Header Ads

test

ಪ್ರಗತಿಪರ ರೈತ ಶಶಿಕುಮಾರ್ ಬಿಗ್ ಬಾಸ್ ಕನ್ನಡ ವಿನ್ನರ್, ಮುಂದೇನು ಮಾಡುತ್ತಾರೆ?

ಇವರು ಪ್ರಗತಿಪರ ರೈತ. ಆದರೂ ನೋಡಲು ಒಳ್ಳೆಯ ಚಾಕೋಲೇಟ್ ಹೀರೋ ತರಹ ಇದ್ದಾರೆ. ಈ ಬಾರಿಯ ಬಿಗ್ ಬಾಸ್ ಕನ್ನಡ ಆರನೇ ಸೀಸನ್‌ನಲ್ಲಿ ರೂ.50 ಲಕ್ಷ ಗೆದ್ದಿದ್ದು ಮುಂದೆ ಆ ಹಣವನ್ನು ತನ್ನ ಕೃಷಿ ಪ್ರಯೋಗಗಳಿಗೆ ಬಳಸುವುದಾಗಿ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಇವರ ಸ್ವಂತ ಊರು. ಆಧುನಿಕ ರೈತನಾಗಿರುವ ಇವರು ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತುಂಬಾ ಸೆನ್ಸಿಬಲ್ ಸ್ಪರ್ಧಿ ಎಂದೇ ಹೆಸರಾದವರು. ಯಾವ ಜಗಳ, ತರಲೆ-ಕೀಟಲೆಗಳಿಲ್ಲದೇ ಪಕ್ಕಾ ಸಿಂಪಲ್ ಬಾಯ್ ಎನ್ನುವಂತಿದ್ದ ಶಶಿಕುಮಾರ್ ಇಂದು ಇಡೀ ಕರ್ನಾಟಕವೇ ಅಚ್ಚರಿಯಿಂದ ತಲೆ ಎತ್ತಿ ನೋಡುವಂತೆ ಮಾಡಿದ್ದಾರೆ.



ರೈತನಾದರೂ ನೋಡಿದರೆ ಸಿನಿಮಾ ಹೀರೋ ತರಹ ಕಾಣುತ್ತಾರೆ ಶಶಿ ಕುಮಾರ್. ತಮ್ಮ ಮಗ್ಧತೆ, ವಿನಯಪೂರ್ವಕ ನಡವಳಿಕೆ ಮೂಲಕ ಶಶಿಕುಮಾರ್ ಮನೆಯ ಎಲ್ಲ ಸದಸ್ಯರುಗಳ ಬೆಂಬಲ ಪಡೆದು ತಮ್ಮ ಜರ್ನಿಯನ್ನು ಸರಳಗೊಳಿಸಿಕೊಂಡ ಬುದ್ದಿವಂತರು. ಶ್ರೀಸಾಮಾನ್ಯರಾಗಿದ್ದ ಶಶಿಕುಮಾರ್ ಬಿಗ್ ಬಾಸ್ ವಿನ್ನರ್ ಆಗಿರುವುದರ ಮೂಲಕ ಕರ್ನಾಟಕದ ತುಂಬ ಮನೆಮಾತಾಗಿದ್ದಾರೆ. ರೈತರೆಲ್ಲರ ಪ್ರತಿನಿಧಿಯಾಗಿ ಜನಪ್ರಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಶಶಿಕುಮಾರ್ ಇಂದು ಕರ್ನಾಟಕದ ರೈತರೆಲ್ಲ ಹೆಮ್ಮೆ ಪಡುವಂತೆ ಸಾಧನೆ ಮಾಡಿದ್ದಾರೆ.

ರಾಜ್ಯದ ನವತರುಣರಿಗೆ ರೈತರೂ ಕೂಡ ಸೆಲೆಬ್ರೆಟಿಗಳಾಗಬಲ್ಲರು, ಸೆಲೆಬ್ರೆಟಿಗಳೇ ಎಂಬಹೊಸ ಸಂದೇಶವನ್ನು ಕೊಟ್ಟಿದ್ದಾರೆ ಎನ್ನಬಹುದು. ಶಶಿಕುಮಾರ್ ಬಿಗ್‌ ಮನೆಯ ಕ್ಯಾಪ್ಟನ್‌ ಆಗಿದ್ದಾಗ ಎಲಿಮಿನೇಷನ್‌ ಆಗಬೇಕಿದ್ದ ಒಬ್ಬ ಸ್ಪರ್ಧಿಯನ್ನು ಉಳಿಸಿಕೊಳ್ಳುವ ಅವಕಾಶ ಪಡೆದಿದ್ದರು. ಆ ವೇಳೆ, ಅವರು ಬಿಎಂಟಿಸಿ ನಿರ್ವಾಹಕರಾಗಿದ್ದ ಆನಂದ್ ಅವರನ್ನು ಉಳಿಸಿದ್ದರು . ನಾನು ಕೃಷಿ ಸಮಾಜದ ಬಗ್ಗೆ ತುಂಬಾ ಕಾಳಜಿ ಹೊಂದಿದ್ದೇನೆ. ಬಹಳಷ್ಟು ಯುವಕರಿಗೆ ಕೃಷಿ ಬಗ್ಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ನಾನು ಬಿಗ್ ಬಾಸ್ ಮನೆ ಸೇರಿಕೊಂಡಿದ್ದೇನೆ. ನಾನು ಈ ದಿಸೆಯನ್ನು ಏನೇನು ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಲು ಬದ್ಧವಾಗಿದ್ದೇನೆ" ಎಂದು ಮಾರ್ಮಿಕವಾಗಿ ನುಡಿದಿದ್ದರು. ಅವರ ಮೇರು ಮಟ್ಟದ ಕೃಷಿ ಕಾಳಜಿಯೇ ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಗೆಲುವಿನ ಟ್ರೋಫಿ ಹಿಡಿದೆತ್ತಲು ಸಹಾಯವಾಗಿದೆ ಎನ್ನಬಹುದು.

No comments