Header Ads

test

ಈ ಐದು ಸಲೆಹೆಗಳಿಂದ ಯಾವಾಗಲೂ ಜಗಳ ಆಡುವ ಹೆಂಡತಿಯರ ಬಾಯಿ ಮುಚ್ಚಿಸಬಹುದು... ಪ್ರತಿ ಗಂಡಂದಿರುತಿಳಿದುಕೊಳ್ಳಬೇಕಾದ ಸಂಗತಿ..!

ಗಂಡ ಹೆಂಡತಿ ನಡುವೆ ಜಗಳ ಎಂಬುದು ತುಂಬಾ ಸಾಮಾನ್ಯ ಸಂಗತಿ. ಆದರೆ ಕೆಲವು ಕುಟುಂಬಗಳಲ್ಲಿ ನಿತ್ಯ ಜಗಳಗಳು ಆಗುತ್ತಲೇ ಇರುತ್ತವೆ. ಇತ್ತೀಚಿನ ಕಾಲದಲ್ಲಿ ಒಂದು ಸಮೀಕ್ಷೆಯಲ್ಲಿ ಗೊತ್ತಾದ ಸಂಗತಿ ಪ್ರಕಾರ ಮದುವೆಯಾದ ಮೂರರಿಂದ ಹತ್ತು ವರ್ಷಗಳ ನಡುವಿನವರು ಹೆಚ್ಚಾಗಿ, ನಿತ್ಯ ಜಗಳ ಆಡುತ್ತಿರುತ್ತಾರಂತೆ. ಮದುವೆಯಾದ ಮೂರು ವರ್ಷಗಳವರೆಗೂ ಜಗಳ ತುಂಬಾ ಕಡಿಮೆ ಇರುತ್ತವೆ.




ಮನಸ್ತಾಪಗಳು ಜಗಳಗಳೂ ಆದರೂ ಯಾರೋ ಒಬ್ಬರು ಸುಮ್ಮನಿದ್ದರೆ ಆ ಗಲಾಟೆ ಸದ್ದಡಗುತ್ತದೆ. ಇಲ್ಲದಿದ್ದರೆ ನೀನಾ ನಾನಾ ಎಂಬಂತೆ ಗಲಾಟೇ ಮುಂದುವರೆಯುತ್ತದಂತೆ. ಇನ್ನು ಮದುವೆಯಾದ ಹತ್ತು ವರ್ಷಗಳ ಬಳಿಕ ಇಬ್ಬರಲ್ಲಿ ಒಬ್ಬರಿಗೆ ಇನ್ನೊಬ್ಬರ ಲೋಪದೋಷಗಳು ಗೊತ್ತಿವುದರಿಂದ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಾ ಜಗಳದಿಂದ ದೂರ ಇರುತ್ತಾರಂತೆ.

ಇನ್ನು ಆ ಸಮೀಕ್ಷೆಯಲ್ಲಿ ಇನ್ನೊಂದು ಕುತೂಹಲಕರ ಸಂಗತಿ ಸಹ ಬೆಳಕು ಕಂಡಿದೆ. ಗಂಡ ಹೆಂಡತಿ ನಡುವಿನ ಜಗಳಕ್ಕೆ ಕಾರಣ ಹೆಚ್ಚಾಗಿ ಹೆಂಡತಿಯೇ ಕಾರಣವಂತೆ. ಸಮಾಜದಲ್ಲಿ ಹೆಂಗಸರಲ್ಲಿ ಅಭದ್ರತಾ ಭಾವನೆ ಹೆಚ್ಚಾಗಿ ಇರುತ್ತದೆ. ಅಂದರೆ ತಮ್ಮನ್ನು ಯಾರಾದರೂ ಮೋಸ ಮಾಡುತ್ತಿದ್ದಾರೇನೋ, ಮೋಸ ಹೋಗುತ್ತೇವೇನೋ, ಯಾರಾದರೂ ಏನಾದರೂ ಅನ್ನುತ್ತಾರೇನೋ ಎಂಬ ಭಾವನೆ ಹೆಚ್ಚಾಗಿ ಇರುತ್ತದೆ. ಅದರಿಂದಾಗಿ ಸಹಜವಾಗಿ ಗಂಡನ ಜತೆಗೆ ಹೆಂಡತಿ ಹೆಚ್ಚಾಗಿ ಜಗಳ ಆಡುತ್ತಿರುತ್ತಾಳೆ. ಹಾಗಾಗಿಯೇ ಹೆಂಡತಿ ಬಳಿ ಹೊಂದಿಕೊಂಡು ಹೋಗುವಂತೆ, ಅನ್ಯೋನ್ಯವಾಗಿರಲು ತಜ್ಞರು ಐದು ಸಲೆಹೆಗಳನ್ನು ನೀಡಿದ್ದಾರೆ. ಅವು ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ.

1. ಹೆಂಡತಿ ಅಭಿರುಚಿಗೆ ತಕ್ಕಂತೆ ನಡೆದುಕೊಳ್ಳುವುದು.

2. ಆಕೆಯ ಜತೆಗೆ ಯಾವುದೇ ಸಂಗತಿಯನ್ನು ನೇರವಾಗಿ ನೋ ಎಂದು ಹೇಳದೆ, ಆಕೆಗೆ ನಿಧಾನಕ್ಕೆ ಅರ್ಥ ಆಗುವಂತೆ ಹೇಳಬೇಕು.

3. ಮಕ್ಕಳ ವಿಚಾರದಲ್ಲಿ ಹೆಚ್ಚು ಆಸಕ್ತಿ ತೋರುವುದರಿಂದ ಹೆಂಗಸರು ತುಂಬಾ ರಿಲ್ಯಾಕ್ಸ್ ಆಗಿ ಫೀಲ್ ಆದಂತೆ ಭಾವಿಸುತ್ತಾರೆ. ಅದರಿಂದ ಜಗಳಗಳು ಕಡಿಮೆಯಾಗುತ್ತವೆ.

4. ಇತರರ ಬಗ್ಗೆ ಹೆಂಡತಿ ಮುಂದೆ ಅಧಿಕವಾಗಿ ಮಾತನಾಡದೆ ಇರುವುದೇ ಉತ್ತಮ.

5. ಕೊನೆಯದಾಗಿ ಆಕೆಯನ್ನು ಬಾಯ್ತುಂಬ ಹೊಗಳುತ್ತಿರಿ.

ಇವಿಷ್ಟು ಪಾಲಿಸಿದರೆ ನಿಮ್ಮ ಸಂಸಾರ ಆನಂದ ಸಾಗರ. ಯಾವಾಗಲೂ ಕಿತ್ತಾಡುವ, ಜಗಳ ಮಾಡುವವರು ಸ್ವಲ್ಪ ಎಚ್ಚರ ವಹಿಸಿದರೆ ಸಾಕು. ಅವರ ಸಂಸಾರ ಹಾಲು ಜೇನು ಒಂದಾದ ಹಾಗೆ ಇರುತ್ತದೆ.

No comments