Header Ads

test

ಇಲಿಗಳಿಗೆ ಬಾಲ ಉದ್ದವಾಗಿ ಇರುತ್ತದೆ ಯಾಕೆ ಗೊತ್ತಾ...! ಅದರಿಂದ ಏನಾದರೂ ಉಪಯೋಗ ಇದೆಯಾ?

ಸಾಮಾನ್ಯವಾಗಿ ಗಮನಿಸಿಯೇ ಇರುತ್ತೀರ. ಇಲಿಗಳ ಬಾಲ ತುಂಬಾ ಉದ್ದವಾಗಿ ಇರುತ್ತದೆ. ಯಾಕೆ ಅಷ್ಟೊಂದು ಉದ್ದ ಇದೆ ಎಂದು ನಿಮಗೂ ಅನ್ನಿಸಿರುತ್ತದೆ. ಇದರ ಹಿಂದೆ ವೈಜ್ಞಾನಿಕ ರಹಸ್ಯವೊಂದು ಅಡಗಿದೆ. ಅದೇನು ಅಂತ ಈಗ ತಿಳಿದುಕೊಳ್ಳೋಣ.

ಇಲಿಗಳು ತಮ್ಮ ದೇಹದ ಉಷ್ಣತೆಯನ್ನು ಅಗತ್ಯವಿದ್ದಷ್ಟು ಸರಿಪಡಿಸಿಕೊಳ್ಳಲು, ತಮ್ಮ ಚಲನೆಯನ್ನು ನಿಯಂತ್ರಿಸಿಕೊಳ್ಳಲು ಬಾಲ ಚೆನ್ನಾಗಿ ಉಪಯೋಗಕ್ಕೆ ಬರುತ್ತದೆ. ನಾವು ನಮ್ಮ ದೇಹದ ಚರ್ಮದ ಮೂಲಕ ಸುತ್ತಲೂ ಇರುವ ಪರಿಸರದಿಂದ ಬಿಸಿಯನ್ನು ಗ್ರಹಿಸುವುದು ಅಥವಾ ಪಸರಿಸುವ ಮೂಲಕ ದೇಹದ ಉಷ್ಣತೆ ಸಮತೋಲನದಿಂದ ಇರುವಂತೆ ನೋಡಿಕೊಳ್ಳುತ್ತೇವೆ. ಆದರೆ ಇಲಿಗಳು ಆ ರೀತಿ ಮಾಡಲ್ಲ.



ಯಕೆಂದರೆ... ಅವುಗಳ ದೇಹದ ಮೇಲೆ ತುಂಬಾ ಕೂದಲು ಇರುತ್ತದೆ. ಅವು ಉಷ್ಣ ನಿರೋಧಕಗಳು ಹಾಗಾಗಿ ಇಲಿಗಳು ದೇಹದಲ್ಲಿನ ಉಷ್ಣತೆಯನ್ನು ಚರ್ಮದ ಮೂಲಕ ಅಲ್ಲದೆ ಕೂದಲು ಇಲ್ಲದ ಬಾಲದ ಮೂಲಕ ನಿಯಂತ್ರಿಸಿಕೊಳ್ಳುತ್ತವೆ. ಇಲಿಗಳು ಅವುಗಳ ಹೃದಯದಿಂದ ಪ್ರವಹಿಸುವ ರಕ್ತದಿಂದ 0.1ರಿಂದ ಶೇ.10ರವೆಗೂ ಬಾಲದ ಮೂಲಕ ಪ್ರವಹಿಸುವಂತೆ ಮಾಡುತ್ತವೆ.
ಅದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಬಿಸಿಯಲ್ಲಿ ಶೇ.20ರಷ್ಟು ವಾತಾವರಣಕ್ಕೆ ಕಳುಹಿಸುತ್ತವೆ. ಆ ರೀತಿ ಬೇಸಿಗೆ ಕಾಲದಲ್ಲಿ ಅವುಗಳ ದೇಹದಲ್ಲಿ ಇರುವ ಹೆಚ್ಚು ಉಷ್ಣತೆ ಹೊರಗೆ ಹಾಕುತ್ತವೆ. ಅದೇ ರೀತಿ ಚಳಿಗಾಲದಲ್ಲಿ ಬಾಲದಲ್ಲಿ ಪ್ರವಹಿಸುವ ರಕ್ತ ಪ್ರಸರಣವನ್ನು ಕಡಿಮೆ ಮಾಡಿ ಉಷ್ಣವನ್ನು ಹೊರಗೆ ಹೋಗದಂತೆ ರಕ್ಷಿಸಿಕೊಳ್ಳುತ್ತವೆ.

ಇನ್ನು ಬಾಲದ ಉದ್ದದ ವಿಚಾರಕ್ಕೆ ಬಂದರೆ, ಬಾಲದಲ್ಲಿ ಇರುವ ಸ್ನಾಯುಗಳನ್ನು ಇಲಿಗಳು ಅತಿ ನೈಪುಣ್ಯದಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತವೆ. ಇಕ್ಕಟ್ಟಾದ ಮಾರ್ಗದಲ್ಲಿ ಆಗಲಿ, ಸಣ್ಣ ತಂತಿ ಮೇಲಾಗಲ್ಲಿ ಓಡುತ್ತಿದ್ದಾಗ ಬಾಲವನ್ನು ಅತ್ತಿಂದಿತ್ತ ಅಲುಗಾಡಿಸುತ್ತಾ ಕೆಳಗೆ ಬೀಳದಂತೆ ಬ್ಯಾಲೆನ್ಸ್ ಮಾಡಿಕೊಳ್ಳುತ್ತವೆ. ಸರ್ಕಸ್‌ನಲ್ಲಿ ತಂತಿ ಮೇಲೆ ನಡೆದಾಡುವ ವ್ಯಕ್ತಿ ಒಂದು ಉದ್ದವಾದ ಕೋಲನ್ನು ಹಿಡಿದು ಬೀಳದಂತೆ ಬ್ಯಾಲೆನ್ಸ್ ಮಾಡುತ್ತಿರುವಂತೆ ಇಲಿಗಳಿಗೂ ಸಹ ಅವುಗಳ ಬಾಲ ಚೆನ್ನಾಗಿ ಉಪಯೋಗಕ್ಕೆ ಬರುತ್ತದೆ.

ಇದಿಷ್ಟು ಇಲಿಗಳ ಬಾಲ ಉದ್ದವಾಗಿರಲು ಕಾರಣ. ಪ್ರಕೃತಿ ಅವಕ್ಕೆ ದೇಹದ ಮೂಲಕ ಅಲ್ಲದೆ ಬಾಲದ ಮೂಲಕ ತನ್ನ ದೇಹದ ಉಷ್ಣತೆಯನ್ನು ನಿಯಂತ್ರಿಸಿಕೊಳ್ಳಲು ಉದ್ದವಾದ ಬಾಲವನ್ನು ಕರುಣಿಸಿದೆ.

No comments