Header Ads

test

ಇದನ್ನು ಓದಿದ ಬಳಿಕ ಪಾನಿಪೂರಿ ತಿನ್ನಬೇಕೋ ಬೇಡವೋ ನೀವೇ ನಿರ್ಧರಿಸಿಕೊಳ್ಳಿ... ನಮ್ಮನ್ನು ಮಾತ್ರ ಬೈಕೋಬೇಡಿ ಪ್ಲೀಸ್..!

ಜನ ಇತ್ತೀಚಿನ ದಿನಗಳಲ್ಲಿ ಜಂಕ್ ಫುಡನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದಾರೆ. ಹೊರಗಿನ ತಿಂಡಿ ಹೆಚ್ಚು ರುಚಿಯಾಗಿರುತ್ತದೆ. ಆದರೆ ಅದನ್ನು ಹೇಗೆ ತಯಾರಿಸುತ್ತಾರೆ ಎಂದು ಗೊತ್ತಾದರೆ ಮಾತ್ರ ಅದರ ತಂಟೆಗೆ ಹೋಗಲ್ಲ ಅನ್ನಿಸುತ್ತದೆ. ಆ ರೀತಿ ತಯಾರಿಸುತ್ತಾರೆ ಎಂದು ಗೊತ್ತಿದ್ದೂ ಸಹ ಜನ ವಿಧಿಯಿಲ್ಲದೆ, ಅಭ್ಯಾಸ ಬಿಡಲು ಸಾಧ್ಯವಾಗದೆ ಅದನ್ನೇ ತಿನ್ನುತ್ತಾರೆ. ರಸ್ತೆ ಪಕ್ಕದ ಹೋಟೆಲ್, ಮತ್ತು ಇತರೆ ಗಾಡಿಗಳ ಮೇಲೆ ತಯಾರಾಗುವ ಪದಾರ್ಥಗಳನ್ನು ಅತ್ಯಂತ ಕೆಟ್ಟ ಜಾಗಗಳಲ್ಲಿ ತಯಾರಿಸುತ್ತಾರೆ. ಆದರೂ ಅವು ರುಚಿಯಾಗಿ ಇರುವ ಕಾರಣ, ಬೆಲೆಯೂ ಕಡಿಮೆ ಎಂಬ ಉದ್ದೇಶದಿಂದ ತಿನ್ನುತ್ತಿರುತ್ತಾರೆ. ಇನ್ನು ಪಾನಿಪೂರಿ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ.




ಪಾನಿಪೂರಿ ಗಾಡಿ ಇಲ್ಲದ ಪಟ್ಟಣ ಇಲ್ಲ. ಚಿಕ್ಕ ಚಿಕ್ಕ ಊರುಗಳಲ್ಲೂ ಸಹ ಈಗ ಪಾನಿಪೂರಿ ಬಂಡಿಗಳು ಇರುತ್ತವೆ. ಪಾನಿಪೂರಿ ಬಂಡಿಯವರು ಆ ರಸ ಬೆರೆಸುತ್ತಿದ್ದರೆ ಅಯ್ಯೋ ಅನ್ನಿಸುತ್ತದೆ. ಆದರೂ ಸಹ ಅದೇ ಚೆನ್ನಾಗಿರುತ್ತದೆ ಎಂದು ತಿನ್ನುತ್ತೇವೆ. ಇನ್ನು ಪಾನಿಪೂರಿ ತಯಾರಿ ಮಾಡುವ ಸಮಯದಲ್ಲಿ ಆ ಹಿಟ್ಟನ್ನು ಹೇಗೆ ಹೇಗೆ ಬೆರೆಸುತ್ತಾರೆ ಎಂಬುದು ಗೊತ್ತಾದರೆ ಮಾತ್ರ ತಿಂದದ್ದು ಹೊರಗೆ ಬರುವಂತಿರುತ್ತದೆ. ಇತ್ತೀಚೆಗೆ ಪಾನಿಪೂರಿ ಹಿಟ್ಟು ಬೆರೆಸುವ, ಅವರು ಹೇಗೆ ಬೆರೆಸುತ್ತಾರೆ ಎಂಬ ಫೋಟೋಗಳು ಹರಿದಾಡಿದವು. ಸಾಮಾಜಿಕ ಮಾಧ್ಯಮಗಳಲ್ಲಿ ಇವು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇವನ್ನು ಎಲ್ಲಿ ತಯಾರಿಸುತ್ತಿದ್ದಾರೋ ಗೊತ್ತಿಲ್ಲ. ಆದರೂ ಎಲ್ಲ ಕಡೆಯೂ ಸರಿಸುಮಾರು ಇದೇ ರೀತಿ ತಯಾರಿಸುತ್ತಾ ಇರಬಹುದು ಎಂಬುದು ಕೆಲವರ ವಾದ.




ಏನೋ ರುಚಿಗಾಗಿ ತಿನ್ನುತ್ತಿದ್ದರೆ ನೀವು ಏನ್ರಿ ಇಂತಹದ್ದೆಲ್ಲಾ ತೋರಿಸಿ, ಪಾನಿಪೂರಿ ಬಗ್ಗೆ ಅಸಹ್ಯ ಉಂಟಾಗುವಂತೆ ಮಾಡುತ್ತಿದ್ದೀರಿ. ಈ ರೀತಿ ಎಲ್ಲ ಕಡೆಯೂ ನಡೆಯುತ್ತದೆ. ತಿನ್ನುವ ಪ್ರತಿ ಪದಾರ್ಥ ಎಷ್ಟು ಸ್ವಚ್ಛವಾಗಿದೆ ಎಂಬುದು ಗೊತ್ತಿಲ್ಲ. ಅಂತಹದ್ದರಲ್ಲಿ ನೀವು ಪಾನಿಪೂರಿ ಬಗ್ಗೆ ಈ ರೀತಿ ಬರೆಯುವುದು ಸರಿಯಲ್ಲ ಎಂದು ನಮ್ಮನ್ನು ಬೈದುಕೊಳ್ಳಬೇಡಿ. ಇತರೆ ಪದಾರ್ಥಗಳ ವಿಚಾರ ಪಕ್ಕಕ್ಕಿಟ್ಟರೆ ಪಾನಿಪೂರಿ ಆರಂಭದಿಂದ ತಿನ್ನುವವರೆಗೂ ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿರುತ್ತವೆ. ಪೂರಿ ಹಿಟ್ಟನ್ನು ಈ ರೀತಿ ಬೆರೆಸುತ್ತಾರೆ. ಆ ಬಳಿಕ ಪೂರಿಯನ್ನು ಎಣ್ಣೆಯಲ್ಲಿ ಕರಿಯುತ್ತಾರೆ. ಪೂರಿ ಆದ ಬಳಿಕ ಯಾವುದೋ ರಸ ಬೆರೆಸುತ್ತಾರೆ. ಆ ರಸ ಎಲ್ಲಿಯದೋ, ಅದರಲ್ಲಿ ಏನಿದೆಯೋ, ಇನ್ನು ಯಾವುದೋ ಹಿಟ್ಟು ಸೇರಿಸುತ್ತಾರೆ. ಅದರಲ್ಲಿ ಏನೇನಿದೆಯೋ, ಇತರೆ ರಸ್ತೆ ಪಕ್ಕದ ಫುಡ್ಸ್ ಗಿಂತ ಈ ಫುಡ್ ತುಂಬಾ ಅಪಾಯಕಾರಿ. ಹಾಗಾಗಿಯೇ ನೀವು ಬೈದುಕೊಂಡರೂ ಪರ್ವಾಗಿಲ್ಲ ಈ ವಿಷಯವನ್ನು ತಿಳಿಸಬೇಕು ಎಂದುಕೊಂಡೆವು. ಆಮೇಲೆ ನಿಮ್ಮಿಷ್ಟ..!

No comments