Header Ads

test

ಹಣಕ್ಕಾಗಿ ಮದುವೆ ಮಾಡಿಕೊಂಡಳು, ಆದರೆ ಮಕ್ಕಳನ್ನು ಮಾತ್ರ ಬೇರೆಯವನೊಂದಿಗೆ ಹೆರುತ್ತಾಳಂತೆ...ಅಚ್ಚರಿಪಡಿಸುವ ನಿಜ ಜೀವನದ ಕಥೆ

ನಮ್ಮ ದೇಶದಲ್ಲಾದರೆ ಗಂಡ ಹೆಂಡತಿ ಎಷ್ಟೇ ಕಿತ್ತಾಡಿದರೂ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬಂತೆ ಇರುತ್ತದೆ. ಮತ್ತೆ ಅನ್ಯೋನ್ಯವಾಗಿ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದರೂ, ಒಂದು ಕಾಲದಲ್ಲಿ ಕಡಿಮೆ ಇತ್ತು. ಆದರೆ ಅಮೆರಿಕಾದಲ್ಲಿ ಆ ರೀತಿ ಅಲ್ಲ. ವಿಚ್ಛೇದನ ಪಡೆಯುವುದು ಎಷ್ಟು ಸುಲಭವೋ ಇನ್ನೊಬ್ಬರನ್ನು ಮದುವೆಯಾಗುವುದು ಸಹ ಅಷ್ಟೇ ಸುಲಭ. ಆದರೆ ಆ ದೇಶದಲ್ಲಿ ಹಣಕ್ಕಾಗಿ ಮದುವೆಯಾಗುವವರ ಸಂಖ್ಯೆ ಸಹ ಜಾಸ್ತಿ.



ಹಣಕ್ಕಾಗಿ ಮದುವೆಯಾದಳು ಆದರೆ ಮಕ್ಕಳು ಮಾತ್ರ ಬೇಡ...
ಹಣಕ್ಕಾಗಿ ಮದುವೆಯಾದಳು. ನೋಡಲು ಮನುಷ್ಯ ಚೆನ್ನಾಗಿಲ್ಲ. ಆದರೂ ಮದುವೆಯಾದಳು. ಯಾಕೆಂದರೆ ಆತನ ಬಳಿ ಹಣ ಇದೆ ಎಂದು. ಆದರೆ ಆತನ ಜತೆಗೆ ಮಕ್ಕಳು ಮಾತ್ರ ಬೇಡವಂತೆ. ಕೇಳಲು ವಿಚಿತ್ರ ಅನ್ನಿಸಿದರೂ ಇದು ನಿಜ. ಈ ಘಟನೆ ನಮ್ಮ ದೇಶದಲ್ಲಂತೂ ನಡೆದಿಲ್ಲ ಎಂಬುದೇ ಸಮಾಧಾನದ ಸಂಗತಿ. ಇದು ನಡೆದಿರುವುದು ಅಮೆರಿಕದಲ್ಲಿ. ವಿವರಗಳನ್ನು ನೋಡುವುದಾದರೆ....

ಅಮೆರಿಕದಲ್ಲಿ ಹಣ ಚೆನ್ನಾಗಿರುವ ವ್ಯಕ್ತಿಯನ್ನು ಒಬ್ಬ ಯುವತಿ ಮದುವೆಯಾದಳು. ಆ ವ್ಯಕ್ತಿ ನೋಡಲು ಅಷ್ಟೇನು ಚೆನ್ನಾಗಿಲ್ಲ. ಸುಂದರಾಂಗನಲ್ಲದಿದ್ದರೂ ಆಸ್ತಿ ಮಾತ್ರ ಬೇಜಾನ್ ಇದೆ. ಹಾಗಾಗಿ ಆತನನ್ನು ವರಿಸಿದಳು. ಆದರೆ ಮಕ್ಕಳನ್ನು ಮಾತ್ರ ಇನ್ನೊಬ್ಬರನ ಜತೆಗೆ ಮಾಡಿಕೊಳ್ಳುತ್ತೀನಿ ಎಂದು ನೇರವಾಗಿ ಹೇಳಿದಳು ಮದುವೆಯಾದ ಬಳಿಕ. ಆತ ಸರಿ ಎನ್ನಲು ಆಗಲಿಲ್ಲ. ಹೆಂಡತಿ ಅಲ್ಲವೇ ಹಾಗಾಗಿ ಬೇಡ ಎನ್ನಲು ಮನಸ್ಸು ಬರಲಿಲ್ಲವಂತೆ!

"ನೀನು ಚೆನ್ನಾಗಿಲ್ಲ. ನಿನ್ನೊಂದಿಗೆ ಮಕ್ಕಳನ್ನು ಮಾಡಿಕೊಂಡರೆ ಅವರು ಸಹ ಸುಂದರವಾಗಿ ಇರಲ್ಲ. ಹಾಗಾಗಿ ಸುಂದರವಾಗಿರುವ ವ್ಯಕ್ತಿಯ ಜತೆಗೆ ಮಲಗಿ ಮಕ್ಕಳನ್ನು ಹೆರುತ್ತೇನೆ ಎಂದು ಗಂಡನ ಮುಖಕ್ಕೆ ಹೊಡೆದಂತೆ ಹೇಳಿದಳು. ಆಕೆಯನ್ನು ಬೇಡ ಎಂದು ಒಪ್ಪಿಸಲು ಸಾಕಷ್ಟು ಪ್ರಯತ್ನಿಸಿದ್ದಾನೆ. ಆದರೆ ಆಕೆ ಮಾತ್ರ ಒಪ್ಪಿಕೊಳ್ಳಲಿಲ್ಲ. ಬೇರೆ ವ್ಯಕ್ತಿಯನ್ನು ಮನೆಗೆ ಎರಡು ಮೂರು ಸಲ ಡಿನ್ನರ್‌ಗೆ ಕರೆದಳು. ಆತನ ಜತೆಗೆ ಕಾಮಕ್ರೀಡೆಯನ್ನೂ ನಡೆಸಿದಳು. ನನ್ನ ಹಣ ಮಾತ್ರ ಬೇಕು ಆದರೆ ನನ್ನೊಂದಿಗೆ ಮಕ್ಕಳು ಮಾತ್ರ ಬೇಡವಂತೆ" ಎಂದು ಆ ವ್ಯಕ್ತಿ ಫೇಸ್‌ಬುಕ್‌ನಲ್ಲಿ ವಿಡಿಯೋ ಮೂಲಕ ತನ್ನ ಗೊಳೋ ಎಂದು ಗೋಳಾಡಿದ್ದಾನೆ. ಆ ವಿಡಿಯೋ ಕೆಲವೇ ದಿನಗಳಲ್ಲಿ ಮಿಲಿಯನ್ ವ್ಯೂಸ್ ಪಡೆದಿದೆ. ಪೊಲೀಸರು ಆಕೆಯ ಮೇಲೆ ಪ್ರಕರಣ ಕೂಡ ದಾಖಲಿಸಿಕೊಂಡಿದ್ದಾರೆ.

ನೆಟ್ಟಿಗರ ಕಾಮೆಂಟ್ಸ್..:

ಆಕೆಯಿಂದ ದೂರ ಇರು ಎಂದು ನೆಟ್ಟಿಗರು ಆತನಿಗೆ ಸಲಹೆ ನೀಡುತ್ತಿದ್ದಾರೆ. ಆಕೆಯಿಂದ ದೂರ ಸರಿಯುವುದು ಉತ್ತಮ. ವಿಚ್ಛೇದನ ಕೊಟ್ಟು ಬಿಡಿ ಎಂಬ ಕಾಮೆಂಟ್ಸ್ ಹಾಕುತ್ತಿದ್ದಾರೆ. ಯುವತಿಯರು ಇಷ್ಟೆಲ್ಲಾ ಡೇಂಜರಸ್ ಇರುತ್ತಾರಾ ಎಂದು ಬಹಳಷ್ಟು ಮಂದಿ ಚಕಿತರಾಗುತ್ತಿದ್ದಾರೆ. ಯುವಕರು, ಯುವತಿಯರು ಎಂಬ ಬೇಧಭಾವ ಏನೂ ಇರಲ್ಲ. ಮನುಷ್ಯನೆಂದರೇನೇ ಅಷ್ಟೇ.. ಯಾವಾಗ ಯಾವ ರೀತಿ ವರ್ತಿಸುತ್ತಾರೋ ಆ ಮನುಷ್ಯನಿಗೇ ಗೊತ್ತಾಗಲ್ಲ. ಅದರಲ್ಲಿ ಯುವಕ, ಯುವತಿ ಎಂಬ ವ್ಯತ್ಯಾಸ ಏನೂ ಇರಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

No comments