ಚಿನ್ನದ ಮೊಟ್ಟೆ ಇಡುವ ಕೋಳಿ ಏನೋ... ಈ ಕೋಳಿ ನೋಡಿ, ಶಾಕ್ ಆಗ್ತೀರ.!
ಯಾರಾದರೂ ಚೆನ್ನಾಗಿ ಸಂಪಾದಿಸಿ ಕೊಟ್ಟರೆ, ಅಥವಾ ಯಾರ ಮೂಲಕವಾದರೂ, ಯಾವ ವಸ್ತು ಮೂಲಕವಾದರೂ ಹಣ ಸಿಕ್ಕಾಪಟ್ಟೆ ಬಂದರೆ ಆಗ ಆ ವ್ಯಕ್ತಿಯನ್ನು ಚಿನ್ನದ ಬಾತುಕೋಳಿ ಎಂದು, ಚಿನ್ನದ ಮೊಟ್ಟೆ ಇಡುವ ಕೋಳಿ ಎನ್ನುತ್ತಿರುತ್ತಾರೆ. ಕೋಳಿ ಚಿನ್ನದ ಮೊಟ್ಟೆ ಇಡುತ್ತದೆ ಎಂಬುದು ನೂರಕ್ಕೆ ಸಾವಿರದಷ್ಟು ಶುದ್ಧ ಸುಳ್ಳು. ಯಾವ ಕೋಳಿ ಆದರೂ, ಎಂತಹ ಬ್ರೀಡ್ ಆದರೂ ಸಹ ದಿನಕ್ಕೆ ಒಂದು ಮೊಟ್ಟೆ ಮಾತ್ರ ಇಡುತ್ತದೆ. ಎಂದೋ ಒಂದು ದಿನ ಬಹಳ ಅಪರೂಪಕ್ಕೆ ಎರಡು ಮೊಟ್ಟೆ ಇಡುತ್ತದೆ. ಆದರೆ ಈ ಕೋಳಿ ಮಾತ್ರ ನಿತ್ಯ ಎರಡು ಮೂರು ಮೊಟ್ಟೆ ಇಟ್ಟು ತನ್ನ ಯಜಮಾನನಿಗೆ ಅಷ್ಟೇ ಅಲ್ಲದೆ, ಸ್ಥಳೀಯರನ್ನೂ, ಸಾಮಾಜಿಕ ಮಾಧ್ಯಮವನ್ನೂ ಚಕಿತಪಡಿಸುತ್ತಿದೆ.
ಇದು ನಡೆಯುತ್ತಿರುವುದು ಬೇರೆ ಎಲ್ಲೋ, ಯಾವ ದೇಶದಲ್ಲೋ ಅಲ್ಲ. ನಮ್ಮದೇ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹುಚ್ಚಮ್ಮನಹಳ್ಳಿಯಲ್ಲಿ. ಈ ಹಳ್ಳಿಯಲ್ಲಿನ ಕೋಳಿಯೊಂದು ಹತ್ತು ದಿನಗಳಲ್ಲಿ ಸುಮಾರು 35 ಮೊಟ್ಟೆಗಳನ್ನು ಇಟ್ಟಿದೆ. ನಿತ್ಯ ಎರಡು ಮೊಟ್ಟೆಗಳನ್ನು ಇಡುತ್ತಿದೆ. ಎರಡು ಮೂರು ದಿನ ಒಟ್ಟು ನಾಲ್ಕು ಮೊಟ್ಟೆಗಳನ್ನೂ ಇಟ್ಟಿದೆಯಂತೆ. ಒಟ್ಟು 35 ಮೊಟ್ಟೆಗಳನ್ನು ಕೇವಲ ಹತ್ತು ದಿನಗಳಲ್ಲಿ ಈ ಕೋಳಿ ಇಟ್ಟಿರುವುದು ಈಗ ಹಾಟ್ ಟಾಪಿಕ್ ಆಗಿ ಬದಲಾಗಿದೆ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಈ ಕೋಳಿ ಕುತೂಹಲ ಮೂಡಿಸಿದೆ. ಲಿಮ್ಕಾ ಬುಕ್ ಆಫ್ ದಿ ವರ್ಲ್ಡ್ ರೆಕಾರ್ಡ್ನಲ್ಲಿ ಈ ಕೋಳಿಯನ್ನು ಸೇರಿಸಲು ಸ್ಥಳೀಯರು ಪ್ರಯತ್ನಿಸುತ್ತಿದ್ದಾರೆ.
ಒಂದು ಕೋಳಿ ದಿನಕ್ಕೆ ಒಂದು ಮೊಟ್ಟೆ ಇಡುವುದು ಸಾಮಾನ್ಯ. ಆದರೆ ಈ ಕೋಳಿ ಮಾತ್ರ ಒಮ್ಮೆಲೆ ಮೂರು, ನಾಲ್ಕು ಮೊಟ್ಟೆಗಳನ್ನು ಇಡುವ ಮೂಲಕ ಯಜಮಾನನನ್ನು ತುಂಬಾ ಖುಷಿಪಡಿಸುತ್ತಿದೆ. ನಮ್ಮ ಕೋಳಿ ಚಿನ್ನದ ಕೋಳಿ. ಹತ್ತು ದಿನಗಳಲ್ಲಿ 35 ಮೊಟ್ಟೆ ಇಟ್ಟಿದೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. 8 ತಿಂಗಳ ವಯಸ್ಸಿನ ಈ ಕೋಳಿ ತನ್ನ 35 ಮೊಟ್ಟೆಗಳ ಮೇಲೆ ಕುಳಿತು ಕಾವು ನೀಡುತ್ತಿದೆ. ಆ 35 ಮೊಟ್ಟೆಗಳಲ್ಲಿ ಕನಿಷ್ಠ 30 ಮರಿಗಳಾದರೂ ಹುಟ್ಟುತ್ತವೆ ಎಂದು ಆ ಯಜಮಾನ ಖುಷಿಯಾಗಿ ಹೇಳಿಕೊಳ್ಳುತ್ತಿದ್ದಾರೆ. ಚಿನ್ನದ ಕೋಳಿ ಎಂದರೆ ಇದೇ ನೋಡಿ. ಇಂತಹ ಅಪರೂಪದ ಸಂಗತಿಗಳು ಎಂತಹವರನ್ನೂ ಚಕಿತಗೊಳಿಸುತ್ತವೆ ಅಲ್ಲವೇ? ಏನೇ ಆಗಲಿ ಈ ರೀತಿಯ ಕೋಳಿ ಒಂದೆರೆಡಿದ್ದರೆ ಅದಕ್ಕಿಂತ ಇನ್ನೇನು ಬೇಕು? ಅದೃಷ್ಟ ಅಂದರೆ ಇದೇ ನೋಡಿ..!

Post a Comment