ಕೊಹ್ಲಿ ಸಹ ಸಂಕ್ರಾಂತಿ ಹೀರೋ... ಮೂರು ವರ್ಷಗಳಿಂದ ಸೆಂಚುರಿಗಳನ್ನು ಒಂದೇ ದಿನಾಂಕ ಬಾರಿಸಿದ ಹ್ಯಾಟ್ರಿಕ್ಕ್ರಿಕೆಟರ್!!
ದಾಖಲೆಗಳ ವೀರ ವಿರಾಟ್ ಕೊಹ್ಲಿ ಇನ್ನೊಂದು ಅಪರೂಪದ ದಾಖಲೆ ಸೃಷ್ಟಿಸಿದ್ದಾರೆ. ಸತತ ಮೂರು ವರ್ಷಗಳು ಒಂದೇ ದಿನಾಂಕದಂದು ಸೆಂಚುರಿ ಬಾರಿಸಿದ್ದಾನೆ. ಆ ರೀತಿ ಮೂರು ವರ್ಷಗಳು ಮೂರು ಸೆಂಚುರಿಗಳು ಒಂದೇ ದಿನಾಂಕದಂದು ಬಾರಿಸಿದ ಹ್ಯಾಟ್ರಿಕ್ ಕ್ರಿಕೆಟರ್ ಎನ್ನಿಸಿಕೊಂಡಿದ್ದಾರೆ ಕೊಹ್ಲಿ. ಅಡಿಲೈಡ್ನಲ್ಲಿ ಆಸ್ಟ್ರೇಲಿಯಾದೊಂದಿಗೆ ಮಂಗಳವಾರ ನಡೆದ ಏಕದಿನ ಪಂದ್ಯದಲ್ಲಿ ಈ ದಾಖಲೆ ಮಾಡಿದರು.
2017 ಜನವರಿ 15ನೇ ತಾರೀಖು ಭಾರತ, ಇಂಗ್ಲೆಂಡ್ ನಡುವೆ ಪುಣೆಯಲ್ಲಿ ಏಕ ದಿನ ಪಂದ್ಯ ನಡೆಯಿತು. ಈ ಮ್ಯಾಚ್ನಲ್ಲಿ ಕೊಹ್ಲಿ 105 ಚೆಂಡುಗಳಲ್ಲಿ 122 ರನ್ ಮಾಡಿ, ಟೀಂ ಇಂಡಿಯಾಗೆ ಗೆಲುವನ್ನು ತಂದುಕೊಟ್ಟ. 2018, ಜನವರಿ 13ನೇ ತಾರೀಖು ಸೆಂಚುರಿಯನ್ನಲ್ಲಿ ದಕ್ಷಿಣ ಆಫ್ರಿಕಾ, ಟೀಂ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಮ್ಯಾಚ್ ಆರಂಭವಾಯಿತು. ಆ ಮ್ಯಾಚ್ ಮೂರನೇ ದಿನ ಎಂದರೆ ಜನವರಿ 15ನೇ ತಾರೀಖು ಕೊಹ್ಲಿ ಸೆಂಚುರಿ ಬಾರಿಸಿದ. 153 ರನ್ ಗಳಿಸಿದರು. ಆದರೆ ಆ ಪಂದ್ಯದಲ್ಲಿ ಭಾರತ ಸೋತಿತು. 2019 ಜನವರಿ 15ರಂದು ಆಡಿಲೆಡ್ನಲಿ ಆಸ್ಟ್ರೇಲಿಯಾದೊಂದಿಗೆ ನಡೆದ ಮ್ಯಾಚ್ನಲ್ಲಿ 104 ರನ್ ಮಾಡಿ ಭಾರತ್ ಬಿಗ್ ವಿಕ್ಟರಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಹೀಗೆ ಮೂರು ವರ್ಷಗಳಿಂದ ಜನವರಿ 15ರಂದು ಕಡ್ಡಾಯವಾಗಿ ಸೆಂಚುರಿ ಹೊಡೆಯುತ್ತಾ ಅಭಿಮಾನಿಗಳನ್ನು ಖುಷಿಪಡಿಸುತ್ತಿದ್ದಾನೆ. ಈ ಮೂಲಕ ರನ್ಗಳ ಯಂತ್ರ ಎನ್ನಿಸಿಕೊಂಡಿದ್ದಾರೆ. ಈ ವರ್ಷ ಮೊದಲ ಸೆಂಚುರಿಯೊಂದಿಗೆ ಕೊಹ್ಲಿ ತನ್ನ ವೃತ್ತಿ ಬದುಕಿನಲ್ಲಿ 39ನೇ ಸೆಂಚುರಿ ಸಾಧಿಸಿದ್ದಾರೆ. ಈ ಅಪರೂಪದ ದಾಖಲೆ ಸೃಷ್ಟಿಸಿದ ಕೊಹ್ಲಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಯ ಸುರಿಮಳೆಯಾಗುತ್ತಿದೆ.
ಸಾಮಾನ್ಯವಾಗಿ ಸಂಕ್ರಾಂತಿಗೆ ಸಿನಿಮಾ ಹೀರೋಗಳು ಹಿಟ್ ಹೊಡೀತಾರೆ. ಬಾಕ್ಸ್ ಆಫೀಸ್ ದಾಖಲೆಗಳು ಉಡೀಸ್ ಆಗುತ್ತವೆ. ಈಗ ವಿರಾಟ್ ಸಹ ಸಂಕ್ರಾಂತಿ ಸೆಂಚುರಿಗಳಿಂದ ಧೂಳೆಬ್ಬಿಸುತ್ತಿದ್ದಾರೆ. ಈ ವರಸೆ ಹೀಗೇ ಮುಂದುವರೆಯಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇದಿಷ್ಟೇ ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲೇ 39 ಏಕದಿನ ಶತಕ ಬಾರಿಸಿದ ಎರಡು ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಬಳಿಕ 39 ಶತಕ ಸಿಡಿಸಿ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿಶ್ವ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಏಕದಿನ ಶತಕಗಳಿಸಿರುವ ಸಚಿನ್ (49)ಗಿಂತ ಕೊಹ್ಲಿ 10 ಶತಕಗಳ ಹಿಂದಿದ್ದು, ಈ ಹಿಂದೆ ಸಚಿನ್ ನುಡಿದಂತೆ ಕ್ರಿಕೆಟ್ ದೇವರ ದಾಖಲೆಗಳನ್ನು ಕೊಹ್ಲಿ ಮುರಿಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ.

Post a Comment