Header Ads

test

ವಿದ್ಯುತ್ ತಂತಿಯನ್ನು ತಾಗಿದರೆ ಮನುಷ್ಯನಿಗೆ ಶಾಕ್ ಹೊಡೆಯುತ್ತದೆ. ಆದರೆ ಪಕ್ಷಿಗಳು ವಿದ್ಯುತ್ ತಂತಿ ಮೇಲೆಕುಳಿತರೂ ಏನೂ ಆಗಲ್ಲ ಯಾಕೆ?

ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಕಂಬಗಳಿಗೆ ಸಾಮಾನ್ಯವಾಗಿ ನಾಲ್ಕು ತಂತಿಗಳಿರುತ್ತವೆ. ಅದರಲ್ಲಿ ಮೂರು ತಂತಿಗಳನ್ನು ಫೇಸ್ ಎಂದೂ, ಒಂದನ್ನು ನ್ಯೂಟ್ರಲ್ ಎಂದು ಕರೆಯುತ್ತಾರೆ. ಒಂದು ಫೇಸ್ ತಂತಿಗೆ, ಇನ್ನೊಂದು ಫೇಸ್ ತಂತಿಗೆ ನಡುವೆ, ನ್ಯೂಟ್ರಲ್ ತಂತಿಯ ನಡುವೆ ವಿದ್ಯುತ್ ಪೊಟನ್ಷಿಯಲ್ ಇರುತ್ತದೆ. ಒಬ್ಬ ವ್ಯಕ್ತಿಯಲ್ಲಾಗಲಿ, ವಸ್ತುವಲ್ಲಾಗಲಿ, ಪ್ರಾಣಿಯಲ್ಲಾಗಲಿ ವಿದ್ಯುತ್ ಪ್ರವಹಿಸಬೇಕು ಎಂದರೆ ಅದಕ್ಕೆ ಅತ್ತಿತ್ತ ವಿದ್ಯುತ್ ಪೊಟೆನ್ಷಿಯಲ್ ವ್ಯತ್ಯಾಸ ಇರಬೇಕು. ಅಂದರೆ ಒಬ್ಬ ವ್ಯಕ್ತಿಗೆ ಶಾಕ್ ಹೊಡೆಯಬೇಕು ಎಂದರೆ ಏಕಕಾಲದಲ್ಲಿ ಕನಿಷ್ಠ ಎರಡು ತಂತಿಗಳ ಜತೆಗೆ ಸಂಪರ್ಕ ಇರಬೇಕು. ಆಗ ಅಧಿಕ ಪೊಟೆನ್ಷಿಯಲ್ ಉಳ್ಳ ತಂತಿಯಲ್ಲಿ, ಅಲ್ಪ ಪೊಟೆನ್ಷಿಯಲ್ ಇರುವ ತಂತಿಯಿಂದ ಎಲಕ್ಟ್ರಾನ್‌ಗಳು ಆ ವ್ಯಕ್ತಿ ಮೂಲಕ ಪ್ರವಹಿಸುತ್ತವೆ. ಈ ರೀತಿ ಎಲೆಕ್ಟ್ರಾನ್‍ಗಳು ದೇಹದಲ್ಲಿ ಪ್ರವಹಿಸಿದರೆ ಅಪಾಯ.


ಮನುಷ್ಯರೂ ಸಹ ಕೇವಲ ಒಂದೇ ತಂತಿಯನ್ನು ಹಿಡಿದು ನೇತಾಡಿದರೆ ಏನೂ ಆಗಲ್ಲ. ನೆಲಕ್ಕೆ ಚಪ್ಪಲಿ ಇಲ್ಲದಂತೆ ತಾಕಿದರೆ, ಅಥವಾ ಎರಡು ತಂತಿಗಳನ್ನು ಏಕಕಾಲದಲ್ಲಿ ತಾಕಿದರೇ ಅಪಾಯ. ಇನ್ನು ಪಕ್ಷಿಗಳ ವಿಚಾರಕ್ಕೆ ಬಂದರೆ ಅವು ಏಕಕಾಲಕ್ಕೆ ಎರಡು ತಂತಿಗಳನ್ನು ತಾಕಲ್ಲ. ಹಾಗಾಗಿ ಅವುಗಳ ದೇಹದ ಮೂಲಕ ವಿದ್ಯುತ್ ಪ್ರವಹಿಸಲ್ಲ. ಒಂದು ವೇಳೆ ಅದು ಅಚಾನಕ್ ಆಗಿ ಒಂದು ಕಾಲು ಅತ್ತ, ಇನ್ನೊಂದು ಕಾಲು ಇತ್ತ ಇಟ್ಟರೆ ವಿದ್ಯುತ್ ಆಘಾತಕ್ಕೆ ಬಲಿಯಾಗುತ್ತದೆ. ಇಂತಹ ಘಟನೆಗಳು ಆಗಾಗ ಅಪರೂಪಕ್ಕೆ ನಡೆಯುತ್ತಿರುತ್ತವೆ.

ಕಲರ್ ಟಿವಿ ಸುತ್ತಲೂ ಕಪ್ಪಗಿನ ಪಟ್ಟಿ ಇರುತ್ತದೆ ಯಾಕೆ?
ಒಂದು ರೀತಿಯಲ್ಲಿ ಹೇಳಬೇಕಾದರೆ ಬಣ್ಣದ ಟಿವಿ ಅಂಚಿನ ಸುತ್ತಲೂ ಕಾಣಿಸುವ ಕಪ್ಪಗಿನ ಪಟ್ಟಿ ಟಿವಿಯಲ್ಲಿನ ಪಿಕ್ಚರ್ ಟ್ಯೂಬ್‌ಗೆ ರಕ್ಷಣಾ ಕವಚದಂತೆ. ಪಿಕ್ಚರ್ ಟ್ಯೂಬ್ ಒಳಗೆ ಇರುವುದು ಶೂನ್ಯ ಪ್ರದೇಶ ಆದಕಾರಣ ಅದು ಟಿವಿ ಒಳಗೆ ಇರುವ ವಾತಾವರಣ ಒತ್ತಡವನ್ನು ತಡೆದುಕೊಳ್ಳಬೇಕು. ಹಳೆ ಕಾಲದ ಟಿವಿಗಳಲ್ಲಿ ಒಂದು ವಿಶೇಷವಾದ ಪ್ಲಾಸ್ಟಿಕ್ ಶೀಲ್ಡ್‌ಗಳು ಪಿಕ್ಚರ್ ಟ್ಯೂಬ್ ಸುತ್ತಲೂ ಅಳವಡಿಸಲಾಗುತ್ತಿತ್ತು. ಪಿಕ್ಚರ್ ಟ್ಯೂಬ್‌ ಒಳಗೆ, ಹೊರಗಿನ ವಾತಾವರಣ ಒತ್ತಡದ ವ್ಯತ್ಯಾಸದಿಂದ ಸ್ಫೋಟ ಸಂಭವಿಸದಂತೆ ಇವು ಕಾಪಾಡುತ್ತವೆ... ಆದರೆ ಈಗಿನ ಟಿವಿಗಳಲ್ಲಿ ಸ್ಫೋಟದಿಂದ ರಕ್ಷಣೆಗಾಗಿ ಪ್ಲಾಸ್ಟಿಕ್ ಶೀಲ್ಡ್‌ಗಳಿಗೆ ಬದಲಾಗಿ "ಕಿಮ್ ಕೋಡ್" ಎಂಬ ಲೋಹವನ್ನು ಪಿಕ್ಚರ್ ಟ್ಯೂಬ್ ಸುತ್ತಲೂ ಮೇಲ್ಮೈ ಕರ್ಷಣದಿಂದ ಕೂಡಿದ ಪಟ್ಟಿಯನ್ನು ಕಟ್ಟುತ್ತಾರೆ....ನಮಗೆ ತೆರೆಯ ಅಂಚಿನ ಸುತ್ತಲೂ ಕಾಣಿಸುವ ಕಪ್ಪಗಿನ ಪಟ್ಟಿ ಇದೇ.

No comments