತ್ತು ಎಂಬ ಅಭಿಪ್ರಾಯ ಅಭಿಮಾನಿಗಳಿಂದ ಬರುತ್ತಿದೆ.

No comments