Header Ads

test

ವಾರ ತಡವಾಗಿ ಹುಟ್ಟಿದಳು... ಹುಟ್ಟುವುದಕ್ಕೂ ಮೊದಲೇ ತಾಯಿಯನ್ನು ಸರ್ಪಂಚ್ ಮಾಡಿದ ಕಂದಮ್ಮ..!

ತೆಲಂಗಾಣದಾದ್ಯಂತ ಪಂಚಾಯಿತಿ ಚುನಾವಣೆ ನಡೆಯುತ್ತಿದೆ. ಈಗಾಗಲೆ ಎರಡು ಹಂತದ ಚುನಾವಣೆ ಮುಗಿದಿದೆ. ಮೂರನೇ ಹಂತದ ಚುನಾವಣೆಗೆ ಸಿದ್ಧತೆಗಳೆಲ್ಲಾ ಮುಗಿದು ಜನವರಿ 30ಕ್ಕೆ ಮುಗುತ್ತದೆ. ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ ಏನೆಂದರೆ ಪಂಚಾಯಿತಿ ಚುನಾವಣೆಯಲ್ಲಿ ಇಬ್ಬರು ಮಕ್ಕಳಿಗಿಂತ ಹೆಚ್ಚಾಗಿ ಇರುವವರು ಸ್ಪರ್ಧಿಸಲು ಅನರ್ಹರು ಎಂಬುದು. ಈ ನಿಯಮ ಅದೆಷ್ಟೋ ವರ್ಷಗಳಿಂದ ಜಾರಿಯಲ್ಲಿದೆ. ಇತ್ತೀಚೆಗೆ ಮೂವರು ಮಕ್ಕಳ ತಂದೆ ಅಥವಾ ತಾಯಿ ಆಗಿದ್ದರೆ ಮಾತ್ರ ಕನಿಷ್ಠ ಚುನಾವಣೆಗೂ ಸ್ಪರ್ಧಿಸಲು ಸಹ ಅನರ್ಹರು. ಆದರೆ ಗದ್ವಾಲ ಜಿಲ್ಲೆಯಲ್ಲಿ ಮಾತ್ರ ಓರ್ವ ಮಹಿಳೆ ಮೂವರು ಮಕ್ಕಳಿಗೆ ತಾಯಿ ಆದರೂ ಸಹ ಸರ್ಪಂಚ್ ಆಗಿದ್ದಾರೆ.



ಅದೃಷ್ಟ ಅಂದರೆ ಇದೇ ನೋಡಿ.. ಮಹಾದೇವಿ ಎಂಬ ಮಹಿಳೆ ಸರ್ಪಂಚ್ ಆದ ಬಳಿಕ ಮೂರನೇ ಮಗುವಿಗೆ ತಾಯಿಯಾದರು. ತುಂಬು ಬಸುರಿಯಾಗಿದ್ದ ಆಕೆ ಸರ್ಪಂಚ್‌ಗೆ ಸ್ಪರ್ಧಿಸಿದ್ದರು. ಅದಾಗಲೆ ಇಬ್ಬರು ಮಕ್ಕಳಿದ್ದ ಆ ಮಹಿಳೆ ಮತ್ತೆ ಗರ್ಭಿಣಿಯಾದ ಕಾರಣ ಆಕೆ ಸ್ಪರ್ಧಿಸಲು ಅರ್ಹಳಲ್ಲ ಎಂದು ಪ್ರತಿಸ್ಪರ್ಧಿಗಳು ಹೇಳಿದರು. ಆದರೆ ಅಧಿಕಾರಿಗಳು ಮಾತ್ರ ಆಕೆಗೆ ಇನ್ನೂ ಡೆಲಿವರಿ ಆಗಲಿಲ್ಲ. ಆದಕಾರಣ ಆಕೆಗೆ ಅಧಿಕೃತವಾಗಿ ಇಬ್ಬರು ಮಕ್ಕಳು ಎಂದು ಅಧಿಕಾರಿಗಳು ಹೇಳಿದ ಕಾರಣ ಆಕೆ ನಾಮಿನೇಶನ್ ಸಲ್ಲಿಸಿದ್ದರು. ಆಕೆ ಪಟ್ಟ ಕಷ್ಟಕ್ಕೆ ಗ್ರಾಮದ ಜನ ಅಯ್ಯೋ ಪಾಪ ಎಂದುಕೊಂಡರೋ ಏನೋ ಆಕೆಯಂತೂ ಸುಲಭವಾಗಿ ಗೆದ್ದು ಬಂದರು.

ಸರ್ಪಂಚ್ ಆಗಿ ಚುನಾವಣೆಯಲ್ಲಿ ಆಯ್ಕೆಯಾದ ಮೂರು ದಿನಗಳಲ್ಲೇ ತಾಯಿಯಾದರು. ಆರೋಗ್ಯವಾದ ಮಗುವಿಗೆ ಜನ್ಮ ನೀಡಿದರು. ವಿಚಿತ್ರವಾದ ಈ ಘಟನೆ ಗದ್ವಾಲ ಜಿಲ್ಲೆಯಲ್ಲಿನ ಕೆಟಿ ದೊಡ್ಡಿ ಗ್ರಾಮ ಪಂಚಾಯಿತಿಯಲ್ಲಿನ ಗುವ್ವಲದಿನ್ನೆ ಎಂಬ ಹಳ್ಳಿಯಲ್ಲಿ ನಡೆದಿದೆ. ಆ ಮಗು ಏನಾದರೂ ಮೂರು ದಿನ ಮೊದಲೇ ಜನಿಸಿದ್ದರೆ ತಾಯಿಯನ್ನು ಸರ್ಪಂಚ್ ಆಗದಂತೆ ತಡೆಯುತ್ತಿತ್ತು. ಮಗು ಮೂರು ದಿನಗಳ ಬಳಿಕ ಹುಟ್ಟಿದ ಕಾರಣ ತಾಯಿಯನ್ನು ಸರ್ಪಂಚ್ ಮಾಡಿ ಜನಿಸಿದ್ದಾಳೆಂದು ಮಗುವಿನ ಬಗ್ಗೆ ಎಲ್ಲರೂ ಪ್ರಶಂಸೆಯ ಸುರಿಮಳೆ ಗರೆಯುತ್ತಿದ್ದಾರೆ. ಮಗುವಿನ ಜತೆಗೆ ತಾಯಿ ಸರ್ಪಂಚ್ ಆಗಿ ಪ್ರಮಾಣ ಸ್ವೀಕಾರಿಸುತ್ತಿದ್ದಾರೆ. ಸರ್ಪಂಚ್ ಆದ ಬಳಿಕ ತಾಯಿಯಾದ ಕಾರಣ ಈಗೇನು ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು
ಕೈಬೀಸಿಕೊಂಡು ಹೋಗಿದ್ದಾರೆ.

No comments