Header Ads

test

ಅತ್ಯಾಚಾರಿಯನ್ನು ಕಚ್ಚಿ ಯುವತಿಯನ್ನು ರಕ್ಷಿಸಿದ ಇರುವೆಗಳು...!

ಅಪಾಯದಲ್ಲಿರುವವರನ್ನು ರಕ್ಷಿಸಲು ಯಾರು ಬಂದರೂ ಆ ಸಮಯಕ್ಕೆ ಅವರೇ ದೇವರಿಗಿಂತಲೂ ಹೆಚ್ಚಾಗಿ ಕಾಣಿಸುತ್ತಾರೆ. ಓರ್ವ ಯುವತಿಯನ್ನು ಅತ್ಯಾಚಾರ ಮಾಡಬೇಕು ಎಂದುಕೊಂಡ ಒಬ್ಬ ನೀಚ ಆಸಾಮಿ. ಆಕೆ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದಂತೆ ಆಕೆಯ ಜತೆಗೆ ತನ್ನ ಬಯಕೆ ತೀರಿಸಿಕೊಳ್ಳಬೇಕು ಎಂದುಕೊಂಡ. ಅಲ್ಲಿ ಎಲ್ಲವೂ ನಿರ್ಜನವಾಗಿದೆ. ಮನುಷ್ಯನ ಸುಳಿವೇ ಇಲ್ಲ. ಇನ್ನು ತನ್ನ ಕೆಲಸ ಮುಗಿದಂತೆ ಎಂದುಕೊಂಡಳು ಆ ಯುವತಿ. ಆದರೆ ಆ ಕಾಮಾಂಧನಿಗೆ ತಮ್ಮ ರುಚಿ ತೋರಿಸಿದವು ಇರುವೆಗಳು. ಗುಂಪು ಗುಂಪಾಗಿ ದಾಳಿ ಮಾಡಿ ಕಾಮದಿಂದ ಕುರುಡಾಗಿದ್ದ ಆತನ ಕಣ್ಣು ತೆರೆಸಿದವು. ಬಚಾವ್ ಆದೆ ಎಂದು ಆ ಯುವತಿ ನಿಟ್ಟುಸಿರುಬಿಟ್ಟಿದ್ದಾರೆ.



ಈ ಘಟನೆ ನಡೆದಿರುವುದು ಇಲ್ಲಲ್ಲ. ಇಂಡೋನೇಷ್ಯಾದಲ್ಲಿ ಎಂಬುದು ನೆನಪಿರಲಿ. ಹದಿನಾರು ವರ್ಷದ ಅಪ್ರಾಪ್ತ ಬಾಲಕಿ, 29 ವರ್ಷ ದಾಟಿದ ಟೋನಿ ಐರ್ವಾನ್ ಜತೆಗೆ ಲಾಂಗ್ ಡ್ರೈವ್‌ಗೆ ಹೋದಳು. ಇಬ್ಬರೂ ಹೊಸ ಹೊಸ ಪ್ರದೇಶಗಳನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದರು. ಅಷ್ಟರಲ್ಲಿ ಯುವಕ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ. ತನ್ನೊಂದಿಗೆ ಸೆಕ್ಸ್ ಮಾಡು ಎಂದು ಬಲವಂತ ಮಾಡಿದ. ಅದಕ್ಕೆ ಆಕೆ ಒಪ್ಪಿಕೊಳ್ಳಲಿಲ್ಲ. ಕಾರು ಹಾಗೆಯೇ ಚಲಾಯಿಸುತ್ತಿದ್ದಾನೆ. ಮಾರ್ಗ ಮಧ್ಯೆ ಒಂದು ಹಳ್ಳಿ ಬಂದರೂ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ಆಕೆಯ ಪ್ರಯತ್ನ ಫಲಿಸಲಿಲ್ಲ. ಆಕೆಯನ್ನು ಕರೆದುಕೊಂಡು ಬಂದು ಮತ್ತೆ ಕಾರನ್ನು ಹತ್ತಿಸಿದ.

ನಡುವೆ ಇನ್ನೊಂದು ಊರು ಬಂತು. ಕಾರನ್ನು ವಾಷ್ ಮಾಡಬೇಕು ಎಂದು ಅಲ್ಲಿ ನಿಲ್ಲಿಸಿದ. ಅಲ್ಲಿಂದ ನಿರ್ಜನ ಪ್ರದೇಶಕ್ಕೆ ಕರೆದೊಯ್ದ. ಪೊದೆಗಳ ಒಳಕ್ಕೆ ಎಳೆದೊಯ್ದು ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ. ಅಷ್ಟರಲ್ಲಿ ಪೊದೆಯಲ್ಲಿದ್ದ ಕಪ್ಪು ಇರುವೆಗಳು ಒಮ್ಮೆಲೆ ಆತನ ಮೇಲೆ ಮುಗಿ ಬಿದ್ದವು. ಒಮ್ಮೆಲ್ಲೆ ಅಷ್ಟೆಲ್ಲಾ ಇರುವೆಗಳು ಆತನ ಮೈಮೇಲೆ ಬಿದ್ದು ಚುರುಕ್ ಅನ್ನಿಸಿದಾಗ ಅಯ್ಯಯ್ಯೋ ಎಂದು ಅಲ್ಲಿಂದ ಪೇರಿ ಕಿತ್ತ.

ಹಮ್ಮಯ್ಯ ಎಂದು ಹುಡುಗಿ ನಿಟ್ಟುಸಿರು ಬಿಟ್ಟಿದ್ದಾಳೆ. ಹುಡುಗಿಯೂ ಬೇಡ ಏನು ಬೇಡ ಎಂದು ನೋವು ತಾಳಲಾರದೆ ಅಲ್ಲಿಂದ ಒಂದೇ ದೌಡು. ಬಳಿಕ ಆ ಹುಡುಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಪೊಲೀಸರು ಟೋನಿ ಐರ್ವಾನನ್ನು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. ಟೋನಿ ಮಾಡಿದ ಅಪರಾಧಕ್ಕೆ ಆತನಿಗೆ ಮೂರರಿಂದ 15 ವರ್ಷ ಜೈಲು ಶಿಕ್ಷೆಯಾಗುವ ಅವಕಾಶಗಳು ಇವೆ. ತನ್ನ ಮಾನ ಪ್ರಾಣ ಕಾಪಾಡಿದ ಇರುವೆಗಳಿಗೆ ಥ್ಯಾಂಕ್ಸ್ ಹೇಳಿದ್ದೇನೆ ಎಂದಿದ್ದಾರೆ ಆ ಹುಡುಗಿ.

No comments