Header Ads

test

ಸಡನ್ ಆಗಿ ಟಾಯ್ಲೆಟ್‌ನಿಂದ ಬಂದು ಎಲ್ಲರ ಮೇಲೆ ಅದನ್ನು ಎಸೆದ... ಬಳಿಕ ಏನಾಯಿತು ಎಂದು ಗೊತ್ತಾರೆ ಶಾಕ್ಆಗ್ತೀರ..!

ನಿಜವಾಗಿ ಕೆಲವರಿಗೆ ಏನಾಗುತ್ತದೋ ಏನೋ ಗೊತ್ತಿಲ್ಲ... ಅಲ್ಲಿ ತನಕ ಚೆನ್ನಾಗಿಯೇ ಇರುತ್ತಾರೆ. ನೋಡಲು ಒಳ್ಳೆಯವರಂತೆಯೇ ವರ್ತಿಸುತ್ತಾರೆ. ಚೆನ್ನಾಗಿಯೇ ಮಾತನಾಡುತ್ತಾರೆ. ಆದರೆ ಅವರಿಗೆ ಅಷ್ಟರಲ್ಲಿ ಏನಾಗುತ್ತದೋ ಗೊತ್ತಿಲ್ಲ. ಒಮ್ಮೆಲೆ ಹುಚ್ಚು ಹಿಡಿದಂತೆ ನಡೆದುಕೊಳ್ಳುತ್ತಾರೆ. ಹುಚ್ಚು ಕೆಲಸ ಮಾಡುತ್ತಾರೆ. ಇದರಿಂದ ಸುತ್ತಲೂ ಇರುವ ಜನರಿಗೆ ಮಾತ್ರ ತೊಂದರೆ ತಪ್ಪಿದ್ದಲ್ಲ. ಒಂದು ವಿಮಾನದಲ್ಲೂ ಸಹ ಪ್ರಯಾಣಿಕರಿಗೆ ಓರ್ವ ವ್ಯಕ್ತಿಯಿಂದ ಇಂತಹದ್ದೇ ತೊಂದರೆ ಎದುರಾಯಿತು. ಇಷ್ಟಕ್ಕೂ ಏನು ನಡೆಯಿತು ಎಂದರೆ.ಅದು ಚಿಕಾಗೋದಿಂದ ಹಾಂಕಾಂಗ್‌ಗೆ ಹೊರಟ ಒಂದು ವಿಮಾನ. ಅದರ ನಂಬರ್ 895. ಅದು ಅಮೆರಿಕನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನ. ಆದರೆ ಅದರಲ್ಲಿನ ಪ್ರಯಾಣಿಕರೆಲ್ಲ ಅದೆಷ್ಟೋ ಹಾಯಾಗಿ ಜರ್ನಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಹೀಗಿರಬೇಕಾದರೆ ಮಾರ್ಗ ಮಧ್ಯೆ ಪ್ರಯಾಣಿಸುತ್ತಿದ್ದಾಗ ಓರ್ವ ಪ್ರಯಾಣಿಕ ಆ ವಿಮಾನದ ಟಾಯ್ಲೆಟ್‌ಗೆ ಹೋದ. ಆದರೆ ಕೂಡಲೆ ಆತ ಟಾಯ್ಲೆಟ್‌ನಿಂದ ಹೊರಬಂದ. ಬಳಿಕ ತನ್ನ ಬಳಿ ಇರುವ ಮಲವನ್ನು ಪ್ರಯಾಣಿಕರ ಮೇಲೆ ಎಸೆಯಲು ಪ್ರಾರಂಭಿಸಿದ. ತನ್ನ ಬಳಿ ಇದ್ದ ಇತರೆ ಪ್ರಯಾಣಿಕರಿಗೆ ಅದನ್ನು ಬಳಿಯಲು ಮುಂದಾದ. ಹಾಗಾಗಿ ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲಾ ಒಮ್ಮೆಲೆ ಶಾಕ್ ಆದರು. ಈ ರೀತಿ ಅಸಹ್ಯವಾಗಿ ಮಾಡಿದರೆ ಯಾರು ತಾನೆ ಶಾಕ್ ಆಗಲ್ಲ ಹೇಳಿ.

ಪ್ರಯಾಣಿಕರೆಲ್ಲಾ ಶಾಕ್ ಆಗಿದ್ದನ್ನು ನೋಡಿ ವಿಮಾನ ಸಿಬ್ಬಂದಿ ಕೂಡಲೆ ಎಚ್ಚೆತ್ತುಕೊಂಡರು. ಆ ವ್ಯಕ್ತಿಯನ್ನು ಕೂಡಲೆ ವಶಕ್ಕೆ ಪಡೆದರು. ಬಳಿಕ ವಿಮಾನವನ್ನು ಅಲಾಸ್ಕಾದಲ್ಲಿ ಇಳಿಸಿದರು. ಬಳಿಕ ಪ್ರಯಾಣಿಕರನ್ನು ಹೋಟೆಲ್‌ಗೆ ಕಳುಹಿಸಿದರು. ಆ ಬಳಿಕ ವಿಮಾನವನ್ನೆಲ್ಲಾ ಸ್ವಚ್ಛಗೊಳಿಸಿದರು. ಇದೆಲ್ಲಾ ಆದ ಬಳಿಕ ವಿಮಾನ ಮತ್ತೆ ಆಕಾಶಕ್ಕೆ ನೆಗೆಯಿತು. ಆದರೆ ಈ ರೀತಿಯ ನೀಚ ಕೆಲಸ ಮಾಡಿದ ಆ ವ್ಯಕ್ತಿಯ ಮೇಲೆ ಯಾವುದೇ ಪ್ರಕರಣ ದಾಖಲಿಸಲಿಲ್ಲವಂತೆ. ಆತನಿಗೆ ಮಾನಸಿಕ ಬುದ್ಧಿ ಭ್ರಮಣೆಯಾಗಿರುತ್ತದೆ ಎಂದು, ಹಾಗಾಗಿಯೇ ಆ ವ್ಯಕ್ತಿಯನ್ನು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಿದೆವು ಎಂದು ವಿಮಾನಯಾನ ಸಿಬ್ಬಂದಿ ತಿಳಿಸಿದ್ದಾರೆ. ಈ ಬಗ್ಗೆ ಎಫ್‌ಬಿಐ ಈ ಘಟನೆ ಬಗ್ಗೆ ವಿಚಾರಣೆ ನಡೆಸಿದೆ ಎಂದು ಗೊತ್ತಾಗಿದೆ. ಅದೇನೇ ಇರಲಿ ಪ್ರಯಾಣಿಕರ ಪರಿಸ್ಥಿತಿ ಹೇಗಿರಬೇಡ. ಅವರು ನಿಜವಾಗಿಯೂ ಆ ಶಾಕ್‌ನಿಂದ ಹೊರಬರಬೇಕಾದರೆ ತುಂಬಾ ಸಮಯವಂತೂ ಬೇಕಾಗುತ್ತದೆ. ಇಂತಹವರಿಗೆ ಏನು ಶಿಕ್ಷೆ ನೀಡಬೇಕು ಹೇಳಿ..? ಎಂತೆಂತಹ ಕೆಟ್ಟ ಜನರ ಇರುತ್ತಾರಪ್ಪಾ..!

No comments