Header Ads

test

ಮಗಳನ್ನು ಅಂಗನವಾಡಿಯಲ್ಲಿ ಸೇರಿಸಿದ ಜಿಲ್ಲಾಧಿಕಾರಿ, ಆಕೆ ಯಾಕೆ ಆ ರೀತಿ ಮಾಡಿದರು ಎಂದು ಗೊತ್ತಾದರೆಹೆಮ್ಮೆಪಡ್ತೀರ..!!

ಸರಕಾರಿ ಶಾಲೆ ಎಂದರೆ ಎಲ್ಲರಿಗೂ ಏನೋ ಅಸಡ್ಡೆ. ಸರಕಾರಿ ಕೆಲಸ ಮಾಡುವವರೂ ತಮ್ಮ ಮಕ್ಕಳನ್ನು ದೊಡ್ಡ ದೊಡ್ಡ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಚಿಕ್ಕಂದಿನಿಂದಲೇ ಪ್ಲೇ ಸ್ಕೂಲ್ಸ್, ಪ್ಲೇ ಮೋರ್, ಕಾನ್ಸೆಪ್ಟ್ ಅದೂ ಇದೂ ಎಂದು ಏನೇನೋ ಹೆಸರು ಇಟ್ಟು ಶಾಲೆಯಲ್ಲಿನ ಮಕ್ಕಳನ್ನು ಹಾಳು ಮಾಡಿ ಹಣ ಪೀಕುತ್ತಿದ್ದಾರೆ. ಆದರೂ ಸಹ ಸರಕಾರಿ ಶಾಲೆಯಲ್ಲಿ ಸರಕಾರಿ ಉದ್ಯೋಗಿಗಳು ಅವರ ಮಕ್ಕಳನ್ನು ಸೇರಿಸಲ್ಲ. ಆದರೆ ಓರ್ವ ಜಿಲ್ಲಾಧಿಕಾರಿ ಪದವಿಯಲ್ಲಿದ್ದು ತನ್ನ ಮಗಳನ್ನು ಅಂಗನವಾಡಿಗೆ ಸೇರಿಸಿದ್ದಾರೆ.



ವಿವರಗಳನ್ನು ನೋಡುವುದಾದರೆ ಶಿಲ್ಪಾ ಪ್ರಭಾಕರ್ ಸತೀಶ್ ತಮಿಳುನಾಡಿನಲ್ಲಿನ ತಿರುನೇಲ್ವೇಲಿ ಜಿಲ್ಲೆಯ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಮಗಳನ್ನು ಎಲ್ಲರಂತೆ ಖಾಸಗಿ ಶಾಲೆಗೆ ಕಳುಹಿಸದೆ ತನ್ನ ಮನೆಯ ಸಮೀಪದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿ ಶಿಲ್ಪಾ ಮಾತನಾಡುತ್ತಾ, "ನನ್ನ ಮಗಳು ನಾಲ್ಕು ಮಂದಿಯ ಜತೆಗೆ ಬೆರೆತಿರಬೇಕು ಎಂದು ಭಾವಿಸುತ್ತಿದ್ದೇನೆ. ಈ ಆರ್ಥಿಕ, ಸಾಮಾಜಿಕ ಭೇಧಭಾವಗಳು ಆಕೆಯ ಮೇಲೆ ಪ್ರಭಾವ ತೋರಿಸಬಾರದು ಎಂಬ ಉದ್ದೇಶದಿಂದ ಇಲ್ಲಿ ಸೇರಿಸಿದ್ದೇನೆ. ಇವಷ್ಟೇ ಅಲ್ಲದೆ ತುಂಬಾ ಶೀಘ್ರವಾಗಿ ತಮಿಳು ಕಲಿಯಬೇಕು ಎಂದು ಭಾವಿಸಿ ಕಳುಹಿಸುತ್ತಿದ್ದೇನೆ" ಎಂದಿದ್ದಾರೆ.

ಸರಕಾರಿ ಕೆಲಸ ಮಾಡುವವರು ಶಿಲ್ಪಾ ಅವರನ್ನು ನೋಡಿ ಕಲಿಯಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಕಾಮೆಂಟ್ಸ್ ಹಾಕುತ್ತಿದ್ದಾರೆ. ದೊಡ್ಡ ದೊಡ್ಡ ಶಾಲೆಗಳಲ್ಲಿ ಸಾವಿರಾರು ರೂ. ಹಣವನ್ನು ತೊಡಗಿಸುತ್ತಿದ್ದಾರೆ. ಸರಕಾರಿ ಶಾಲೆಯಲ್ಲಿ ಅರ್ಹರಾದ ಉಪಾಧ್ಯಯರೇ ಪಾಠ ಮಾಡುತ್ತಿದ್ದಾರೆ. ಮಕ್ಕಳ ಬಗ್ಗೆ ಶ್ರದ್ಧೆ ಇರುತ್ತದೆ ಅವರಿಗೆ. ಹಾಗಾಗಿಯೇ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ತುಂಬಾ ಬೆಟರ್ ಎಂದು ಜಿಲ್ಲಾಧಿಕಾರಿ ಶಿಲ್ಪ ಹೇಳಿದ್ದಾರೆ.

ಅವರ ಮಾತುಗಳಿಂದ ಒಂದಷ್ಟು ಜನ ಬದಲಾದರೆ ಸಾಕಲ್ಲವೇ? ಲಕ್ಷಾಂತರ ಹಣ ವ್ಯಯಿಸಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಅವರನ್ನು ಸೇರಿಸುತ್ತಿದ್ದಾರೆ. ಆದರೆ ಸರಕಾರಿ ಶಾಲೆಗಳಲ್ಲೇ ಓದಿದ ಅದೆಷ್ಟೋ ಮಂದಿ ಇಂದು ಉನ್ನತ ಉದ್ಯೋಗಗಳಲ್ಲಿರುವುದನ್ನು ಕಾಣಬಹುದು.

No comments