Header Ads

test

ಫಂಕ್ಷನ್‌ನಲ್ಲಿ ಆಕೆ ಬಳಿಗೆ ಬರುವ ಹೊತ್ತಿಗೆ ಸ್ನಾಕ್ಸ್ ಮುಗಿದವು..! ಆಕೆ ಏನು ಮಾಡಿದಳು ಎಂದು ಗೊತ್ತಾದರೆನಗಾಡ್ತೀರ.!

ನಿನ್ನೆ ನಾನೊಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಸುಮಾರು 50 ಮಂದಿ ಅತಿಥಿಗಳು ಕುರ್ಚಿಯಲ್ಲಿ ಆಸೀನರಾಗಿದ್ದರು.ನಾನು ಮೊದಲ ಸಾಲಿನಲ್ಲಿ ಕುಳಿತೆ.. ಹಸಿವು ಅನ್ನಿಸಿತು. ಸ್ವಲ್ಪ ಸಮಯದ ಬಳಿಕ ಒಬ್ಬಾಕೆ ಟ್ರೇನಲ್ಲಿ ಸ್ನಾಕ್ಸ್ ತಂದು ಹಿಂದಿನ ಸಾಲಿನಿಂದ ಅತಿಥಿಗಳಿಗೆ ನೀಡಲು ಪ್ರಾರಂಭಿಸಿದಳು.ಮುಂದೆ ಕುಳಿತಿದ್ದ ನನ್ನ ಬಳಿಗೆ ಬರುವ ಹೊತ್ತಿಗೆ ಸ್ನಾಕ್ಸ್ ಮುಗಿದವು.ಬೇಸರ ಆಯಿತು.ನಿಧಾನಕ್ಕೆ ಎದ್ದು ಹಿಂದಿನ ಸಾಲಿನಲ್ಲಿ ಹೋಗಿ ಕುಳಿತೆ.


ಅಷ್ಟರಲ್ಲಿ ಇನ್ನೊಬ್ಬಾಕೆ ಕೂಲ್ ಡ್ರಿಂಕ್ಸ್ ತಂದು ಮುಂದಿನ ಸಾಲಿನಿಂದ ನೀಡಲು ಆರಂಭಿಸಿದಳು... ಅನುಮಾನಿಸಿದಂತೆ ಹಿಂದೆ ಬರುವಷ್ಟರಲ್ಲಿ ಅವು ಸಹ ಮುಗಿದವು.
ಕೋಪ ತಾಳಲಾರದೆ ಹೋಗೋಣ ಎಂದು ಎದ್ದು ನಿಂತುಕೊಂಡೆ.ಸರಿಯಾಗಿ ಅದೇ ಸಮಯಕ್ಕೆ ಮೂವರು ಮಹಿಳೆಯರು ಟ್ರೇನಲ್ಲಿ ಘಮ ಘಮ ಎನ್ನುವ ಅಡುಗೆಯನ್ನು ತೆಗೆದುಕೊಂಡು ಬಂದರು.. ಸ್ಮಾರ್ಟ್ ಆಗಿ ಆಲೋಚಿಸಿ ಈ ಸಲ ಮಧ್ಯದ ಸಾಲಿನಲ್ಲಿ ಕುಳಿತೆ.

ಒಬ್ಬಾಕೆ ಮುಂದಿನಿಂದ, ಇನ್ನೊಬ್ಬಾಕೆ ಹಿಂದಿನಿಂದ ಕೊಡಲು ಆರಂಭಿಸಿದರು.ಥ್ರಿಲ್ಲರ್ ಸಿನಿಮಾ ನೋಡುತ್ತಿದ್ದಂತೆ ಟೆನ್ಷನ್ ಅನ್ನಿಸಿತು.ಊಹಿಸಿದಂತೆ ಮಧ್ಯದ ಸಾಲಿಗೆ ಬರುವಷ್ಟರಲ್ಲಿ ಸಮಾಪ್ತಿ.

ಎಲ್ಲರೂ ತಿನ್ನುತ್ತಿದ್ದರೆ ಏನು ಮಾಡಬೇಕೋ ತೋಚದ ಅಯೋಮಯದಿಂದ ತಲೆ ತಗ್ಗಿಸಿ ಕೋಪದಿಂದ ನನ್ನ ಕೈಗಳ ಕಡೆಗೆ ನೋಡಿಕೊಂಡೆ.ಅದೇ ಸಮಯಕ್ಕೆ ಸರಿಯಾಗಿ ಮೂರನೇ ಮಹಿಳೆ ನನ್ನ ಬಳಿಗೆ ಬಂದು.ತನ್ನ ಕೈಯಲ್ಲಿದ್ದ ಬೌಲನ್ನು ತೋರಿಸಿ ತೆಗೆದುಕೊಳ್ಳಿ ಎಂಬಂತೆ ಹೇಳಿದಳು.. ಆತುರಾತುರವಾಗಿ ಬೌಲಿಗೆ ಕೈ ಹಾಕಿ ಹೊರಗೆ ತೆಗೆದೆ.ಅದೇನು ಗೊತ್ತಾ??

ಟೂತ್ ಪಿಕ್.ಹಲ್ಲಿನ ಸಂದುಗಳಲ್ಲಿ ಸಿಕ್ಕಿಕೊಂಡಿರುವ ಆಹಾರವನ್ನು ತೆಗೆಯುವ ಚಿಕ್ಕ ಕಡ್ಡಿ ಪುಳ್ಳೆಗಳು.ಛೀ.ಛೀ ಅನ್ನಿಸಿತು:

ಜೀವನದಲ್ಲಿ ನಿಮ್ಮ ಸ್ಥಾನವನ್ನು ಯಾವಾಗಲೂ ಬದಲಾಯಿಸಲು ಪ್ರಯತ್ನಿಸಬೇಡಿ. ದೇವರು ನೀವು ಎಲ್ಲಿದ್ದರೆ ಒಳಿತೋ ಅಲ್ಲೇ ನೀಡುತ್ತಾನೆ, ಆಗಲ್ಲ ಎಂದು ಆತುರ ಪಟ್ಟರೆ ಕೈಗೆ ಸಿಗುವುದು "ಟೂತ್ ಪಿಕ್"ಗಳು.

No comments