Header Ads

test

ಅಸ್ಪೃಶ್ಯರ ಬಗ್ಗೆ ಐಎಎಸ್ ಅಧಿಕಾರಿ ನೇಹಾ ಮಾಡಿದ ಕೆಲಸಕ್ಕೆ ನೀವೆಲ್ಲಾ ಫಿದಾ ಆಗುತ್ತೀರ..!

ವಿಜ್ಞಾನ, ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರೆದಿದ್ದರೂ ಇನ್ನೂ ಕೆಲವು ಸಾಮಾಜಿಕ ಜಾಡ್ಯಗಳು ನಮ್ಮನ್ನು ಬಿಟ್ಟಿಲ್ಲ. ಸ್ವಾತಂತ್ರ ಬಂದು ಅಷ್ಟೆಲ್ಲಾ ವರ್ಷಗಳಾದರೂ ಇನ್ನೂ ಕೆಲವು ಅನಾಗರೀಕ ವರ್ತನೆಗಳು ಮಾತ್ರ ನಮ್ಮಲ್ಲಿ ಹಾಗೆಯೇ ಉಳಿದಿವೆ. ಅವುಗಳಲ್ಲಿ ಮುಖ್ಯವಾಗಿ ಅಸ್ಪೃಶ್ಯತೆ. ರಾಜಸ್ಥಾನದ ಧೋಲ್ಪುರದಲ್ಲಿ ಅಂತಹದ್ದೇ ಒಂದು ಪ್ರಕರಣ ಇತ್ತೀಚೆಗೆ ವರದಿಯಾಗಿದೆ. ಕೆಲಸದ ನಿಮಿತ್ತ ಅಲ್ಲಿಗೆ ಹೋಗಿದ್ದ ಐಪಿಎಸ್ ಅಧಿಕಾರಿ ನೇಹಾರವರಿಗೆ ಅಲ್ಲಿ ನಡೆಯುತ್ತಿರುವ ಅನಾಗರಿಕ ವರ್ತನೆ ಅವರನ್ನು ಕೆರಳಿಸಿತು. ದಲಿತರ ಮೇಲೆ ನಡೆಯುತ್ತಿರು ದೌರ್ಜನ್ಯವನ್ನು ನೋಡಿ ಅವರು ಸುಮ್ಮನೆ ಕೂರಲಿಲ್ಲ.


ಆ ಜಾಗದಲ್ಲಿ ಬಡ ತಾಯಿ ಮತ್ತು ಮಗ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರ ಕೈಲಿ ನೀರನ್ನು ಯಾರಿಗೂ ಕೊಡಿಸುತ್ತಿರಲಿಲ್ಲ. ಬೇರೆಯವರು ಮಾತ್ರ ನೀರು ಕೊಡುತ್ತಿದ್ದರು. ಇದನ್ನು ಗಮನಿಸಿದ ನೇಹಾ ಏನಿದು ಎಂದು ಕೇಳಿದರು. ಅಯ್ಯೋ ಮೇಡಂ ಅವರು ವಾಲ್ಮೀಕಿ ಜನಾಂಗದವರು. ಅವರಿಂದ ನಾವು ನೀರು ಕುಡಿಯುವುದಿಲ್ಲ. ಇಲ್ಲಿ ಅವರನ್ನು ಅಸ್ಪೃಶ್ಯರು ಎಂದು ಪರಿಗಣಿಸಲಾಗುತ್ತದೆ ಎಂದರು. ಇದನ್ನು ಕೇಳಿ ನೇಹಾ ಅವರಿಗೆ ಶಾಕ್ ಆಯಿತು.

ಕೂಡಲೆ ಅವರು ಆ ಬಡ ತಾಯಿ ಮತ್ತು ಮಗನ ಕೈಲಿ ನೀರನ್ನು ತರಿಸಿ ತಾವೇ ಸ್ವತಃ ಕುಡಿದರು. ಈ ರೀತಿಯ ಆಚಾರಣೆ ಸಲ್ಲದು ಎಂದು ಅಲ್ಲಿನವರಿಗೆ ತಿಳಿ ಹೇಳಿದರು ನೇಹಾ. ಜನರು ಈ ರೀತಿಯ ಮನೋಭಾವ ಕೈಬಿಡಬೇಕು ಎಂದು ಬುದ್ಧಿವಾದ ಹೇಳಿದರು.

ರಾಜಸ್ಥಾನದಲ್ಲಿ ವಾಲ್ಮೀಕಿ ಸಮುದಾಯವನ್ನು ಇನ್ನೂ ಕೆಳದರ್ಜೆಯವರಂತೆ ಕಾಣಲಾಗುತ್ತದೆ. ಅವರನ್ನು ಅಸ್ಪೃಶ್ಯರಂತೆ ನೋಡುತ್ತಾರೆ. 2011ರ ಜನಗಣತಿ ಪ್ರಕಾರ ರಾಜಾಸ್ಥಾನದಲ್ಲಿ ಶೇ.17ರಷ್ಟು ಜನಸಂಖ್ಯೆ ದಲಿತ ಸಮುದಾಯದ್ದು. ಅದೇನೇ ಇರಲಿ ಇನ್ನೂ ಈ ರೀತಿಯ ಆಚರಣೆಗಳು ಇವೆ ಎಂದರೆ ನಮ್ಮ ದೇಶಕ್ಕೆ ಇನ್ನೂ ಸಂಪೂರ್ಣ ಸ್ವಾತಂತ್ರ್ಯ ಬಂದಿಲ್ಲ ಅನ್ನಿಸುತ್ತದೆ.

ಅಸ್ಪೃಶ್ಯತೆ ನಿವಾರಣೆ ಕಾಯಿದೆ ಏನು ಹೇಳುತ್ತದೆ?


ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿರುದ್ಧ ಅಸ್ಪೃಶ್ಯತೆ ತೋರಿದವರಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಅಸ್ಪೃಶ್ಯತಾ ನಿವಾರಣೆ) ತಿದ್ದುಪಡಿ ಕಾಯ್ದೆ– 2015 (ಜನವರಿ 26) ಜಾರಿಯಾಗಲಿದೆ. ಈ ಸಮುದಾಯಗಳ ಜನರಿಗೆ ಅವಮಾನ ಮಾಡುವಂತಹ ಯಾವುದೇ ಕೃತ್ಯಗಳು, ಜಾತಿಯ ಕಾರಣದಿಂದ ಹಕ್ಕುಗಳ ನಿರಾಕರಣೆಯನ್ನು ಈ ಕಾಯ್ದೆ ಅಸ್ಪೃಶ್ಯತೆ ಎಂದೇ ಪರಿಗಣಿಸುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಅಸ್ಪೃಶ್ಯತಾ ನಿವಾರಣೆ) ಕಾಯ್ದೆ 1989ರ ಬದಲಿಗೆ ಈ ಹೊಸ ಕಾನೂನು ಅಸ್ತಿತ್ವದಲ್ಲಿದೆ.

No comments