Header Ads

test

ಒಂದೇ ಒಂದು ಕೇಬಲ್ ಮೂಲಕ ಅಷ್ಟೆಲ್ಲಾ ಚಾನಲ್‌ಗಳು ಹೇಗೆ ಪ್ರಸಾರವಾಗುತ್ತವೆ ಗೊತ್ತಾ?

ಈ ರೀತಿಯ ಸಮಸ್ಯೆಗಳು ಆಗಾಗ ನಮ್ಮ ತಲೆಗೆ ಬರುತ್ತಿರುತ್ತವೆ. ಆದರೆ ನಾವ್ಯಾರೂ ಆ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಕಾರಣ ಅಯ್ಯೋ ಇದಾ ನನಗೆ ಗೊತ್ತು ಬಿಡಿ ಎಂಬ ಹಾರಿಕೆಯ ಉತ್ತರ. ಇಷ್ಟಕ್ಕೂ ಸಮಸ್ಯೆ ಏನೆಂದರೆ... ಟಿವಿಯಲ್ಲಿ ಬರುವ ವಿವಿಧ ಚಾನಲ್‌ಗಳಲ್ಲಿ ಎಲ್ಲವೂ ಒಂದೇ ಒಂದು ಕೇಬಲ್ ತಂತಿ ಮೂಲಕ ಹೇಗೆ ಪ್ರಸಾರವಾಗುತ್ತವೆ? ಎಂಬುದು ಖಂಡಿತವಾಗಿ ತಿಳಿಯಲೇಬೇಕಾದ ಸಂಗತಿ ಇದು.

ನಿಮ್ಮ ಟಿವಿ ಹಿಂಬದಿಯಲ್ಲಿ ಚುಚ್ಚುವ ಕೇಬಲ್ ತಂತಿಯನ್ನು ನಿಮ್ಮ ಸ್ಥಳದಲ್ಲಿರುವ ಕೇಬಲ್ ಅಪರೇಟರ್ ವ್ಯವಸ್ಥೆ ಮಾಡುತ್ತಾನೆ. ನಿಮ್ಮ ಟಿವಿಯಲ್ಲಿ ಪ್ರಸಾರವಾಗುವ ನಾನಾ ಚಾನಲ್ಸ್ ನಿರ್ವಾಹಕರಿಗೆ ಆತ ಸ್ವಲ್ಪ ಹಣ ಸಲ್ಲಿಸಿ ಅವನ್ನು ಪ್ರಸಾರ ಮಾಡುವ ಹಕ್ಕುಗಳನ್ನು ಪಡೆಯುತ್ತಾನೆ. ಆಯಾ ಚಾನಲ್ಸ್‌ನವರು ತಮ್ಮ ಕಾರ್ಯಕ್ರಮಗಳ ಸಂಕೇತಗಳನ್ನು ಉಪಗ್ರಹಗಳಿಗೆ ಪ್ರಸಾರ ಮಾಡಿದರೆ ಅವನ್ನು ಪ್ರತ್ಯೇಕ ಆಂಟೆನಾಗಳ ಮೂಲಕ ಕೇಬಲ್ ಆಪರೇಟರ್ ಸಂಗ್ರಹಿಸುತ್ತಾನೆ.



ಆ ರೀತಿ ಸಂಗ್ರಹಿಸಿದ ಚಾನಲ್ಸ್ ಸಂಕೇತಗಳನ್ನು ಬೇರೆ ಬೇರೆ ಫ್ರೀಕ್ವೆನ್ಸಿಗಳಲ್ಲಿ ಇರುತ್ತವೆ. ಅವನ್ನು ಪ್ರತ್ಯೇಕವಾದ ಎಲಕ್ಟ್ರಾನಿಕ್ಸ್ ಪರಿಕರ ಗ್ರಹಿಸಿ ಕೇಬಲ್ ತಂತಿ ಮೂಲಕ ಪ್ರಸಾರ ಮಾಡುವ ಫ್ರೀಕ್ವನಿಗೆ ಬದಲಾಯಿಸುತ್ತದೆ. ಇವೆಲ್ಲಾ ಸೇರಿ ಕೇಬಲ್ ಮೂಲಕ ಮನೆ ಸೇರುತ್ತವೆ.

ಟಿವಿ ಹಿಂಬದಿಯಲ್ಲಿ ಇರುವ ರೇಡಿಯೋ ಫ್ರೀಕ್ವೆನ್ಸಿ (RF) ಸಾಕೆಟ್‌ಗೆ ಅಳವಡಿಸಿದಾಗ ಆ ಸಂಕೇತಗಳೆಲ್ಲಾ ಬೇರೆ ಬೇರೆ ಚಾನಲ್‌ಗಳ ಫ್ರೀಕ್ವೆನ್ಸಿ ಒಳಗೆ ಬದಲಾಗುತ್ತವೆ. ಈ ಪದ್ಧತಿಯನ್ನೇ ಡಿಮಾಡ್ಯುಲೇಷನ್ ಎಂದು ಕರೆಯುತ್ತಾರೆ. ಆಯ್ಕೆ ಮಾಡಿದ ಚಾನಲ್‌‍ಗೆ ಸಂಬಂಧಿಸಿದ ಫ್ರೀಕ್ವೆನ್ಸಿಯನ್ನು ಟಿವಿ ಸರ್ಕ್ಯೂಟ್ ಉತ್ಪತ್ತಿ ಮಾಡಿದರೆ, ಅದೇ ಫ್ರೀಕ್ವೆನ್ಸಿಗೆ ಸೇರಿದ ಅಂಶಗಳ ಅನುರಣನ (resonance) ನಡೆಯುತ್ತದೆ. ಇದರ ಪ್ರತಿಫಲವಾಗಿ ಆ ಚಾಲನ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳೇ ತೆರೆ ಮೇಲೆ ಕಾಣಿಸುತ್ತವೆ. ಈ ಪ್ರಕ್ರಿಯೆ ಎಲ್ಲಾ ಬೆಳಕಿನ ವೇಗದಲ್ಲಿ ನಡೆಯುತ್ತದೆ.

ಈಗ ತಿಳಿಯಿತ್ತಲ್ಲವೇ ಕೇಬಲ್ ಒಂದೇ ಆದರೂ ಅಷ್ಟು ಚಾನಲ್‌ಗಳು ಹೇಗೆ ಪ್ರಸಾರವಾಗುತ್ತವೆ ಎಂದು. ಇದು ಸಣ್ಣ ಸಂಗತಿಯಾದರೂ ಇದರ ಹಿಂದೆ ಇಷ್ಟೆಲ್ಲಾ ವಿಜ್ಞಾನ ಅಡಗಿದೆ ಎಂಬುದು ಬಹಳಷ್ಟು ಮಂದಿಗೆ ತಿಳಿದಿರಲ್ಲ. ನಿಮ್ಮ ಮಕ್ಕಳು ಕೇಳುವ ಈ ರೀತಿಯ ಹಲವಾರು ಪ್ರಶ್ನೆಗಳಿಗೆ ನೀವು ಉತ್ತರಿಸಲು ಸಾಧ್ಯವಾಗುತ್ತದೆ.

No comments