Header Ads

test

ಜಗತ್ತಿನಲ್ಲೇ ಅತ್ಯಂತ ವಿಚಿತ್ರ ಆಕ್ಸಿಡೆಂಟ್.ಸೈಕಲನ್ನು ಡಿಕ್ಕಿ ಹೊಡೆ ಕಾರಿಗೆ ಭಾರಿ ಡ್ಯಾಮೇಜ್, ಸೈಕಲ್‌ಗೆ ಮಾತ್ರಏನೂ ಆಗಿಲ್ಲ..!watch video.!

ಎಲ್ಲಿಯಾದರೂ ಆಕ್ಸಿಡೆಂಟ್ ನಡೆದರೆ ದೊಡ್ಡ ವಾಹನದ ಕಾರಣ ಚಿಕ್ಕ ವಾಹನ ನಜ್ಜುಗುಜ್ಜಾಗುವುದನ್ನು ನಾವು ನೋಡುತ್ತಿರುತ್ತೇವೆ. ಕಾರು, ಲಾರಿ ಡಿಕ್ಕಿ ಹೊಡೆದುಕೊಂಡರೆ ಕಾರಿಗೆ ಹೆಚ್ಚು ಡ್ಯಾಮೇಜ್ ಆಗುತ್ತದೆ. ಅದೇ ಕಾರು ಬೈಕ್ ಡಿಕ್ಕಿ ಹೊಡೆದುಕೊಂಡರೆ ಬೈಕ್ ಪೀಸ್ ಪೀಸ್ ಆಗುತ್ತದೆ. ಬೈಕ್ ಮತ್ತು ಸೈಕಲ್ ಡಿಕ್ಕಿ ಹೊಡೆದುಕೊಂಡರೆ ಯಾವುದಕ್ಕೆ ಹೆಚ್ಚು ಡ್ಯಾಮೇಜ್ ಆಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಇನ್ನು ಕಾರಿಗೆ ಸೈಕಲ್ ಗುದ್ದಿದರೆ ನಟರಾಜ ಸೈಕಲ್ ಪರಿಸ್ಥಿತಿ ಏನಾಗುತ್ತದೆ ಎಂಬುದು ಗೊತ್ತೇ ಇದೆ. ಆದರೆ ವಿಚಿತ್ರ ಎಂದರೆ ಪರಿಸ್ಥಿತಿ ಮಾತ್ರ ರಿವರ್ಸ್ ಆಗಿರುವುದು. ಚಿಕ್ಕ ವಾಹವನ್ನು ಡಿಕ್ಕಿ ಹೊಡೆದ ದೊಡ್ಡ ವಾಹನಕ್ಕೆ ಭಾರಿ ಡ್ಯಾಮೇಜ್ ಆಯಿತು. ಇದು ಜಗತ್ತಿನಲ್ಲೇ ಅತ್ಯಂತ ವಿಚಿತ್ರ, ವಿಸ್ಮಯವಾದ ಆಕ್ಸಿಡೆಂಟ್ ಎಂಬುದು ಗಮನಾರ್ಹ ಸಂಗತಿ.ಆಕ್ಸಿಡೆಂಡ್‌ನ ಸಂಪೂರ್ಣ ವಿವರಗಳನ್ನು ನೋಡಿದರೆ... ಚೀನಾದಲ್ಲಿನ ಷೆಂಜೆನ್ ನಗರದಲ್ಲಿ ಈ ವಿಚಿತ್ರ ಆಕ್ಸಿಡೆಂಟ್ ನಡೆದಿದೆ. ಸ್ವಲ್ಪ ಸ್ಲೋ ಆಗಿ ಬರುತ್ತಿದ್ದ ಕಾರನ್ನು ತುಂಬಾ ಸ್ಪೀಡ್ ಆಗಿ ಬರುತ್ತಿದ್ದ ಸೈಕಲ್ ಮೇಲಿನ ವ್ಯಕ್ತಿ ಡಿಕ್ಕಿ ಹೊಡೆದ. ಆ ರಭಸಕ್ಕೆ ಸೈಕಲ್ ಮೇಲಿದ್ದ ವ್ಯಕ್ತಿ ಹಾರಿ ಕೆಳಗೆ ಬಿದ್ದು ಬಿಟ್ಟ. ಆದರೆ ಸೈಕಲ್ ಮಾತ್ರ ಕಾರಿನಲ್ಲಿ ಸಿಕ್ಕಿ ಹಾಕಿಕೊಂಡಿತು. ಸೈಕಲ್‌ಗೆ ಅಷ್ಟಾಗಿ ಡ್ಯಾಮೇಜ್ ಏನೂ ಆಗಿರಲಿಲ್ಲ. ಆದರೆ ಕಾರು ಮಾತ್ರ ತುಂಬಾ ಡ್ಯಾಮೇಜ್ ಆಗಿತ್ತು. ಮುಂದಿನ ಬಂಪರ್ ಒಳಕ್ಕೆ ನುಗ್ಗಿದ್ದರಿಂದ ಹೆಡ್ ಲೈಟ್ಸ್ ಸಹ ಚೂರು ಚೂರಾಗಿದ್ದವು.

ಕಾರಿನ ಬಂಪರ್ ಬೆಂಡ್ ಬರುವಂತೆ ಸೈಕಲ್ ಅಷ್ಟು ವೇಗವಾಗಿ ಡಿಕ್ಕಿ ಹೊಡೆದಿತ್ತು. ಆದರೆ ಈ ಆಕ್ಸಿಡೆಂಟ್‌ನಲ್ಲಿ ಸೈಕಲ್‌ಗೆ ಮಾತ್ರ ಯಾವುದೇ ರೀತಿಯ ಡ್ಯಾಮೇಜ್ ಆಗದಿರುವುದು ಚರ್ಚಾಸ್ಪದ ಸಂಗತಿಯಾಗಿದೆ. ಅದೇನು ವಿಶೇಷವಾದ ಸೈಕಲ್ ಅಲ್ಲ ಸಾಧಾ ಸೀದಾ ಸಾಮಾನ್ಯ ಸೈಕಲ್. ಆದರೂ ಸಹ ಆ ಸೈಕಲ್ ಡ್ಯಾಮೇಜ್ ಆಗಿಲ್ಲ. ಆದರೆ ಕಾರು ಮಾತ್ರ ಡ್ಯಾಮೇಜ್ ಆಗಿ ನೋಡುಗರನ್ನು ಚಕಿತಗೊಳಿಸಿದೆ. ಕಾರು ಡ್ಯಾಮೇಜ್ ಆದ ಕಾರಣ ಆ ಕಾರಿನ ಕಂಪೆನಿ ಯಾವುದು ಎಂದು ಎಲ್ಲರೂ ಸರ್ಚ್ ಮಾಡಲು ಆರಂಭಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಈ ಕಾರಿಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳನು ನೆಟ್ಟಿಗರು ಸಿಕ್ಕಾಪಟ್ಟೆ ಹುಡುಕುತ್ತಿದ್ದಾರೆ. ಈ ವಿಚಿತ್ರ ಆಕ್ಸಿಡೆಂಟ್ ಮತ್ತೆ ಎಂದೂ ಎಲ್ಲೂ ನಡೆಯಲ್ಲ ಅನ್ನಿಸುತ್ತದೆ..!

 watch video:

https://www.youtube.com/watch?time_continue=2&v=dVJqgd_C45o

No comments