Header Ads

test

ತನ್ನ ಕಾರ್ ಡ್ರೈವರ್'ಗೆ ಡ್ರೈವರ್ ಆದ ಜಿಲ್ಲಾಧಿಕಾರಿ ....!

ಅದು ಜಿಲ್ಕಾಧಿಕಾರಿಗಳ ಕಾರ್ಯಾಲಯ. ಎಂದಿನಂತೆ ಅಲ್ಲಿನ ಉದ್ಯೋಗಿಗಳು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗಿದ್ದರು. ಆದೇ ಸಮಯದಲ್ಲಿ ಕಾರ್ಯಾಲಯದ ಮುಂದೆ ಕಾರೊಂದು ಬಂದು ನಿಂತಿದೆ. ಅದರಿಂದ ಜಿಲ್ಲಾಧಿಕಾರಿ ಇಳಿದರು. ಕಾರ್ ಹಿಂದಿನ ಡೋರ್ ತೆಗೆದು ಕುಳಿತ ವ್ಯಕ್ತಿಯನ್ನು ಹೃತ್ಫೂರ್ವಕ ಆಹ್ವಾನಿಸಿದರು ಆ ಜಿಲ್ಲಾಧಿಕಾರಿ. ಇದನ್ನೆಲ್ಲ ನೋಡಿದ ಅಲ್ಲಿನ ಸಿಬ್ಬಂದಿ
ಶಾಕ್ ಆದರು. ಯಾಕೆ ಗೊತ್ತಾ....?!ಕಾರಿನಿಂದ ಇಳಿದಿದ್ದು ಬೇರೆಯಾರೂ ಅಲ್ಲ ಆ ಜಿಲ್ಲಾಧಿಕಾರಿಯ ಕಾರ್ ಡ್ರೈವರ್. ಅದಕ್ಕೆ ಆ ಉದ್ಯೋಗಿಗಳು ಹಾಗೆ ಆಶ್ಚರ್ಯದಿಂದ ನೋಡಿದ್ದು. ಇಷ್ಟಕ್ಕೂ ಆ ಜಿಲ್ಲಾಧಿಕಾರಿ ಯಾಕೆ ಹೀಗೆ ಮಾಡಿದರು...? ಮಹಾರಾಷ್ಟ್ರದ ಅಕೋಲ ಎಂಬ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಾಹಿಸುತ್ತಿದ್ದಾರೆ ಜಿ. ಶ್ರೀಕಾಂತ್. ಆತನ ಬಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರೆ ದಿಗಂಬರ್ ಥಕ್. ಕೆಲವೇ ದಿನಗಳಲ್ಲಿ ನಿವೃತ್ತಿ ಹೊಂದಲ್ಲಿದ್ದಾರೆ. ಅದರಲ್ಲಿ ಏನು ವಿಶೇಷ ಅಂತಿರಾ....?

ಹೌದು‌‌.. ದಿಗಂಬರ್ ಥಕ್ ಅವರ ಬಗ್ಗೆ ಹೇಳಲು ಒಂದು ವಿಶೇಷತೆ ಇದೆ.ಒಟ್ಟು 18 ಜನ ಜಿಲ್ಲಾಧಿಕಾರಿಗಳ ಬಳಿ ಕಾರ್ ಡ್ರೈವರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ... ಆತನ ಈ ಸೇವಾ ಅವಧಿಯಲ್ಲಿ ಒಂದು ಸಣ್ಣ ಅಪಘಾತವನ್ನು ಸಹ ಮಾಡಿಲ್ಲ. ಅಷ್ಟು ಅನುಭವಸ್ಥ ಚಾಲಕರಾಗಿದ್ದರು. ಈ ವಿಷಯ ತಿಳಿದ ಜಿಲ್ಲಾಧಿಕಾರಿ ದಿಗಂಬರ್ ಥಕ್ ನ ನಿವೃತ್ತಿಯ ದಿನ ಆತ ನಡೆಸುವ ಕಾರನ್ನು ಮದುವೆಯ ಕಾರಿನಂತೆ ಸಿಂಗರಿಸಿದ. ಅಷ್ಟೇ ಅಲ್ಲ, ತನ್ನ ಕಾರ್ ಡ್ರೈವರ್ ನನ್ನು ಹಿಂದಿನ ಸಿಟ್'ನಲ್ಲಿ ಕುಳಿತುಕೊಳ್ಳಲು ಹೇಳಿದ ಜಿಲ್ಲಾಧಿಕಾರಿ ಶ್ರೀಕಾಂತ್, ತಾನೇ ಸ್ವತಃ ಕಾರು ನಡೆಸಿಕೊಂಡು ಜಿಲ್ಲಾಧಿಕಾರಿ ಕಛೇರಿಗೆ ಕರೆದುಕೊಂಡು ಬಂದರು. ಹಾಗಾಗಿಯೇ ಅಲ್ಲಿನ ಉದ್ಯೋಗಿಗಳು ಆಶ್ಚರ್ಯಗೊಂಡಿದ್ದು, ವಿಷಯ ತಿಳಿದ ನಂತರ ಅವರು ಸಹ ಡ್ರೈವರ್'ಗೆ ಹೃದಯಪೂರ್ವಕವಾಗಿ ಬೀಳ್ಕೊಡುಗೆ ನೀಡಿದರು.ಯಾವುದೇ ಕ್ಷೇತದಲ್ಲೇ ಆಗಲಿ ಯಾವುದೇ ಕಳಂಕವಿಲ್ಲದೇ ಕೆಲಸ ಮಾಡಿದರೆ ಯಾರೇ ಆಗಲಿ ಕೊನೆಗೆ ಇಂತಹ ಪ್ರೀತಿಪೂರ್ವಕ ಬಿಳ್ಕೋಡುಗೆ ದೊರೆಯುತ್ತದೆ

No comments