Header Ads

test

ರಿಯಲ್ ಲೈಫ್...! ಅಂದು ಕಸದ ತೊಟ್ಟಿಯಲ್ಲಿ ಚಿಣ್ಣಾರಿ... ಇಂದು ಅಸೆಸ್ಟೆಂಟ್ ಕಮೀಷನ ಹುದ್ದೆಯಲ್ಲಿ..!

ಮಣ್ಣಿನಲ್ಲಿ ಸಿಕ್ಕ ಮಾಣಿಕ್ಯ.. ಯಾವ ತಾಯಿ ಹಡೆದ ಮಗುವೋ.. ಕಸದ ತೊಟ್ಟಿ ಪಾಲಾಗಿತ್ತು... ಅದೃಷ್ಟ ಚೆನ್ನಾಗಿದ್ದು ಒಬ್ಬ ತಂದೆಯಲ್ಲದ ತಂದೆ ಕಣ್ಣಿಗೆ ಬಿದ್ದಳು. ಅಸ್ಸಾಂನಲ್ಲಿನ ತೀನ್ ಸುಖಿಯಾ ಜಿಲ್ಲೆಯ ಸೋಬರನ್ ಎಂಬುವವರು ತಳ್ಳು ಗಾಡಿ ಮೇಲೆ ತರಕಾರಿ ಹಾಕಿಕೊಂಡು ಬೀದಿ ಬೀದಿ ಸುತ್ತುತ್ತಾ ವ್ಯಾಪಾರ ಮಾಡುತ್ತಿದ್ದರು. ಅದೇ ಅವರ ಜೀವನಕ್ಕೆ ಆಧಾರ. ತಂದೆ ತಾಯಿ ಇಬ್ಬರೂ ಹಿರಿಯರಾದ ಕಾರಣ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ತನ್ನ ಮೇಲೆ ಬಿದ್ದ ಕಾರಣ ಮದುವೆ ಬಗ್ಗೆ ಆಲೋಚಿಸುವಷ್ಟು ಸಮಯ ಇರುತ್ತಿರಲಿಲ್ಲ. ಎಂದಿನಂತೆ ಅಂದೂ ತರಕಾರಿ ಮಾರಿ ಕತ್ತಲಾದ ಬಳಿಕ ಮನೆಗೆ ಮರಳುತ್ತಿದ್ದ. ಅಷ್ಟರಲ್ಲಿ ಒಂದು ಮಗುವಿನ ಅಳು ಕೇಳಿಸಿತು. ತಾಯಿಯ ಒಡಲಲ್ಲಿ ಇರಬೇಕಾದ ಮಗು ಕಸದ ತೊಟ್ಟಿಯಲ್ಲಿ ಅಳುತ್ತಾ ಕಾಣಿಸಿದಳು. ಓಡಿ ಹೋಗಿ ಸುತ್ತಲೂ ನೋಡಿದ. ಮಗುವಿಗೆ ಸಂಬಂಧಿಸಿದವರು ಯಾರೂ ಕಾಣಿಸಲಿಲ್ಲ. ಯಾವ ಜನ್ಮದ ಋಣಾನುಬಂಧವೋ. ತನಗಾಗಿಯೇ ಹುಟ್ಟಿದಳೇನೋ ಎಂದುಕೊಂಡು ಪ್ರೀತಿಯಿಂದ ಅದನ್ನು ಎತ್ತಿಕೊಂಡ. ಅಪ್ಪ ಅಮ್ಮ ಎಲ್ಲವೂ ತಾನೇ ಆಗಿ ಆ ಮಗುವನ್ನು ಬೆಳೆಸಿದ.



25 ವರ್ಷ ತುಂಬಿದ ಆ ಯುವತಿ... ಅಪ್ಪಾ ನಿನ್ನ ಕಷ್ಟ ವ್ಯರ್ಥ ಆಗಲಿಲ್ಲ... ಅಸಿಸ್ಟೆಂಟ್ ಕಮೀಷನರ್ ಆಗಿದ್ದೇನೆ ಎಂದು ತನಗೆ ಉದ್ಯೋಗ ಸಿಕ್ಕ ಆರ್ಡರ್ಸ್‌ನ್ನು ತಂದೆ ಸೋಬರನ್ ಕೈಯಲ್ಲಿ ಇಟ್ಟಳು. ಆ ಮಗು ಬಂದ ಬಳಿಕ ತನ್ನ ಜೀವನ ಬದಲಾಯಿತು. ತನ್ನ ಜೀವನದಲ್ಲಿ ಬೆಳಕು ಹಂಚಿದ ಆ ಪುಟಾಣಿಗೆ ಜ್ಯೋತಿ ಎಂದು ಹೆಸರಿಟ್ಟಿದ್ದ. ರಕ್ತ ಹಂಚಿಕೊಂಡು ಹುಟ್ಟಿದ ಮಗುವಿಗಾಗಿ ತಂದೆ ಪಡುವ ತಾಪತ್ರಯ, ಕಷ್ಟ ಎಲ್ಲವನ್ನೂ ಜ್ಯೋತಿಗಾಗಿ ಬಿದ್ದ ಸೋಬರನ್. ಒಳ್ಳೆಯ ಶಾಲೆಗೆ ಸೇರಿಸಿದ. ಚೆನ್ನಾಗಿ ಓದಬೇಕು ಎಂದು ಪ್ರೋತ್ಸಾಹಿಸಿದ. ಜ್ಯೋತಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕೆಂದು ಒಬ್ಬ ತಂದೆಯಾಗಿ ಸುಂದರ ಕನಸುಗಳನ್ನು ಕಂಡ. ಕಷ್ಟ ಗೊತ್ತಾಗದ ಹಾಗೆ, ಕಣ್ಣೀರು ಬಾರದ ಹಾಗೆ ಜ್ಯೋತಿಯನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಿದ.

ಇದರ ಪ್ರತಿಫಲವಾಗಿ ಜ್ಯೋತಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಗ್ರಿ ಪದವಿ ಪಡೆದಳು. ಅಸ್ಸಾಂ ಪಬ್ಲಿಕ್ ಸರ್ವೀಸ್ ಕಮೀಷನ್ ಪರೀಕ್ಷೆಗಳಿಗೆ ಹಾಜರಾಗಿ. ಪರೀಕ್ಷೆಗಳಲ್ಲಿ ಉತ್ತೀರ್ಣಳಾಗಿ ಸಂದರ್ಶನದಲ್ಲೂ ಗೆಲುವು ಸಾಧಿಸಿ ಇನ್‍ಕಮ್ ಟ್ಯಾಕ್ಸ್ ಅಸಿಸ್ಟೆಂಟ್ ಕಮೀಷನರ್ ಆಗಿ ಸರಕಾರದಿಂದ ಕೆಲಸ ಗಿಟ್ಟಿಸಿಕೊಂಡರು. ಮಗಳ ಯಶಸ್ಸನ್ನು ನೋಡಿದ ತಂದೆ ಸೋಬರನ್ ಕಣ್ಣಲ್ಲಿ ಆನಂದಬಾಷ್ಪ. ಅದನ್ನು ನೋಡಿ ಜ್ಯೋತಿ ಕಣ್ಣಲ್ಲೂ ಸಹ ಕಣ್ಣೀರು ಧಾರೆಯಾಗಿ ಹರಿಯಿತು. ಬೀದಿಪಾಲಾಗಬೇಕಿದ್ದ ಆಕೆಯನ್ನು ತನ್ನ ಜೀವನದಲ್ಲಿ ವಿದ್ಯಾವಂತಳನ್ನಾಗಿ ಮಾಡಿ ಜಗತ್ತಿನ ಮುಂದೆ ವಿಜಯಿಯಾಗಿ ನಿಲ್ಲಿಸಿದ ತಂದೆಗೆ ಮನಸ್ಸಿನಲ್ಲೆ ಧನ್ಯವಾದ ತಿಳಿಸಿದಳು.

No comments