Header Ads

test

FUNNY: ಈ 13 ಸಂದರ್ಭಗಳಲ್ಲಿ ಹೆಂಡತಿ ಗಂಡನನ್ನು "ಏನೂಂದ್ರೆ" ಎಂದು ಕರೆದರೆ ಅರ್ಥ ಏನು ಗೊತ್ತಾ..?ನೋಡಿ ಹೊಟ್ಟೆ ತುಂಬ ನಗ್ರಿ!

#1. ಬಾತ್‍ ರೂಮ್‍ನಿಂದ "ಏನೂಂದ್ರೆ"
ಎಂದು ಕರೆದಳು ಎಂದರೆ
ಜಿರಳೆ ಎಂದೂ ಅದನ್ನು ಹೊಡೆಯಬೇಕು ಎಂದರ್ಥ...

#2. 🎲 ರೆಸ್ಟೋರೆಂಟ್‌ನಲ್ಲಿ ತಿಂದ ಬಳಿಕ "ಏನೂಂದ್ರೆ"
ಎಂದು ಕರೆದಳು ಎಂದರೆ
ಬಿಲ್ ಕಟ್ಟಿ ಎಂದರ್ಥ



#3. 🎲 ಕಲ್ಯಾಣ ಮಂಟಪದಲ್ಲಿ "ಏನೂಂದ್ರೆ"
ಎಂದು ಕರೆದಳು ಎಂದರೆ
ಪರಿಚಯದವರು ಬಂದಿದ್ದಾರೆ ಎಂದರ್ಥ

#4. 🎲 ಬಟ್ಟೆ ಅಂಗಡಿಯಲ್ಲಿ "ಏನೂಂದ್ರೆ"
ಎಂದು ಕರೆದಳು ಎಂದರೆ
ಹುಡುಕುತ್ತಿರುವ ಸೀರೆ ಸಿಕ್ಕಿದೆ ಎಂದರ್ಥ

#5. 🎲 ಗಾಡಿಯಲ್ಲಿ ಹೋಗುತ್ತಿದ್ದಾಗ "ಏನೂಂದ್ರೆ"
ಎಂದು ಕರೆದಳು ಎಂದರೆ
ಹೂವು ತಗೋಬೇಕು ಎಂದರ್ಥ

#6. 🎲 ಆಸ್ಪತ್ರೆಗೆ ಹೋದ ಬಳಿಕ "ಏನೂಂದ್ರೆ"
ಎಂದು ಕರೆದಳು ಎಂದರೆ
ವೈದ್ಯರ ಜತೆಗೆ ನೀವು ಮಾತನಾಡಲು ಬನ್ನಿ ಎಂದರ್ಥ

#7. 🎲 ಬಾಗಿಲ ತನಕ ಬಂದು ಹೊರೆಗೆ ನೋಡಿ "ಏನೂಂದ್ರೆ"
ಎಂದು ಕರೆದಳು ಎಂದರೆ
ಯಾರೋ ಅಪರಿಚಿತರು ಬಂದಿದ್ದಾರೆ ಎಂದರ್ಥ..

#8. 🎲 ಬೀರು ಮುಂದೆ ನಿಂತು "ಏನೂಂದ್ರೆ"
ಎಂದು ಕರೆದಳು ಎಂದರೆ
ಹಣ ಬೇಕು ಎಂದರ್ಥ

#9. 🎲 ಡೈನಿಂಗ್ ಟೇಬಲ್ ಬಳಿ ನಿಂತು "ಏನೂಂದ್ರೆ"
ಎಂದು ಕರೆದಳು ಎಂದರೆ
ಊಟಕ್ಕೆ ಬನ್ನಿ ಎಂದರ್ಥ

#10. 🎲 ಊಟ ಮಾಡುವಾಗ "ಏನೂಂದ್ರೆ"
ಎಂದು ಕರೆದಳು ಎಂದರೆ
ಊಟ ಹೇಗಿದೆ ಎಂದು ಕೇಳುತ್ತಿದ್ದಾಳೆ ಎಂದರ್ಥ..

#11. 🎲 ಕನ್ನಡಿ ಮುಂದೆ ನಿಂತು "ಏನೂಂದ್ರೆ"
ಎಂದು ಕರೆದಳು ಎಂದರೆ
ಈ ಸೀರೆಯಲ್ಲಿ ತಾನು ಹೇಗಿದ್ದೇನೆ ಎಂದು ತಿಳಿಸಿ ಎಂದರ್ಥ..

#12. 🎲 ನಡೆದುಕೊಂಡು ಹೋಗುವಾಗ "ಏನೂಂದ್ರೆ"
ಎಂದು ಕರೆದಳು ಎಂದರೆ
ಬೆರಳು ಹಿಡಿದು ನಡೆಯಿರಿ ಎಂದರ್ಥ..

#13. 🎲 ಅನು ದಿನ ತನ್ನ ಬಳಿ ಹೇಳಿದರೂ
ನೀವು ಕೊನೆಯ ಉಸಿರು ತೆಗೆದುಕೊಳ್ಳುವಾಗ "ಏನೂಂದ್ರೆ"
ಎಂದು ಕರೆದಳು ಎಂದರೆ
ನಿನ್ನೊಂದಿಗೆ ನನ್ನನ್ನೂ ಕರೆದೊಯ್ಯಿರಿ ಎಂದರ್ಥ..

ಪ್ರತಿ ದಿನ "ಏನೂಂದ್ರೆ" ಎಂದು ಕರೆಯುತ್ತಿದ್ದಾಳೆ ಎಂದು ಅಪಾರ್ಥ ಮಾಡಿಕೊಳ್ಳುವದಲ್ಲ.. ಅರ್ಥ ಮಾಡಿಕೊಂಡು ಹೊಂದಿಕೊಳ್ಳುವುದರಲ್ಲೇ ಅನಂತ ಆನಂದ ಇದೆ ಎಂದು ತಿಳಿದರೆ ಜೀವನ ಸಂತೋಷಕರವಾಗಿ ಇರುತ್ತದೆ.

No comments