Header Ads

test

ಕೂದಲು ವೇಗವಾಗಿ, ದಟ್ಟವಾಗಿ, ಸಹಜವಾಗಿ ಬೆಳೆಯಲು ಟೀ ಟ್ರೀ ಆಯಿಲ್...!!

ಪ್ರತಿ ಮಹಿಳೆ ಸುಂದರವಾದ ಮತ್ತು ದಟ್ಟವಾದ ಕೂದಲು ಇರಬೇಕೆಂದು ಬಯಸುತ್ತಾಳೆ, ಕನಸು ಕಾಣುತ್ತಾಳೆ. ಆದರೆ ಕೂದಲು ಸಹಜವಾಗಿ ಬೆಳೆಯಲು ಟೀ ಟ್ರಿ ಆಯಿಲ್‌ನಲ್ಲಿ ಇರುವ ಲಕ್ಷಣಗಳು ಸಹಕಾರಿ. ಟೀ ಟ್ರೀ ಆಯಿಲ್ ಕೂದಲ ನಷ್ಟ, ತಲೆ ಹೊಟ್ಟು ಸಮಸ್ಯೆ ನಿವಾರಣೆಗೂ ಉಪಯುಕ್ತ. ಈ ಆಯಿಲ್ ಕೂದಲು ಮತ್ತು ತಲೆ ಮೇಲಿನ ಚರ್ಮ ತೇವದಿಂದ ಇರುವಂತೆ ಮಾಡುತ್ತದೆ. ಈಗ ಟೀ ಟ್ರೀ ಆಯಿಲ್ ಕೂದಲ ಬೆಳವಣಿಗೆಗೆ ಹೇಗೆ ಉಪಯೋಗಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.



1. ಟೀ ಟ್ರೀ ಮತ್ತು ಆಲೀವ್ ಆಯಿಲ್
ಆಲೀವ್ ಎಣ್ಣೆಯೊಂದಿಗೆ ಟೀ ಟ್ರೀ ಆಯಿಲ್ ಬೆರೆತಾಗ ಕೂದಲು ಬೆಳವಣಿಗೆಯಲ್ಲಿ ತುಂಬಾ ಸಮರ್ಥವಾಗಿ ಕೆಲಸ ಮಾಡುತ್ತದೆ. ಟೀ ಟ್ರೀ ಮತ್ತು ಆಲೀವ್ ಎಣ್ಣೆಯಲ್ಲಿ ಇರುವ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಲಕ್ಷಣಗಳು ಕೂದಲ ಮೇಲೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ನಾಶ ಮಾಡುತ್ತದೆ. ಅಷ್ಟೇ ಅಲ್ಲದೆ ಕೂದಲ ನಷ್ಟಕ್ಕೂ ಮುಖ್ಯ ಕಾರಣವಾದ ಡಿಟಿಎಚ್ ಹಾರ್ಮೋನ್‌ನ್ನು ನಿಯಂತ್ರಿಸುತ್ತದೆ.

ಬೇಕಾದ ವಸ್ತುಗಳು
ಟೀ ಟ್ರೀ ಆಯಿಲ್ - 7 ರಿಂದ 10 ಹನಿ
ಬೆಚ್ಚಗಿನ ಆಲೀವ್ ಆಯಿಲ್ - 3 ಟೇಬಲ್ ಸ್ಫೂನ್‌ಗಳು

ಬಳಸುವ ವಿಧಾನ
* ಒಂದು ಬೌಲ್‌ನಲ್ಲಿ ಉಗುರು ಬೆಚ್ಚಗಿನ ಆಲೀವ್ ಆಯಿಲ್ ತೆಗೆದುಕೊಂಡು ಅದರಲ್ಲಿ ಟೀ ಟ್ರೀ ಆಯಿಲ್ ಬೆರೆಸಬೇಕು.
* ಈ ಮಿಶ್ರಣವನ್ನು ಕೂದಲಿಗೆ ಹಚ್ಚಬೇಕು.
* ತಲೆಗೆ ಷವರ್ ಕ್ಯಾಪ್ ಹಾಕಿ ರಾತ್ರಿಯಲ್ಲಾ ಹಾಗೆಯೇ ಬಿಡಬೇಕು.
* ಮರುದಿನ ಬೆಳಗ್ಗೆ ಸಾಮಾನ್ಯ ಶಾಂಪೂ ಉಪಯೋಗಿಸಿ ತಲೆಸ್ನಾನ ಮಾಡಬೇಕು.
* ಈ ಪದ್ಧತಿ ಕೂದಲ ಬೆಳವಣಿಗೆಗೆ ಮತ್ತು ತಲೆ ಹೊಟ್ಟು ನಿವಾರಣೆಗೆ ತುಂಬಾ ಸಹಕಾರಿ.

2. ಟೀ ಟ್ರೀ ಆಯಿಲ್‌ನ್ನು ಶಾಂಪೂನಲ್ಲಿ ಬೆರೆಸಬೇಕು
ಕೂದಲ ಬೆಳವಣಿಗೆಗೆ ಟೀ ಟ್ರೀ ಆಯಿಲನ್ನು ಶಾಂಪೂನಲ್ಲಿ ಬೆರೆಸುವುದು ಒಂದು ಒಳ್ಳೆಯ ಪದ್ಧತಿ.
ಕೂದಲ ಬೆಳವಣಿಗೆಗೆ ಮುಖ್ಯ ಅಡೆತಡೆಯಾದ ಚರ್ಮದ ತುರಿಕೆ, ತಲೆಹೊಟ್ಟಿನಂತಹ ಸಮಸ್ಯೆಗಳನ್ನು ನಿವಾರಿಸಿ ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.

ಬೇಕಾದ ವಸ್ತುಗಳು
ಟೀ ಟ್ರೀ ಆಯಿಲ್
ಸಾಮಾನ್ಯ ಶಾಂಪೂ

ಬಳಸುವ ವಿಧಾನ
* ಒಂದು ಚಿಕ್ಕ ಬಟ್ಟಲಿನಲ್ಲಿ ಅಗತ್ಯವಾದ ಶಾಂಪೂ ತೆಗೆದುಕೊಳ್ಳಬೇಕು.
* ಇದರಲ್ಲಿ 5 ಹನಿ ಟೀ ಟ್ರೀ ಆಯಿಲನ್ನು ಬೆರೆಸಬೇಕು.
* ಈ ಮಿಶ್ರಣವನ್ನು ಕೂದಲು ಮತ್ತು ತಲೆ ಮೇಲೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು.
* ಐದು ನಿಮಿಷಗಳ ಬಳಿಕ ಸಾಧಾರಣ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಬೇಕು.
* ಈ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ಕೂದಲು ಬೆಳೆಯುತ್ತದೆ.

No comments