Header Ads

test

"ಭಯ್ಯಾ ಜಿ" ಅಲಿಯಾಸ್ ಪ್ರಿಯಾಂಕಾ ಗಾಂಧಿ, ಜನ ಆಕೆಯನ್ನು ಭಯ್ಯಾಜಿ ಎಂದು ಯಾಕೆ ಕರೆಯುತ್ತಾರೆ ಗೊತ್ತಾ.?

ಪೊಲಿಟಿಕಲ್ ಎಂಟ್ರಿ ಕೊಟ್ಟರೋ ಇಲ್ಲವೋ, ಸಾಮಾಜಿಕ ಮಾಧ್ಯಮಗಳಿಂದ ಮಾಧ್ಯಮಗಳವರೆಗೂ ಎಲ್ಲರೂ ಪ್ರಿಯಾಂಕಾ ಗಾಂಧಿ ಬಗ್ಗೆ ಮಾತನಾಡುತ್ತಿದ್ದಾರೆ. ಆಕೆ ಸಕ್ರಿಯ ರಾಜಕೀಯ ಎಂಟ್ರಿ ಕೊಡದಿದ್ದರೂ ಆಕೆಗೆ ಇಷ್ಟೆಲ್ಲಾ ಕ್ರೇಜ್ ಹೇಗೆ ಸಾಧ್ಯವಾಯಿತು ಎಂದು ಬಹಳಷ್ಟು ಮಂದಿ ಅಂದುಕೊಳ್ಳುತ್ತಿದ್ದಾರೆ.. ಆಕೆಯನ್ನು ಉತ್ತರದ ಜನ ಪ್ರೀತಿಯಿಂದ ಭಯ್ಯಾ ಜಿ ಎಂದು ಕರೆಯುತ್ತಾರೆ. ಮುಖ್ಯವಾಗಿ ಉತ್ತರ ಪ್ರದೇಶದ ಜನ.ಭಯ್ಯಾ ಜಿ ಎಂದು ಕರೆಯಲು ಕಾರಣ.ಪ್ರಿಯಾಂಕಾ ಗಾಂಧಿ ಚಿಕ್ಕಂದಿನಲ್ಲಿ ತಂದೆ ರಾಜೀವ್ ಗಾಂಧಿ, ತಾಯಿ ಸೋನಿಯಾ ಗಾಂಧಿ ಜತೆಗೆ ರಾಯ್‌ಬರೇಲಿಗೆ ಹೋಗುತ್ತಿದ್ದರು. ಆಗ ಆಕೆಯ ಕೂದಲು ಗಿಡ್ಡಗೆ ಕತ್ತರಿಸಿಕೊಳ್ಳುತ್ತಿದ್ದರು. ಅಮೇಥಿ, ರಾಯ್‌ಬರೇಲಿ ಚುನಾವಣಾ ಕ್ಷೇತ್ರಗಳಿಗೆ ಹೋದಾಗ ಗ್ರಾಮಸ್ಥರು ರಾಹುಲ್ ಗಾಂಧಿ ಜತೆ ಪ್ರಿಯಾಂಕಾರನ್ನೂ ಸಹ ’ಭಯ್ಯಾ’ ಎಂದು ಕರೆಯುತ್ತಿದ್ದರು. ಆ ಬಳಿಕ ಬರು ಬರುತ್ತಾ ’ಭಯ್ಯಾ ಜಿ’ ಎಂದು ಗೌರವದಿಂದ ಕರೆಯಲು ಆರಂಭಿಸಿದರು.

ಆಕೆ 2014ರಲ್ಲಿ ವಾರಣಾಸಿಯಿಂದ ಸ್ಪರ್ಧಿಸಬೇಕು ಎಂದು ಭಾವಿಸಿದ್ದಾಗಿ ಸುದ್ದಿ ಇತ್ತು. ಆದರೆ 2014ರಲ್ಲಿ ವಾರಣಾಸಿಯಿಂದ ಮೋದಿ ಸ್ಪರ್ಧಿಸಿದ ಕಾರಣ ಆಕೆ ಆಗ ಸ್ಪರ್ಧಿಸಲು ಮನಸ್ಸು ಮಾಡಲಿಲ್ಲ ಎನ್ನುತ್ತಾರೆ. ಸದ್ಯಕ್ಕೆ ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದ ಪೂರ್ವ ಭಾಗಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಕಾಂಗ್ರೆಸ್ ನೇಮಿಸಿದೆ. ಹಾಗಾಗಿ ಈಕೆ ಮೇಲೆ ಈಗ ದೊಡ್ಡ ಭಾರ ಇದೆ. ಯಾಕೆಂದರೆ ಉತ್ತರ ಪ್ರದೇಶ ಪೂರ್ವ ಭಾಗದಲ್ಲಿ 30ಕ್ಕೂ ಹೆಚ್ಚು ಪಾರ್ಲಿಮೆಂಟ್ ಸೀಟುಗಳಿವೆ. ಪ್ರಿಯಾಂಕಾ ಇದುವರೆಗೆ ಸೋನಿಯಾ, ರಾಹುಲ್ ಪ್ರತಿನಿಧಿಸುತ್ತಾ ಬಂದ ಅಮೇಥಿ, ರಾಯ್ ಬರೇಲಿ ಪ್ರಚಾರಕ್ಕೆ ಸೀಮಿತರಾದರು. ಮೊದಲ ಸಲ ಪ್ರಿಯಾಂಕಾರಿಗೆ ಪಕ್ಷದಲ್ಲಿ ಅಧಿಕೃತವಾಗಿ ಮುಖ್ಯವಾದ ಜವಾಬ್ದಾರಿ ನೀಡಲಾಗಿದೆ.

ದೇಶದಾದ್ಯಂತ..:ಆದರೆ ಈ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಸೋತರೆ, ಪಕ್ಷದ ಲಗಾಮನ್ನು ಪ್ರಿಯಾಂಕಾ ಕೈಗೆ ನೀಡುತ್ತಾರೆಂಬ ಚರ್ಚೆ ಜೋರಾಗಿ ಕೇಳಿಬರುತ್ತಿದೆ. ರಾಹುಲ್ ಗಾಂಧಿ ಸ್ಥಾನದಲ್ಲಿ ಪ್ರಿಯಾಂಕಾರನ್ನು ನೋಡುವ ಅವಕಾಶಗಳು ಸಹ ಇವೆ. ಪಕ್ಷದಲ್ಲಿ ಅಧಿಕೃತವಾಗಿ ಜವಾಬ್ದಾರಿ ತೆಗೆದುಕೊಳ್ಳುವುದಕ್ಕೂ ಮುಂಚಿನಿಂದಲೂ ಪಕ್ಷದಲ್ಲಿ ಕೆಲವು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಪ್ರಿಯಾಂಕಾ ಗಾಂಧಿ. ಈಗ ನೇರವಾಗಿ ರಾಜಕೀಯಕ್ಕೆ ಅಡಿಯಿಟ್ಟ ಕಾರಣ ಪಕ್ಷದ ದಿಕ್ಕು ದೆಸೆಯನ್ನು ಸಂಪೂರ್ಣ ಬದಲಾಯಿಸುತ್ತಾರೆ ಎಂದು ಆಕೆಯ ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಪ್ರಿಯಾಂಕಾಗೆ ಒಬ್ಬ ಪುತ್ರ, ಒಬ್ಬ ಮಗಳು ಇದ್ದಾರೆ.

No comments