ಕನ್ನಡ ಸಿನಿಮಾಗೆ ಹೋಗಬೇಕು ಎಂದು ರಜೆ ಕೇಳಿದ ಕೆಎಸ್ಆರ್ಟಿಸಿ ಕಂಡಕ್ಟರ್.... ಕಂಡಕ್ಟರ್ ಪ್ರಾಮಾಣಿಕತೆಮೆಚ್ಚಿಕೊಂಡ ಡಿಪೋ ಮ್ಯಾನೇಜರ್...
ಉದ್ಯೋಗಿಗಳು ರಜೆಗಾಗಿ ಲೀವ್ ಹಾಕುವುದು ಸಾಮಾನ್ಯ ಸಂಗತಿ. ಆ ಲೆಟರ್ನಲ್ಲಿ ರಜೆಗೆ ಕಾರಣ ಏನು ಎಂದು ಪ್ರಸ್ತಾವಿಸುವುದು ಸಹ ಸಾಮಾನ್ಯ. ಆದರೆ ವೆರೈಟಿಯಾಗಿ ಸಿನಿಮಾಗೆ ಹೋಗಲು ಓರ್ವ ಕೆಎಸ್ಆರ್ಟಿಸಿ ನಿರ್ವಾಹಕ ರಜೆ ಕೇಳಿದ. ತನ್ನ ಕುಟುಂಬದ ಜತೆಗೆ ಸಿನಿಮಾ ನೋಡಲು ಹೋಗುತ್ತಿದ್ದೇನೆ ಎಂದು... ಒಂದು ದಿನ ರಜೆ ಬೇಕು ಎಂದು ಸಲ್ಲಿಸಿದ ಅರ್ಜಿ ಈಗ ವೈರಲ್ ಆಗಿ ಬದಲಾಗಿದೆ.
ಕೆಎಸ್ಆರ್ಟಿಸಿ ನಿರ್ವಾಹಕರೊಬ್ಬರು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರವರ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ನೋಡಲು ರಜೆ ಕೋರಿ ಬರೆದ ಪತ್ರ ವೈರಲ್ ಆಗಿದೆ. ಮೈಸೂರು ಕೆಎಸ್ಆರ್ಟಿಸಿ ಘಟಕದ ಚಾಲಕ ಕಂ ನಿರ್ವಾಹಕರಾಗಿರುವ ರಾಜೇಶ.ಎಂ.ಜೆ ಎಂಬವರೇ ಸಿನಿಮಾ ನೋಡಲು ರಜೆ ಕೋರಿ ಪತ್ರ ಬರೆದವರು.
'ಸೀತಾರಾಮ ಕಲ್ಯಾಣ ಚಲನಚಿತ್ರ ದಿ.25-01-2019ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದ್ದು, ಈ ಚಲನಚಿತ್ರವು ಕುಟುಂಬ ಸಮೇತ ನೋಡುವಂತಹ ಒಳ್ಳೆಯ ಚಲನಚಿತ್ರವಾಗಿರುತ್ತದೆ. ಹಾಗೂ ಚಿತ್ರದ ನಾಯಕರು ಕರ್ನಾಟಕ ರಾಜ್ಯದ 'ಹೆಮ್ಮೆಯ ಜಯಪ್ರಿಯ ಮುಖ್ಯಮಂತ್ರಿ' ಕುಮಾರ್ ಅಣ್ಣರವರ ಮಗ ಆಗಿರುತ್ತಾರೆ. ಹಾಗು ನಮ್ಮ ಜಿಲ್ಲೆ ಹಾಸನದವರಾಗಿರುತ್ತಾರೆ. ಹಾಗಾಗಿ ನಾನು 'ಸೀತಾರಾಮ ಕಲ್ಯಾಣ' ಚಲನಚಿತ್ರವನ್ನು ನೋಡಲು ದಿ.26-01-2019ರಂದು ಹೋಗಬೇಕಾಗಿರುತ್ತದೆ. ಹಾಗಾಗಿ ನನ್ನ ಕರ್ತವ್ಯಕ್ಕೆ ರಜೆ ನೀಡಬೇಕಾಗಿ ತಮ್ಮಲ್ಲಿ ಸವಿನಯ ಪ್ರಾರ್ಥನೆ' ಎಂದು ಕೆಎಸ್ಆರ್ಟಿಸಿ ಮೈಸೂರು ಘಟಕದ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.
ನಿಖಿಲ್ ಗೌಡ ಮುಖ್ಯ ಭೂಮಿಕೆಯ 'ಸೀತಾರಾಮ ಕಲ್ಯಾಣ' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಇದೊಂದು ಕೌಟುಂಬಿಕ ಹಿನ್ನೆಲೆಯ ಸಿನಿಮಾವಾಗಿದ್ದು, ಅನಿತಾ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದಾರೆ.
ಎ.ಹರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಹೆಸರಾಂತ ತಾರಾ ಬಳಗವೇ ಇದೆ. ರಚಿತಾ ರಾಮ್ ನಾಯಕಿಯಾಗಿದ್ದರೆ, ಶರತ್ ಕುಮಾರ್, ರವಿಶಂಕರ್, ಗಿರಿಜಾ ಲೋಕೇಶ್, ಮಧುಭಾಲ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿ ಇದ್ದಾರೆ. ಅನೂಪ್ ರುಬೆನ್ಸ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದ್ದು, ಸ್ವಾಮಿ ಛಾಯಾಗ್ರಹಣ ಮಾಡಿದ್ದಾರೆ.

Post a Comment