ರೈಲು ನಿಲ್ದಾಣದಲ್ಲಿ ಸಿಗುವ ಉಚಿತ ವೈಫೈ ಇಂಟರ್ನೆಟ್ ಆತನ ಜೀವನವನ್ನೇ ಬದಲಾಯಿಸಿತು. ಹೇಗೆ ಗೊತ್ತಾ..?
ಹೌದು... ನಿಜ ಮತ್ತೆ... ಮನಸ್ಸಿದ್ದರೆ ಮಾರ್ಗ. ಯಾವುದೇ ಅವಕಾಶಗಳೂ ಇಲ್ಲ.. ಕೈಯಲ್ಲಿ ಹಣ ಇಲ್ಲ.. ಶಿಕ್ಷಣ ಇಲ್ಲ... ಎಂದುಕೊಂಡರೆ ನಿಜವಾಗಿ ಯಾರೂ ಏನೂ ಸಾಧಿಸಲು ಸಾಧ್ಯವಿಲ್ಲ. ಅಂತಹವರು ಏನೂ ಮಾಡಲಾಗಲಿಲ್ಲ ಎಂದು ಗೋಳಾಡುವುದಕ್ಕಿಂತ ತಮಗೆ ತಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಆ ಅವಕಾಶಗಳೊಂದಿಗೆ ಓದಿಕೊಳ್ಳಬೇಕು. ಇದರಿಂದ ಓದಿನಲ್ಲಿ ಮುಂದೆ ಬರುತ್ತಾರೆ. ಹಾಗೆಯೇ ಮಾಡಿದ ಕಾರಣ ಕೇರಳ ಮೂಲದ ಯುವಕ ಯಾರೂ ಓದದ ರೀತಿಯಲ್ಲಿ ವಿನೂತನವಾಗಿ ಓದಿಕೊಂಡ. ಒಂದು ಕಡೆ ರೈಲ್ವೆ ಸ್ಟೇಷನ್ನಲ್ಲಿ ಮೂಟೆ ಹೊರುವ ಕೂಲಿಯಾಗಿ ಕೆಲಸ ಮಾಡುತ್ತಾ ಇನ್ನೊಂದು ಕಡೆ ಬಿಡುವು ಸಿಕ್ಕಿದಾಗ ತನ್ನ ಸ್ಮಾರ್ಟ್ಫೋನ್ನಲ್ಲಿ ಉಚಿತ ವೈಫೈ ಮೂಲಕ ಇಂಟರ್ನೆಟ್ನಲ್ಲಿ ಓದಿಕೊಂಡ. ಬಳಿಕ ಆ ರಾಜ್ಯದ ಪಬ್ಲಿಕ್ ಸರ್ವೀಸ್ ಕಮೀಷನ್ ನಿರ್ವಹಿಸುವ ಪರೀಕ್ಷೆಯಲ್ಲಿ ಅರ್ಹತೆ ಪಡೆದ. ಇಷ್ಟಕ್ಕೂ ಆತ ಯಾರೆಂದರೆ.
ಕೇರಳದ ಮುನ್ನೂರ್ ಮೂಲದ ಕೆ ಶ್ರೀನಾಥ್ ಕಳೆದ ಐದು ವರ್ಷಗಳಿಂದ ಎರ್ನಾಕುಲಂ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದ. ಆದರೆ ಇವರಿಗೆ ಉನ್ನತ ಶಿಕ್ಷಣ ಪಡೆದು ಸರಕಾರಿ ಉದ್ಯೋಗ ಸಾಧಿಸಬೇಕು ಎಂಬ ಛಲ. ಆದರೆ ಶಿಕ್ಷಣ ಪಡೆಯುವಷ್ಟು ಹಣ ಅವರಲ್ಲಿ ಇರಲಿಲ್ಲ. ಹಾಗಾಗಿ ರೈಲು ನಿಲ್ದಾಣದಲ್ಲಿ ಸಿಗುತ್ತಿದ್ದ ಉಚಿತ ವೈಫೈ ಇಂಟರ್ನೆಟ್ ಸೇವೆಯನ್ನು ನೋಡಿ ಒಂದು ಸ್ಮಾರ್ಟ್ಫೋನ್ ಖರೀದಿಸಿದ. ಬಳಿಕ ಅದರಲ್ಲೇ ಕೇರಳ ಪಬ್ಲಿಕ್ ಸರ್ವೀಸ್ ಕಮೀಷನ್ ಪರೀಕ್ಷೆಗೆ ಸಂಬಂಧಿಸಿದ ಮೆಟಿರಿಯಲ್ಲನ್ನು ಫೋನ್ನಲ್ಲೇ ಆನ್ಲೈನ್ನಲ್ಲಿ ಸಂಗ್ರಹ ಮಾಡಿದ. ಆಡಿಯೋ ಸ್ಯಾಂಪಲ್ಸ್, ಮಾಕ್ ಟೆಸ್ಟ್ ಪೇಪರ್ಗಳು ಡೌನ್ಲೋಡ್ ಮಡಿಕೊಳ್ಳುತ್ತಿದ್ದ. ಆನ್ಲೈನ್ ಪರೀಕ್ಷೆಗಳನ್ನೂ ಸಹ ಫೋನ್ನಲ್ಲೇ ಪ್ರಾಕ್ಟೀಸ್ ಮಾಡುತ್ತಿದ್ದ. ಇದೆಲ್ಲಾ ಶ್ರೀನಾಥ್ ತನಗೆ ಸಿಕ್ಕ ಬಿಡುವಿನ ಸಮಯದಲ್ಲಿ ಮಾಡುತ್ತಿದ್ದ.
ಆ ರೀತಿ ರೈಲ್ವೆ ಸ್ಟೇಷನ್ನಲಿ ಸಿಗುತ್ತಿದ್ದ ಉಚಿತ ವೈಫೈ ಇಂಟರ್ನೆಟ್ ಉಪಯೋಗಿಸಿಕೊಂಡು ಡಿಜಿಟಲ್ ಮಾಧ್ಯಮವನ್ನು ವೇದಿಕೆಯಾಗಿ ಶ್ರೀನಾಥ್ ಶಿಕ್ಷಣ ಪಡೆದ. ಒಂದು ಕಡೆ ಕೂಲಿಯಾಗಿ ಕೆಲಸ ಮಾಡುತ್ತಾ ಇನ್ನೊಂದು ಕಡೆ ಇಯರ್ ಫೋನ್ ಹಾಕಿಕೊಂಡು ಪರೀಕ್ಷೆಗೆ ಸಂಬಂಧಿಸಿದ ಮೆಟೀರಿಯಲ್, ಸಬ್ಜೆಕ್ಟ್ ವಿವರಗಳನ್ನು ಫೋನ್ನಲ್ಲಿ ಕೇಳುತ್ತಿದ್ದ. ಅವನ್ನು ಮನಸ್ಸಿನಲ್ಲೇ ಮನನ ಮಾಡಿಕೊಳ್ಳುತ್ತಿದ್ದ. ರಾತ್ರಿ ಹೊತ್ತು ಅವನ್ನು ಮತ್ತೆ ರಿವಿಜನ್ ಮಾಡಿಕೊಳ್ಳುತ್ತಿದ್ದ. ಆ ರೀತಿ ಆತ ಅಹರ್ನಿಶಿ ಓದಿದ.
ಕೊನೆಗೆ ಇತ್ತೀಚೆಗೆ ನಡೆದ ಕೇರಳ ಪಬ್ಲಿಕ್ ಸರ್ವೀಸ್ ಕಮೀಷನ್ ಫೀಲ್ಡ್ ಅಸಿಸ್ಟೆಂಟ್ ಪರೀಕ್ಷೆಯಲ್ಲಿ ಅರ್ಹತೆ ಸಾಧಿಸಿದ. ಇನ್ನು ಸಂದರ್ಶನ ಮಾತ್ರ ಉಳಿದಿತ್ತು. ಅದನ್ನು ಸಹ ಅಟೆಂಡ್ ಆಗಿ ಪಾಸ್ ಆದರೆ ಅತ ವಿಲೇಜ್ ಫೀಲ್ಶ್ ಅಸಿಸ್ಟೆಂಟ್ ಆಗಿ ಆಯ್ಕೆಯಾಗುತ್ತಾರೆ. ಅದಕ್ಕೆ ಸೂಕ್ತ ರೀತಿಯಲಿ ಪ್ರಿಪೇರ್ ಆಗುತ್ತಿರುವುದಾಗಿ ಶ್ರೀನಾಥ್ ಹೇಳಿದ್ದಾನೆ. ಆತನ ಆಶಯ ನೆರವೇರಲಿ ಎಂದು ನಾವೂ ಬಯಸೋಣ. ಅದೇನೇ ಇರಲಿ ಓದ ಬೇಕು ಎಂಬ ಆತನ ಶ್ರದ್ಧೆ ಛಲ, ಶ್ರಮವನ್ನು ನಾವೆಲ್ಲಾ ಅಭಿನಂದಿಸಲೇಬೇಕು..!

Post a Comment