Header Ads

test

ಆ ದಿನ ಆಕೆ ಪರೀಕ್ಷೆ ಬರೆಯುತ್ತಿದ್ದರೆ ಬೈದರು, ಸತ್ತು ಹೋಗುತ್ತೀಯ ಅಂದರು, ಹೆರಿಗೆ ನೋವಿನಲ್ಲಿ ಆಕೆ ಬರೆದಪರೀಕ್ಷೆ ಜೀವನವನ್ನೇ ಬದಲಾಯಿಸಿತು..!

"ಅಗತ್ಯ" ಯಾವುದೇ ಕೆಲಸವನ್ನಾದರೂ ಮಾಡುವಂತೆ ಮಾಡುತ್ತದೆ. ಛಲ ಇದ್ದರೆ ಏನೇ ಕಷ್ಟ ಬಂದರೂ ಭರಿಸುವಂತೆ ಮಾಡುತ್ತದೆ. ಜೀವನದಲ್ಲಿ ಏನಾದರೂ ಗುರಿಯೊಂದಿಗೆ ಮುಂದೆ ಸಾಗುತ್ತಿರುವ ಸಮಯದಲ್ಲಿ ಅದಕ್ಕೆ ಸಾಕಷ್ಟು ಅಡೆತಡೆಗಳು ಬಂದರೂ ಸಹ ಯಾವುದನ್ನೂ ಸಹ ಲೆಕ್ಕಿಸದೆ ಮುಂದೆ ಸಾಗಬೇಕು ಅನ್ನಿಸುತ್ತದೆ. ಆ ರೀತಿ ಎಲ್ಲಾ ಅಡೆತಡೆಗಳನ್ನು ಎದುರಿಸಿದಾಗ ಅದ್ಭುತವಾದ ಜಯ ನಿಮ್ಮದಾಗುತ್ತದೆ. ಕಷ್ಟಗಳು, ನೋವುಗಳಿಗೆ ಭಯಬಿದ್ದು ಬೇಡ ಬಿಡು ಎಂದುಕೊಂಡರೆ ಮುಂದಿರುವ ಯಶಸ್ಸನ್ನು ತಲುಪಲು ಸಾಧ್ಯವಾಗಲ್ಲ. ಇತ್ತೀಚೆಗೆ ಆಂಧ್ರ ಮೂಲದ ಸ್ವಾತಿ ಎಂಬುವವರು ಸಾಧಿಸಬೇಕು ಎಂಬ ಛಲದೊಂದಿಗೆ ತನ್ನ ಗುರಿಯನ್ನು ತಲುಪಿ ನಾಲ್ಕು ಮಂದಿಗೆ ಆದರ್ಶಪ್ರಾಯವಾಗಿದ್ದಾರೆ.




ಸ್ವಾತಿ ಆಂಧ್ರಪ್ರದೇಶದ ಡಿಎಸ್ಸಿ ಪರೀಕ್ಷೆ ಬರೆದು ಶಿಕ್ಷಕಿಯಾಗಿ ಆಯ್ಕೆಯಾಗಿದ್ದಾರೆ. ಪರೀಕ್ಷೆ ದಿನ ಆಕೆ ಪಟ್ಟ ಪಾಡನ್ನು ಇತ್ತೀಚೆಗೆ ಆಕೆ ಹೇಳಿಕೊಂಡು ಎಲ್ಲರ ಕಣ್ಣನ್ನೂ ಒದ್ದೆ ಮಾಡಿದ್ದಾರೆ. ತುಂಬು ಗರ್ಭಿಣಿಯಾಗಿದ್ದ ಸಮಯದಲ್ಲಿ ಪರೀಕ್ಷೆ ಬಂತು. ತುಂಬಾ ಸಮಯದಿಂದ ಕಾಯುತ್ತಿದ್ದ ಪರೀಕ್ಷೆ. ಈ ಪರೀಕ್ಷೆ ಬರೆಯದಿದ್ದರೆ ಮತ್ತೆ ಡಿಎಸ್ಸಿ ಯಾವಾಗ ಮಾಡುತ್ತಾರೋ ಗೊತ್ತಿಲ್ಲ. ಹಾಗಾಗಿ ಪಟ್ಟು ಬಿಡದೆ ಆ ಪರೀಕ್ಷೆ ಬರೆಯಬೇಕೆಂದು ನಿರ್ಧರಿಸಿದರು. ಗರ್ಭಿಣಿಯಾದರೂ ನಿತ್ಯ ಕನಿಷ್ಠ 10 ಗಂಟೆಗೂ ಹೆಚ್ಚು ಹೊತ್ತು ಅಧ್ಯಯನ ಮಾಡುತ್ತಿದ್ದರು. ಚೆನ್ನಾಗಿ ಓದಿದರು. ಒಂದು ದಿನ ಪರೀಕ್ಷೆ ಬಂದೇ ಬಿಟ್ಟಿತು. ಆ ದಿನ ಆಟೋದಲ್ಲಿ ಪರೀಕ್ಷೆಗೆ ಹೋಗುತ್ತಿದ್ದಳು. ಆ ಸಮಯದಲ್ಲೇ ಹೆರಿಗೆ ನೋವು ಆರಂಭವಾಯಿತು.

ತಾಯಿಯೊಂದಿಗೆ ಆಟೋದಲ್ಲಿ ಸ್ವಾತಿ ಪರೀಕ್ಷಾ ಕೇಂದ್ರಕ್ಕೆ ತಲುಪಿದಳು. ತಾಯಿಗೆ ಹೆರಿಗೆ ನೋವಿನ ಸಂಗತಿ ತಿಳಿಸಬಾರದು ಎಂದು ಪ್ರಯತ್ನಿಸಿದಳು. ಆದರೆ ಆ ನೋವಿನ ತೀವ್ರತೆ ತಾಯಿಗೆ ಗೊತ್ತಾಯಿತು. ಕೂಡಲೆ ಆಸ್ಪತ್ರೆಗೆ ಹೋಗೋಣ ಎಂದು ತಾಯಿ ಗೋಗರೆದರು. ಅಲ್ಲಿಗೆ ಬಂದ ನೂರಾರು ಮಂದಿ ಸಹ ಆಕೆಯನ್ನು ಬೈದು ಆಸ್ಪತ್ರೆಗೆ ಹೋಗು ಎಂದರು. ಆದರೆ ಆಕೆ ಮಾತ್ರ ತನ್ನ ತಂದೆ ಬಯಕೆ, ತನ್ನ ತಂದೆ ನೋವನ್ನು ತೀರಿಸಲು ಆ ಪರೀಕ್ಷೆ ಬರೆಯಬೇಕೆಂದು ಬಿಗಿ ಪಟ್ಟಿನಿಂದ ಪ್ರಯತ್ನಿಸಿದರು.

ಅಂದುಕೊಂಡಂತೆ ಎರಡೂವರೆ ಗಂಟೆ ಅತ್ಯಂತ ಕಷ್ಟಪಟ್ಟು ಆಕೆ ಪರೀಕ್ಷೆ ಬರೆದಳು. ಪರೀಕ್ಷೆ ಬರೆದ ಕೂಡಲೆ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟು ಕಷ್ಟಪಟ್ಟು ಬರೆದ ಸ್ವಾತಿಗೆ ಕಡೆಗೂ ಸರಕಾರಿ ಉದ್ಯೋಗ ಸಿಕ್ಕಿತು. ಈಗ ಅವರ ಕುಟುಂಬ ತುಂಬಾ ಸಂತೋಷವಾಗಿದೆ. ಆ ದಿನ ಪಟ್ಟ ಕಷ್ಟ ಜೀವನ ಪರ್ಯಂತ ಸಂತೋಷ ಅನುಭವಿಸುತ್ತೇನೆ ಎಂದಿದ್ದಾರೆ ಸ್ವಾತಿ. ಗುರಿಯ ಮುಂದೆ ಆಕೆಗೆ ಎದುರಾದ ತೊಂದರೆ, ಕಷ್ಟಗಳನ್ನು ಮೀರಿ ಮುಂದಡಿ ಇಟ್ಟಾಗ ಯಶಸ್ಸು ಸಾಧ್ಯವಾಗುತ್ತದೆ ಎಂಬುದಕ್ಕೆ ಸ್ವಾತಿ ಅನುಭವವೇ ಸಾಕ್ಷಿ.

No comments