Header Ads

test

ವಿಚಿತ್ರ ಕಾರಣಗಳಿಂದ ನಿಂತು ಹೋಗುತ್ತಿರುವ ಮದುವೆಗಳು! ಕಾರಣ ಗೊತ್ತಾದರೆ ನಗಾಡ್ತೀರ..!

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಚಿತ್ರ ವಿಚಿತ್ರ ಕಾರಣಗಳಿಂದ ವಿವಾಹಗಳು ಮುರಿದು ಬೀಳುತ್ತಿವೆ. ಹುಡುಗ ಅಂಜುಬುರುಕ ಎಂದು, ಹುಡುಗಿ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಏನೋ ಸಬೂಬು ಹೇಳಿ ಹಸೆಮಣೆ ಹತ್ತದೇನೇ ಮದುವೆಗಳು ನಿಂತುಹೋಗುತ್ತಿವೆ. ಇತ್ತೀಚೆಗೆ ವಾಟ್ಸಾಪ್‌ನಲ್ಲೇ ಮುಳುಗಿಹೋದ ಓರ್ವ ಯುವತಿಗೆ ಉತ್ತರ ಪ್ರದೇಶದಲ್ಲಿ ಭಾವಿ ಪತಿ ಶಾಕ್ ನೀಡಿದ್ದಾನೆ. ವಾಟ್ಸಾಪ್‌ನಲ್ಲಿ ಗಂಟೆಗಟ್ಟಲೆ ಕಳೆಯುತ್ತಾ ಭಾವಿ ಅತ್ತೆ ಮಾವನಿಗೆ ತುಂಬಾ ಸಂದೇಶಗಳನ್ನು ಕಳುಹಿಸಿ ಮದುವೆ ರದ್ದಾಗಿದ್ದಾಗಿ ಸ್ಪಷ್ಟ ಪಡಿಸಿದ್ದಾರೆ. ಈ ಘಟನೆ ಯೂಪಿಯಲ್ಲಿನ ಆಮ್ರೋಹಿ ಜಿಲ್ಲೆಯಲ್ಲಿ ನಡೆದಿದೆ.



ಆಮ್ರೋಹಿ ಜಿಲ್ಲೆಯಲ್ಲಿನ ನೌಗಾವ್ ಸಾದತ್ ಎಂಬ ಗ್ರಾಮದ ಈರೋಜ್ ಮೆಹಂದಿ ಮಗಳಿಗೆ ಫಕೀರ್‌ಪುರಾ ಮೂಲದ ಖಮರ್ ಹೈದರ್ ಮಗನ ಜತೆಗೆ ಮದುವೆ ನಿಶ್ಚಯವಾಯಿತು. ಆದರೆ ಅಂದಿನಿಂದ ಹುಡುಗಿ ವಾಟ್ಸಾಪ್‌ನಲ್ಲಿ ಭಾವಿ ಅತ್ತ ಮಾವಂದಿರಿಗೆ ಮನಬಂದಂತೆ ಸಂದೇಶಗಳನ್ನು ಕಳುಹಿಸಿದ್ದಾಳೆ. ಹಾಗಾಗಿ ಈ ತಿಂಗಳ 5ರಂದು ವಿವಾಹ ಮಂಟಪಕ್ಕೆ ವರನ ಕುಟುಂಬಿಕರು ಯಾರೂ ಬರಲಿಲ್ಲ. ಇದರಿಂದ ಹುಡುಗಿಯ ತಂದೆ ಫೋನ್ ಮಾಡಿದರೆ ತಾವು ಮದುವೆಯನ್ನು ರದ್ದು ಮಾಡಿದ್ದಾಗಿ ವರನ ತಂದೆ ತಿಳಿಸಿದ್ದಾರೆ. ಹುಡುಗಿ ಯಾವಾಗಲೂ ವಾಟ್ಸಾಪ್‌ನಲ್ಲಿರುತ್ತಾ ಸಂದೇಶಗಳನ್ನು ಕಳುಹಿಸುತ್ತಿರುವ ಕಾರಣ ನಮ್ಮ ಹುಡುಗ ಮದುವೆಗೆ ಒಪ್ಪಿಕೊಳ್ಳುತ್ತಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ. ಇದರಿಂದ ವಧುವಿನ ತಂದೆ ಪೊಲೀಸರ ಮೊರೆ ಹೋಗಿದ್ದಾರೆ. ವರನ ಮನೆಯವರು ಕೇಳಿದ ರೂ.65 ಲಕ್ಷಗಳ ವರದಕ್ಷಿಣೆಯನ್ನು ಕೊಡದ ಕಾರಣ ಈ ನಾಟಕ ಆಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಇತ್ತೀಚಿನ ಕಾಲದಲ್ಲಿ ಇಂತಹ ಚಿತ್ರ ವಿಚಿತ್ರ ಕಾರಣಗಳಿಂದ ಮದುವೆಗಳು ನಿಲ್ಲುತ್ತಿವೆ. ಅವುಗಳಲ್ಲಿ ಕೆಲವು ಇಲ್ಲಿವೆ ನೋಡಿ...

♦ ಉತ್ತರ ಪ್ರದೇಶದಲ್ಲಿನ ರಾಂಪೂರ ಮೂಲದ ಓರ್ವ ಯುವಕ ತಾವು ಬಯಸಿದ ಮಾಂಸಾಹಾರವನ್ನು ವಧುವಿನ ಕುಟುಂಬ ಸದಸ್ಯರು ಬಡಿಸಲಿಲ್ಲ ಎಂಬ ಕೋಪದಿಂದ ಮದುವೆಯನ್ನೇ ರದ್ದು ಮಾಡಿಕೊಂಡ.

♦ ಔತಣದಲ್ಲಿ ಮದು ಮಗ ಸಹೋದರನಿಗೆ ಇನ್ನೊಂದು ರಸಗುಲ್ಲವನ್ನು ವಧುವಿನ ಕಡೆಯ ಬಂಧುಗಳು ಕೊಡದೆ ನಿರಾಕರಿಸಿದ ಕಾರಣ ಉತ್ತರ ಪ್ರದೇಶದಲ್ಲಿ ಇನ್ನೊಂದು ಮದುವೆ ನಿಂತು ಹೋಯಿತು.

♦ ಇನ್ನು ಯೂಪಿಯಲ್ಲಿ ಶಾಜಹಾನ್‌ಪುರ ಮೂಲದ ಯುವತಿ ದಿಬ್ಬಣದ ಸಂದರ್ಭದಲ್ಲಿ ಮದು ಮಗ ಮಾಡಿದ ನಾಗಿಣಿ ಡ್ಯಾನ್ಸ್‌ನಿಂದ ಬೇಸರಗೊಂಡು ವಿವಾಹವನ್ನೇ ರದ್ದು ಮಾಡಿಕೊಂಡಳು.

♦ ಬಿಹಾರದಲ್ಲಿನ ಸರನ್‌ನಲ್ಲಿ ಇನ್ನಷ್ಟು ವಿಚಿತ್ರ ಘಟನೆಗಳು ನಡೆದವು. ಮೆರವಣಿಗೆಯಲ್ಲಿ ಬರುತ್ತಿದ್ದ ಮದುಮಗ ಸಿಡಿನ ಅಬ್ಬರಕ್ಕೆ ಬೆಚ್ಚಿ ಬಿದ್ದ ಕಾರಣ ಅಷ್ಟು ಅಂಜುಬುರುಕ ಎಂದು ತಾನು ಮದುವೆಯಾಗುತ್ತಿಲ್ಲ ಎಂದು ಇನ್ನೊಬ್ಬ ಯುವತಿ ನಿರಾಕರಿಸಿದ್ದಳು. ಹಾಗಾಗಿ ಹಸೆಮಣೆ ತನಕ ಬಂದಿದ್ದ ಮದುವೆ ಮುರಿದು ಬಿತ್ತು.

No comments