Header Ads

test

ವಿದ್ಯುತ್ ಕಂಬಗಳ ನಡುವಿನ ತಂತಿಗಳು ಸಡಿಲವಾಗ ನೇತಾಡುವಂತೆ ಕಾಣುತ್ತವೆ ಯಾಕೆ?

ಸಾಮಾನ್ಯವಾಗಿ ಎಲ್ಲರ ಗಮನಕ್ಕೂ ಈ ಸಂಗತಿ ಬಂದಿರುತ್ತದೆ. ಆದರೂ ಅಷ್ಟಾಗಿ ತಲೆ ಕೆಡಿಸಿಕೊಂಡಿರಲ್ಲ. ವಿದ್ಯುತ್ ಕಂಬಳ ನಡುವಿನ ತಂತಿಗಳು ಸಡಿಲವಾದಂತೆ, ನೇತಾಡುತ್ತಿದ್ದಂತೆ ಕಾಣುತ್ತವೆ. ಬಹುಶಃ ಹಾಕುವಾಗಲೇ ಸಡಿಲವಾಗಿ ಹಾಕಿರುತ್ತಾರೆ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ಅದು ಹಾಗಲ್ಲ. ಇದರ ಹಿಂದೆ ಒಂದು ವೈಜ್ಞಾನಿಕ ಕಾರಣ ಅಡಗಿದೆ. ಅದು ಏನು ಎಂಬುದನ್ನು ಈಗ ನೋಡೋಣ.

ಎರಡು ವಿದ್ಯುತ್ ಕಂಬಳ ನಡುವೆ ಇರುವ ತಂತಿಗಳು ಸಡಿಲವಾಗಿ ಇದು ಕೆಳಗೆ ನೇತಾಡುತ್ತಿರುತ್ತವೆ ಯಾಕೆ ಗೊತ್ತಾ..? ಮುಂದೆ ಓದಿದರೆ ನಿಮಗೇ ಗೊತ್ತಾಗುತ್ತದೆ. ವಿದ್ಯುತ್ ತಂತಿಗಳನ್ನು ಲೋಹದಿಂದ ತಯಾರಿಸಲಾಗಿರುತ್ತದೆ. ಕಬ್ಬಿಣ ಅಥವಾ ಅಲ್ಯೂಮಿನಿಯಂನಿಂದ ತಯಾರಾದ ತಂತಿಗಳು ಬಿಸಿಲಿನ ಝಳಕ್ಕೆ ಹಿಗ್ಗಿ, ಚಳಿಗೆ ಕುಗ್ಗುತ್ತವೆ. ಕಡಿಮೆ ಉಷ್ಣತೆಯ ಕಾಲದಲ್ಲಿ ಸಂಕುಚಿತಗೊಂಡ ಕಂಬಗಳು ಜಗ್ಗಿದಂತೆ ಆಗದಿರಲು ಈ ಸಡಿಲತೆ ಸರಿಹೋಗುತ್ತದೆ. ಹಾಗಾಗಿ ಅವನ್ನು ಆ ರೀತಿ ಸಡಿಸವಾಗಿ ನೇತಾಡುವ ರೀತಿಯಲ್ಲಿ ವ್ಯವಸ್ಥೆ ಮಾಡಿರುತ್ತಾರೆ.




ಕಸದಿಂದ ವಿದ್ಯುತ್ತನ್ನು ಹೇಗೆ ಉತ್ಪತ್ತಿ ಮಾಡುತ್ತಾರೆ ಗೊತ್ತಾ? ಇದು ಎಷ್ಟು ದೇಶಗಳಲ್ಲಿ ಜಾರಿಯಲ್ಲಿದೆ ಗೊತ್ತಾ?

ಕಸ ಎಂದರೆ ಕೆಲಸಕ್ಕೆ ಬಾರದ ಪದಾರ್ಥಗಳ ರಾಶಿ. ಆದರೆ ಕಸದಿಂದಲೂ ಉಪಯೋಗ ಇದೆ ಎಂಬ ಸಂಗತಿ ಈಗೀಗ ಅರ್ಥವಾಗುತ್ತಿದೆ. ಇತ್ತೀಚೆಗೆ ಎಲ್ಲಾ ದೇಶಗಳಲ್ಲೂ ಘನ ವ್ಯರ್ಥ ಪದಾರ್ಥಗಳ ನಿರ್ವಹಣೆಗೆ (Solid Waste Management) ಎಲ್ಲಿಲ್ಲದ ಪ್ರಾಮುಖ್ಯತೆ ಇದೆ. ಉದಾಹರಣೆಗೆ ತಿಂದ ಬಳಿಕ ಉಳಿದ ಪದಾರ್ಥಗಳು ಕೊಳೆಯುವುದರಿಂದಾಗಲಿ, ನಾವು ಬಿಸಾಕಿದ ಕಸ ಎಲ್ಲವೂ ಸಾವಯವ ರಾಸಾಯನಿಕಗಳು. ಅವುಗಳಲ್ಲಿ ಸಾಕಷ್ಟು ಶಕ್ತಿ ಅಡಗಿರುತ್ತದೆ. ಅಂತಹ ವ್ಯರ್ಥ ತರಕಾರಿ, ಹಣ್ಣು, ಆಹಾರ ಪದಾರ್ಥಗಳು, ಪ್ಲಾಸ್ಟಿಕ್, ಕಾಗದ, ಎಲೆ, ಪಾಚಿ ಇತ್ಯಾದಿ ಪದಾರ್ಥಗಳನ್ನು ಒಣಗಿಸಿ ಅವನ್ನು ಉರಿಸುವ ಮೂಲಕ ಬಿಡುಗಡೆಯಾಗುವ ಉಷ್ಣಶಕ್ತಿ ವಿದ್ಯುತ್ ಶಕ್ತಿಯಾಗಿ ಬದಲಾಗುತ್ತದೆ.

ವ್ಯರ್ಥ ಕಾಗದವನ್ನು ಮತ್ತೆ ನೆನೆಸಿ ತಿರುಳಿನಂತೆ ಮಾಡಿ ಹೊಸ ಕಾಗದವನ್ನು ತಯಾರಿಸಬಹುದು. ಈ ರೀತಿ ಅದೆಷ್ಟೋ ವ್ಯರ್ಥ ಪದಾರ್ಥಗಳನ್ನು ಮತ್ತೆ ಪುನರ್ ಬಳಕೆ ಮಾಡುವ ಕೆಲಸ ನಮ್ಮ ದೇಶ ಸೇರಿದಂತೆ ಎಲ್ಲಾ ದೇಶಗಳಲ್ಲಿ ಇದೆ.

No comments