Header Ads

test

100 ವರ್ಷದ ಈ ತಾತನಿಗೆ ಮಕ್ಕಳ ಹೆಸರು ನೆನಪಿಲ್ಲ, ಆದರೆ ಅದು ಮಾತ್ರ ನೆನಪಿದೆ..!

ಕಲೆಯನ್ನು ನಂಬಿದವ ಎಂದಿಗೂ ನಷ್ಟಹೋಗಲ್ಲ ಎಂಬ ಒಂದು ಮಾತಿದೆ. ಕಲೆ ಏನೇ ಆದರೂ ಅದರಲ್ಲಿ ಮುಂದೆ ಬಂದರೆ ಖಂಡಿತ ಊಟ ಹಾಕುತ್ತದೆ. ಅದರ ಜತೆಗೆ ಹೆಸರನ್ನೂ ತಂದು ಕೊಡುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಕೆಲವು ಕಲೆಗಳು ನಶಿಸಿ ಹೋಗುತ್ತಿದ್ದರೂ ಸಹ ಅವನ್ನೇ ನಂಬಿಕೊಂಡವರು ಅವುಗಳಿಂದ ಬಹಳಷ್ಟು ಪಡೆದುಕೊಳ್ಳುತ್ತಿರುತ್ತಾರೆ. ಕೆಲವರು ಮಾತ್ರ ಹಳೆಯ ಕಲೆಯನ್ನು ಕೈಬಿಡುತ್ತಿದ್ದಾರೆ. ಸುಮಾರು 60 ವರ್ಷಗಳ ಕಾಲ ಯಕ್ಷಗಾನ ಬಣ್ಣ ಹಚ್ಚಿದ 100 ವರ್ಷದ ವೆಂಕಟ್ರಾಯ ನಾಯಕ್ ತನ್ನ ಜೀವನವನ್ನೆಲ್ಲಾ ಮರೆತರೂ ಸಹ ತನ್ನನ್ನು ಉಳಿಸಿದ ಕಲೆಯನ್ನು ಮಾತ್ರ ಮರೆತಿಲ್ಲ. ಇದೇ ನೋಡಿ ಕಲೆಗಿರುವ ದೊಡ್ಡತನ ಎನ್ನಬಹುದು.


ನಮ್ಮ ರಾಜ್ಯದ ವೆಂಕಟ್ರಾಯ ನಾಯಕ್ ಇತ್ತೀಚೆಗೆ ಸೆಂಚುರಿ ಹೊಡೆದು ನಾಟೌಟ್ ಆದರು. ಆರೋಗ್ಯ ಎಲ್ಲವೂ ಚೆನ್ನಾಗಿದ್ದರೂ ಇವರಿಗೆ ಆಲ್ಜಿಮರ್ಸ್ ಎಂದರೆ ಮರೆವಿನ ಖಾಯಿಲೆ ಇದೆ. ಹಾಗಾಗಿ ಬಹಳಷ್ಟು ಸಂಗತಿಗಳನ್ನು ಮರೆಯುತ್ತಿರುತ್ತಾರೆ. ಕೊನೆಗೆ ತನ್ನ ಮಕ್ಕಳ ಹೆಸರುಗಳನ್ನೇ ಮರೆತುಹೋದರು. ಸದ್ಯಕ್ಕೆ ಅವರ ಜೀವನವೆಲ್ಲಾ ಸಹ ಬಿಳಿಯ ಕಾಗದಂತೆ ತುಂಬಿದ ನೋಟ್‌ಬುಕ್ ರೀತಿಯದು. ಅವರಿಗೆ ಯಾವುದೂ ನೆನಪಿಲ್ಲ ಎಂದು ಕುಟುಂಬದ ಸದಸ್ಯರು ಎಂದುಕೊಂಡರು. ಇತ್ತೀಚೆಗೆ ಅವರ ಪತ್ನಿ ಮೃತಪಟ್ಟರು. ಆ ಸಂದರ್ಭದಲ್ಲಿ ಕುಟುಂಬದ ಸದಸ್ಯರೆಲ್ಲ ವೆಂಕಟ್ರಾಯರ ಯಕ್ಷಗಾನ ಕೇಳಬೇಕು ಎಂದುಕೊಂಡರು. ಅವರೆಲ್ಲಗೂ ಗೊತ್ತು ಅವರು ಎಲ್ಲವನ್ನೂ ಮರೆತಿರುತ್ತಾರೆ, ಹಾಡಲ್ಲ ಎಂದು, ಆದರೂ ಸಹ ಪ್ರಯತ್ನಿಸೋಣ ಎಂದು ಅವರೊಂದಿಗೆ ಹಾಡಿಸಿದರು.

ಮಕ್ಕಳ ಹೆಸರು, ತನ್ನ ಹಿಂದಿನದನ್ನೆಲ್ಲಾ ನೆನಪಿಟ್ಟುಕೊಳ್ಳದ ವೆಂಕಟ್ರಾಯ ನಾಯಕ್ ತಾನು ಚಿಕ್ಕಂದಿನಿಂದ ಹಾಡುತ್ತಿದ್ದ ಯಕ್ಷಗಾನ ಹಾಡುಗಳನ್ನು ಮಾತ್ರ ಮರೆತಿರಲಿಲ್ಲ. ತಾಳ ಹಾಕುತ್ತಾ ಇನ್ನಷ್ಟು ಜೋಷ್ ಆಗಿ ಹಾಡುಗಳನ್ನು ಹಾಡಿದರು. ಅವರ ಹಾಡಿಗೆ ಕುಟುಂಬಿಕರೆಲ್ಲಾ ಅವಾಕ್ಕಾದರು. ಕನಿಷ್ಠಪಕ್ಷ ಹೆಸರುಗಳು ನೆನಪಿನಲ್ಲಿಲ್ಲ.. ಅಂತಹವರಿಗೆ ಹಾಡುಗಳು ನೆನಪಿನಲ್ಲಿರುವುದು ಕಂಡು ಎಲ್ಲರನ್ನೂ ಚಕಿತಗೊಳಿಸಿದೆ.

ಅವರು ಕಲೆಯನ್ನು ಎಷ್ಟೆಲ್ಲಾ ಆರಾಧಿಸಿದರೋ ಇದನ್ನು ನೋಡಿದರೆ ಅರ್ಥವಾಗುತ್ತದೆ. ತನಗೆ ಜೀವನ ಕೊಟ್ಟಂತಹ ಕಲೆಯನ್ನು ಅವರು ಮರೆತಿರಲಿಲ್ಲ. ಅವರಿಗೆ ಬಂದ ಖಾಯಿಲೆ ಸಹ ಅವರಿಂದ ಕಲೆಯನ್ನು ದೂರ ಮಾಡಿರಲಿಲ್ಲ. ಕಲೆ ಎಂಬುದು ಜೀವನದಲ್ಲಿ ಭಾಗವಾದವರು ಅದೆಷ್ಟೇ ತೊಂದರೆ ಬಂದರೂ ಅದನ್ನು ಹಾಗೆಯೇ ಉಳಿಸಿಕೊಂಡಿರುತ್ತಾರೆ ಎಂಬುದಕ್ಕೆ ಸಾಕ್ಷಿ ಈ ಘಟನೆ.

No comments