Header Ads

test

ಮಕ್ಕಳನ್ನು ಪಡೆಯಲು ಪುರುಷರಿಗೆ ಸೂಕ್ತ ವಯಸ್ಸು ಯಾವುದು? ನಿಮಗೆ ಗೊತ್ತಿಲ್ಲದೆ ಮಾಡುವ ತಪ್ಪು ಇದೇನೋಡಿ.!

ಮಕ್ಕಳನ್ನು ಪಡೆಯಲು ಆಗಲೇ ಏನು ಅವಸರ! ಕರಿಯರ್‌ನಲ್ಲಿ ಕನಿಷ್ಠ ಎರಡು ಪ್ರಮೋಷನ್ಸ್ ಸಾಧಿಸಬೇಕು. ಮನೆ ಖರೀದಿಸಬೇಕು. ಹಣ ಒಂದಷ್ಟು ಸಂಪಾದಿಸಬೇಕು. ಆಗ ನೋಡೋಣ! ಆದರೂ ಈ ದಿನಗಳಲ್ಲಿ ಮಕ್ಕಳು ಆಗಲ್ಲ ಎಂಬ ಭಯ ಯಾಕೆ? ಆಧುನಿಕ ವೈದ್ಯ ಪರಿಜ್ಞಾನ ಲಭ್ಯವಿರಬೇಕಾದರೆ ಭಯಬೀಳುವ ಅಗತ್ಯವಿಲ್ಲ... ಈ ರೀತಿ ಆಲೋಚಿಸುತ್ತಿದ್ದಾರೆ ನೂತನ ದಂಪತಿಗಳು. ಹಾಗಾಗಿ ಮೂವತ್ತು ವರ್ಷ ದಾಟಿದ ಬಳಿಕ ಮಕ್ಕಳ ಬಗ್ಗೆ ಆಲೋಚಿಸೋಣ ಎಂದುಕೊಳ್ಳುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಸಂತಾನ ಸಾಫಲ್ಯತೆ ಬಗ್ಗೆ ಸೂಕ್ತ ಅರಿವು ಇಲ್ಲದೆ ಇಂತಹ ಅಭಿಪ್ರಾಯಗಳು ಹೆಚ್ಚುತ್ತಿವೆ.




ಮಕ್ಕಳನ್ನು ಹೆರಲು ಹುಡುಗಿಗೆ ಸೂಕ್ತ ಸಮಯ ಯಾವುದು ಎಂಬ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆಯಾದರೂ ಪುರುಷರು ಯಾವಾಗ ತಂದೆಯಾಗುವುದು ಕರೆಕ್ಟ್ ಎಂಬ ಬಗ್ಗೆ ಬಹಳಷ್ಟು ಕಡಿಮೆ ಚರ್ಚಿಸಲಾಗಿದೆ. ನಿಜವಾಗಿ, ಪುರುಷರೂ ಸಹ ಆರೋಗ್ಯಕರವಾದ ಮಕ್ಕಳನ್ನು ಪಡೆಯಲು ಸೂಕ್ತ ವಯಸ್ಸು ಅಗತ್ಯ ಎಂಬ ಅರಿವನ್ನು ಹೊಂದಿರಬೇಕು. ಒಂದು ಅಧ್ಯಯನದ ಪ್ರಕಾರ, 40 ವರ್ಷಕ್ಕೂ ಹೆಚ್ಚಾದ ಸಂಗಾತಿ ಇರುವ ಮಹಿಳೆಯರಲ್ಲಿ, ಗರ್ಭಧಾರಣೆಗೆ ಹೆಚ್ಚು ಸಮಯ ಆಗುತ್ತದೆ. ಆದರೆ 25 ವರ್ಷಗಳ ನಡುವಿನ ಸಂಗಾತಿ ಇರುವ ಮಹಿಳೆಯರು ಬೇಗ ಗರ್ಭಿಣಿಯರಾಗುತ್ತಾರೆ. ಇದಕ್ಕೆ ಸಂಬಂಧಿಸಿದ ಇನ್ನಷ್ಟು ವಾಸ್ತವಗಳು ಇಲ್ಲಿವೆ.

ಒಬ್ಬ ವ್ಯಕ್ತಿ 30 ವರ್ಷ ವಯಸ್ಸು ದಾಟಿದ ಅಂದರೆ, ಆತನ ಟೆಸ್ಟೋಸ್ಟೆರಾನ್ ಪ್ರಮಾಣ ವರ್ಷಕ್ಕೆ ಶೇ.1ರಷ್ಟು ಕಡಿಮೆಯಾಗುತ್ತಾ ಹೋಗುತ್ತದೆ. ವೀರ್ಯಾಣುಗಳ ಉತ್ಪತ್ತಿ ಮೇಲೂ ಪ್ರಭಾವ ಬೀರುತ್ತದೆ. ವೀರ್ಯದ ಗುಣಮಟ್ಟದ ವಿಷಯಕ್ಕೆ ಬಂದರೆ, 35 ವರ್ಷಗಳ ಬಳಿಕ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ವಯಸ್ಸು ಹೆಚ್ಚಾಗುತ್ತಾ ಹೋದಂತೆ, ವೀರ್ಯಾಣುಗಳ ಚಲನೆ ಬಗ್ಗೆ ಸಹ ಪ್ರಭಾವ ಬೀಳುತ್ತದೆ. ಶುಕ್ರಕಣಗಳ ಗುಣಮಟ್ಟ, ಚಲನೆ, ಆರೋಗ್ಯ 25 ವರ್ಷಕ್ಕೂ ಮೊದಲು ಸರಿಯಾಗಿ ಇರುತ್ತದೆ. 55 ವರ್ಷಗಳ ಬಳಿಕ ಗುಣಮಟ್ಟ ಸಂಪೂರ್ಣ ಕಡಿಮೆಯಾಗುತ್ತದೆ. ಆ ಸಮಯಕ್ಕೆ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಶೇ.50ಕ್ಕೂ ಹೆಚ್ಚು ಕಳೆದುಕೊಳ್ಳುತ್ತಾರೆ.

ವಯಸ್ಸಷ್ಟೇ ಅಲ್ಲದೆ, ಪುರುಷರ ಸಂತಾನೋತ್ಪತ್ತಿ ಮೇಲೆ ಪ್ರಭಾವ ತೋರುವ ವಿಷಯಗಳೇನು ಎಂದರೆ? ಧೂಮಪಾನ, ಪೋಷಕ ಆಹಾರ ಕೊರತೆ, ಬಿಗಿಯಾದ ಒಳ ಉಡುಪುಗಳು ಧರಿಸುವುದು, ನಿದ್ರಾಹೀನತೆ ಇವೆಲ್ಲಾ ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ. ಆದರೆ ಒಬ್ಬ ವ್ಯಕ್ತಿ ತಂದೆಯಾಗಲು ಸೂಕ್ತ ಸಮಯ ಯಾವುದು? 22-25 ವರ್ಷಗಳ ವಯಸ್ಸು ಎಲ್ಲ ರೀತಿಯಲ್ಲೂ ಸೂಕ್ತವಾದದ್ದಾದರೂ, ಬಹಳಷ್ಟು ಮಂದಿ ಆ ಸಮಯಕ್ಕೆ ಇನ್ನೂ ಸೆಟ್ಲ್ ಆಗಿರಲ್ಲ. ಹಾಗಾಗಿ 28-30 ವರ್ಷಗಳ ನಡುವಿನ ವಯಸ್ಸು ಒಬ್ಬ ವ್ಯಕ್ತಿ ತಂದೆಯಾಗಲು ಉತ್ತಮ ಸಮಯ. 30ರ ಬಳಿಕ ಪುರುಷರಿಗೂ ಸಹ ಟೈಮ್ ಬಾಂಬ್ ಆರಂಭವಾದಂತೆ!

ಒಬ್ಬ ಯುವಕನಿಗೆ ತನ್ನ ಯುಕ್ತ ವಯಸ್ಸಿನಲ್ಲಿ ವೀರ್ಯಾಣುಗಳ ಉತ್ಪತ್ತಿ ಆರಂಭವಾಗುತ್ತದೆ. ಆ ಸಮಯದಲ್ಲಿ ಸಹ ಮಕ್ಕಳನ್ನು ಪಡೆಯಬಹುದು. ಹಾಗಾಗಿ ಅಷ್ಟು ಚಿಕ್ಕ ವಯಸ್ಸಿನಲ್ಲಿ ಆ ರೀತಿ ಹಾಗದೆ ಎಚ್ಚರ ವಹಿಸುವುದೇ ಉತ್ತಮ. 30 ವರ್ಷಗಳ ಬಳಿಕ, ಪ್ರತಿ ವರ್ಷ ವೀರ್ಯ ಉತ್ಪತ್ತಿ ಪ್ರಮಾಣ ನಿಧಾನಕ್ಕೆ ಕಡಿಮೆಯಾಗುತ್ತದೆ. 35 ವರ್ಷಗಳ ಬಳಿಕ ಡಿಎನ್‌ಎನಲ್ಲೂ ಬದಲವಣೆ ನಡೆಯುತ್ತದೆ. ಹಾಗಾಗಿ ಅದಕ್ಕೂ ಮೊದಲೇ ಮಕ್ಕಳನ್ನು ಪಡೆಯುವುದು ಸೂಕ್ತ ಎನ್ನುತ್ತಿದ್ದಾರೆ ತಜ್ಞರು.

No comments