Header Ads

test

ಎಂದಾದರೂ "ಸೇವಂತಿ"ಗೆ ಹೂವನ್ನು ಕುಡಿದಿದ್ದೀರಾ? ಅದರಿಂದಾಗುವ ಆರೋಗ್ಯ ಲಾಭಗಳು ಗೊತ್ತಾದರೆ ಕೂಡಲೆನೀವು ಕುಡಿಯುತ್ತೀರ..!

ಟೀ ಎಂದರೆ ನಾನಾ ರೀತಿಯ ಟೀಗಳಿವೆ. ಗ್ರೀನ್ ಟೀ, ಜಿಂಜರ್ ಟೀ, ಅಸ್ಸಾಂ ಟೀ, ಬ್ಲ್ಯಾಕ್ ಟೀ, ಹರ್ಬಲ್ ಟೀ, ಮಸಾಲಾ ಟೇ... ಹೀಗೆ ಅದೆಷ್ಟೋ ವಿಧದ ಟೀಗಳಿಗೆ. ಮಿತವಾಗಿ ಟೀ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ದೇಹದಲ್ಲಿನ ಮಲಿನ ಪದಾರ್ಥಗಳನ್ನು ಹೊರಹಾಕಲು ಟೀ ಸಹಕಾರಿ. ಅದೇ ರೀತಿ ಇನ್ನೊಂದು ಟೀ ಇದೆ. ಅದೇ ಸೇವಂತಿಗೆ ಟೀ!

ಸೇವಂತಿಗೆ ಹೂವಿನ ಟೀನಾ? ಹೌದು..? ಇದರ ಬಗ್ಗೆ ಅಚ್ಚರಿ ಪಡುವಂತಹದ್ದೇನಿಲ್ಲ..ನೀವು ಕೇಳುತ್ತಿರುವುದು ನಿಜ. ಸೇವಂತಿಗೆ ಹೂವಿನಿಂದ ತೆಗೆದ ಕೆಲವು ಪದಾರ್ಥಗಳಿಂದ ತಯಾರಿಸಿದ ಪುಡಿಯಿಂದ ಟೀ ಪುಡಿ ತಯಾರಿಸುತ್ತಾರೆ. ಅದು ಅಸಲಿ ಟೀ ಪುಡಿಯನ್ನೇ ಹೋಲುತ್ತದೆ. ಅಂದರೆ ಇದು ಸಹ ಗ್ರೀನ್ ಟೀ ತರಹ ಇರುತ್ತದೆ. ಆದರೆ ರೂಪದಲ್ಲಲ್ಲ, ಸೇವಂತಿಗೆ ಹೂವಿನ ಟೀಯಲ್ಲಿನ ಔಷಧಿ ಗುಣಗಳಿಂದ ಗ್ರೀನ್ ಟೀಯಂತೆ ಅದ್ಭುತವಾಗಿರುತ್ತದೆ. ಸೇವಂತಿಗೆ ಹೂವಿನ ಟೀಯನ್ನು ನಿತ್ಯ ಸೇವಿಸುತ್ತಿದ್ದರೆ ಗ್ರೀನ್ ಟೀಯಿಂದ ಪಡೆಯುವ ಪ್ರಯೋಜನಗಳು ಪಡೆಯಬಹುದು..ರುಚಿ ಸಹ ಭಿನ್ನವಾಗಿರುತ್ತದೆ. ಸೇವಂತಿಗೆ ಟೀಯಿಂದ ನಮಗೆ ಸಿಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
1. ಸೇವಂತಿಯಿಂದ ತಯಾರಿಸುವ ಟೀಯಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್, ಆಂಟಿ ಇನ್‍ಫ್ಲಾಮೇಟರಿ ಗುಣಗಳು ಅತ್ಯಧಿಕವಾಗಿ ಇರುತ್ತವೆ. ಇವು ನಮ್ಮ ಶರೀರಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತವೆ. ಇನ್‌ಫೆಕ್ಷನ್‌ಗಳಿಂದ ಕಾಪಾಡುತ್ತದೆ.

2. ತುಂಬಾ ತಲೆ ನೋಯುತ್ತಿದ್ದರೆ ಕೂಡಲೆ ಸೇವಂತಿಗೆ ಹೂಗಳ ಟೀ ಕುಡಿಯಿರಿ. ಇದರಿಂದ ತಲೆನೋವು ಮಾಯವಾಗುತ್ತದೆ. ಮನಸ್ಸು ರಿಲ್ಯಾಕ್ಸ್ ಆಗುತ್ತದೆ.

3. ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಅವರಿಗೆ ಸೇವಂತಿ ಹೂವಿನ ಟೀ ಸಾಕಷ್ಟು ಸಹಕಾರಿ. ನಿತ್ಯ ಸೇವಂತಿ ಹೂವಿನ ಟೀ ಕುಡಿಯುವುದರಿಂದ ರಾತ್ರಿ ಹೊತ್ತು ಹಾಯಾಗಿ ನಿದ್ದೆ ಬರುತ್ತದೆ.

4. ಮಧುಮೇಹ ಇರುವವರಿಗೆ ಸಹ ಸೇವಂತಿಗೆ ಹೂವಿನ ಟೀ ಉತ್ತಮ. ಇದನ್ನು ಕುಡಿಯುವುದರಿಂದ ಅವರ ರಕ್ತದಲ್ಲಿನ ಗ್ಲೂಕೋಸ್ ಅಂಶ ನಿಯಂತ್ರಣದಲ್ಲಿರುತ್ತದೆ. ಈ ಮೂಲಕ ಮಧುಮೇಹ ನಿಯಂತ್ರಿಸಬಹುದು.

5. ಸೇವಂತಿಗೆ ಹೂವಿನ ಟೀಯನ್ನು ನಿತ್ಯ ಕುಡಿಯುತ್ತಿದ್ದರೆ ಜೀರ್ಣ ಸಂಬಂಧಿ ಸಮಸ್ಯೆಗಳು ಹತ್ತಿರ ಸುಳಿಯಲ್ಲ. ಗ್ಯಾಸ್, ಅಜೀರ್ಣ, ಮಲಬದ್ಧತೆ, ಅಸಿಡಿಟಿ ಸಮಸ್ಯೆಗಳು ಬಾಧಿಸುವುದಿಲ್ಲ.

6. ಮನಸ್ಸಿಗೆ ರಿಲ್ಯಾಕ್ಸ್ ನೀಡಲು ಸೇವಂತಿಗೆ ಹೂವು ಸಹಕಾರಿ. ಈ ಟೀ ಕುಡಿಯುವುದರಿಂದ ಒತ್ತಡ, ಆತಂಕ ದೂರವಾಗುತ್ತದೆ.

No comments