Header Ads

test

ಐದು ನಿಮಿಷಗಳಲ್ಲಿ ಮದುವೆ ನಡೆಯಬೇಕಾಗಿತ್ತು. ಹಸೆಮಣೆ ಮೇಲೆ ಪ್ರಿಯತಮೆ... ತದೇಕದೃಷ್ಟಿಯಿಂದ ಆಕೆಯನ್ನುನೋಡುತ್ತಿರುವ ಪ್ರಿಯಕರ... ಕೊನೆಗೆ ಏನಾಯಿತು ಎಂದು ಗೊತ್ತಾದರೆ ಬಾಪ್ ರೇ ಅಂತೀರ..!

ಕೆಲವೊಂದು ಸಂದರ್ಭಗಳಲ್ಲಿ ಮುಂದೇನಾಗುತ್ತದೆ ಎಂದು ಊಹಿಸುವುದೂ ಕಷ್ಟ. ಅಚಾನಕ್ ಆಗಿ ಕೆಲವು ಘಟನೆಗಳು ನಡೆಯುತ್ತವೆ. ಇದೇನಿದು ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲೇ ಎಲ್ಲವೂ ನಡೆದು ಹೋಗಿರುತ್ತದೆ. ಅಂತಹದ್ದೇ ಸಿನಿಮೀಯ ಘಟನೆ ಇದು. ಇನ್ನೇನು ಐದೇ ಐದು ನಿಮಿಷಗಳಲ್ಲಿ ಮದುವೆಯಾಗಬೇಕಿತ್ತು ಆ ಜೋಡಿ. ಆದರೆ ಆಗಿದ್ದೇ ಬೇರೆ. ಅಚಾನಕ್ ಆಗಿ ನಡೆದ ಈ ಘಟನೆಯಿಂದ ಎಲ್ಲರೂ ಶಾಕ್ ಆದರು. ಇಷ್ಟಕ್ಕೂ ಆ ಘಟನೆ ಏನು ಎಂಬುದನ್ನು ನೋಡೋಣ ಬನ್ನಿ.



ಇನ್ನೇನು ಐದು ನಿಮಿಷಗಳಲ್ಲಿ ಮದುವೆ ನಡೆಯಬೇಕಾಗಿತ್ತು. ಆದರೆ ಇದ್ದಕ್ಕಿದ್ದಂತೆ ಮದುಮಗಳು ಹಸೆಮಣೆಯಿಂದ ಮೇಲೆದ್ದು ಓಡಿ ಹೋಗಿ ತನ್ನ ಕೊರಳಲ್ಲಿನ ಮಾಲೆಯನ್ನು ಪ್ರಿಯಕರನಿಗೆ ಹಾಕಿ ಮದುವೆಯಾಗೋಣ ಬಾ ಎಂದಳು. ಇದರಿಂದ ತನ್ನ ಭಾವಿ ಪತ್ನಿ ಬೇರೊಬ್ಬರನ್ನು ಮದುವೆಯಾಗುವುದು ಏನು ಎಂದು ಅರ್ಥವಾಗದೆ... ಹಸೆಮಣೆ ಮೇಲಿದ್ದ ವರ ಮಹಾಶಯ ಕೆಂಡಾಮಂಡಲವಾದ. ಕೂಡಲೆ ಎಚ್ಚೆತ್ತುಕೊಂಡ ತಂದೆತಾಯಿ ಮದುಮಗಳ ತಂಗಿಯನ್ನು ಕೊಟ್ಟು ವರನಿಗೆ ಮದುವೆ ಮಾಡಿ ಸಮಾಧಾನಪಡಿಸಿದರು. ಉತ್ತರ ಪ್ರದೇಶದಲ್ಲಿ ವಾಸವಾಗಿರುವ ರಂಜನ್, ಜ್ವಾಲ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು. ಹಿರಿಯ ಮಗಳು ತಮ್ಮ ಬಂಧುಗಳ ಯುವಕನೊಂದಿಗೆ ಸಂಬಂಧ ಕುದುರಿಸಿಕೊಂಡಿದ್ದರು. ಮನೆ ಬಳಿಯೇ ವಿವಾಹ. ಆದರೆ ಅದಾಗಲೆ ಆ ಯುವತಿ ಪಕ್ಕದ ಮನೆಯ ಇನ್ನೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೂ ಮದುವೆ ಒಪ್ಪಿಕೊಂಡಿದ್ದಳು.

ರಾತ್ರಿ ಮದುವೆ ನಡೆಯುತ್ತಿದೆ. ಎದುರಿನಲ್ಲಿ ಪ್ರಿಯಕರ ಕುಳಿತಿದ್ದಾನೆ. ಅಷ್ಟೇ... ಮುಹೂರ್ತದ ಸಮಯಕ್ಕೆ ಹಸೆಮಣೆಯಿಂದ ಎದ್ದು ನೇರವಾಗಿ ಯುವಕನ ಕೊರಳಿಗೆ ಹೂಮಾಲೆ ಹಾಕಿದಳು. ಇದರಿಂದ ಆಕೆಯ ತಂದೆತಾಯಿ ಶಾಕ್ ಆದರು. ಇನ್ನು ವರ ಮಹಾಶಯನ ಸಂಗತಿ ಏನಾಯಿತು ಎಂದರೆ.. ಹಾರ ಹಾಕಿಸಿಕೊಂಡ ಪ್ರಿಯಕರನನ್ನು ಬಗ್ಗು ಬಡಿಯಲು ಪ್ರಯತ್ನಿಸಿದ...ಆಗ ವಧುವಿನ ತಂದೆತಾಯಿ ಸಮಾಧಾನಪಡಿಸಿ ತನ್ನ ಎರಡನೇ ಮಗಳನ್ನು ಕೊಟ್ಟು ಮದುವೆ ಮಾಡಿದರು. ಆ ಮದುವೆ ವೈಭವವಾಗಿ ನಡೆದರೆ ಪ್ರೀತಿಸಿದ ಯುವತಿ ಮದುವೆ ಮನೆಯಲ್ಲಿ ಇದೆಲ್ಲವನ್ನೂ ಸಂಭ್ರಮದಿಂದ ನೋಡಿದಳು.

ಈ ರೀತಿ ಆಗುತ್ತದೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಮದುಮಗಳ ಮನಸ್ಸಿನಲ್ಲಿ ಮಾತ್ರ ಈ ವಿಚಾರ ಇತ್ತು ಅನ್ನಿಸುತ್ತದೆ. ಒಂದು ವೇಳೆ ಅದೇ ಯುವಕನಿಂದ ತಾಳಿ ಕಟ್ಟಿಸಿಕೊಂಡಿದ್ದರೆ ಮುಂದೆ ಹೇಗಾಗುತ್ತಿತ್ತೋ ಏನೋ. ಒಟ್ನಲ್ಲಿ ಆ ಮದುಮಗಳು ಮನಸ್ಸಿನಲ್ಲಿದ್ದ ಯುವಕನನ್ನು ವರಿಸುವ ಮೂಲಕ ಕೊನೆಯ ಕ್ಷಣದಲ್ಲಾದರೂ ಒಳ್ಳೆಯ ಕೆಲಸ ಮಾಡಿದ್ದಾಳೆ ಅಲ್ಲವೇ...?

No comments