Header Ads

test

ಯಾವಾಗಲೂ ನೀರಿನಲ್ಲಿ ಇರುವ ಮೀನುಗಳು ನೀರನ್ನು ಕುಡಿಯುತ್ತವೆಯೇ? ಶಾಕಿಂಗ್ ಸಂಗತಿ..! ಓದಿದರೆ ನಿಮಗೇಗೊತ್ತಾಗುತ್ತದೆ..!

ಈ ಪ್ರಶ್ನೆ ಒಂದಲ್ಲಾ ಒಂದು ದಿನ ನಮ್ಮೆಲ್ಲರನ್ನೂ ಕಾಡಿರುತ್ತದೆ. ಆದರೆ ಉತ್ತರಕ್ಕಾಗಿ ಅಷ್ಟಾಗಿ ತಲೆ ಕೆಡಿಸಿಕೊಂಡಿರಲ್ಲ. ಇಷ್ಟಕ್ಕೂ ಸದಾ ನೀರಿನಲ್ಲೇ ಇರುವ ಮೀನುಗಳು ನೀರನ್ನು ಕುಡಿಯುತ್ತವೆಯೇ? ಇಲ್ಲವೆ ಎಂಬುದನ್ನು ಈಗ ತಿಳಿದುಕೊಳ್ಳೋಣ. ಸಖತ್ ಇಂಟರೆಸ್ಟಿಂಗ್ ಆಗಿದೆ ಮುಂದೆ ಓದಿ.

ಮೀನುಗಳು ನೀರನ್ನು ಕುಡಿಯುತ್ತವೆಯೇ ಇಲ್ಲವೆ ಎಂಬ ಪ್ರಶ್ನೆಗೆ ಉತ್ತರ ಹೌದು, ಇಲ್ಲ ಎಂದು ಎರಡು ರೀತಿಯಲ್ಲಿ ನೀಡಬಹುದು. ಯಾಕೆಂದರೆ ಉಪ್ಪು ನೀರಿನಲ್ಲಿರುವ ಮೀನುಗಳು ನೀರನ್ನು ಕುಡಿಯುತ್ತವೆ. ಅದೇ ಸಿಹಿ ನೀರಿನಲ್ಲಿರುವ ಮೀನುಗಳು ನೀರನ್ನು ಕುಡಿಯಲ್ಲ. ಇದಕ್ಕೆ ಕಾರಣ ತಿಳಿದುಕೊಳ್ಳಬೇಕೆಂದರೆ ಜೀವರಸಾಯನ ವಿಜ್ಞಾನದ ಪರಾಸರಣ (Osmosis) ಎಂಬ ದ್ರವ (Fluids) ಸಂಗತಿಯನ್ನು ತಿಳಿದುಕೊಳ್ಳಬೇಕು.




ಇದರ ಪ್ರಕಾರ ಎರಡು ಬೇರೆ ಬೇರೆ ಸಾಂದ್ರತೆ (Concnetration) ಇರುವ ದ್ರವಗಳನ್ನು ಒಂದು ಚಿಕ್ಕ ಪೊರೆ (ಮೆಂಬ್ರೇನ್) ಬೇರ್ಪಡಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. ನೀರು ಹೆಚ್ಚು ಸಾಂದ್ರತೆಯಯುಳ್ಳ ದ್ರವದ ಕಡೆಗೆ ಪ್ರವಹಿಸುತ್ತದೆ. ಸಿಹಿ ನೀರಿನಲ್ಲಿರುವ ಮೀನಿನ ದೇಹದಲ್ಲಿನ ದ್ರವ, ಅದರ ಸುತ್ತಲೂ ಇರುವ ನೀರಿನ ಸಾಂದ್ರತೆಗಿಂತಲೂ ಹೆಚ್ಚಾಗಿರುತ್ತದೆ. ಹಾಗಾಗಿ ಆ ಮೀನಿನ ದೇಹದೊಳಕ್ಕೆ ಹೊರಗಿನ ನೀರು ಅದರ ಚರ್ಮ, ಕಿವಿರಿನ ಮೂಲಕ ಶೋಧಿಸಲ್ಪಡುತ್ತದೆ. ಆ ರೀತಿ ಅದರ ದೇಹದೊಳಕ್ಕೆ ಪ್ರವಹಿಸುವ ನೀರನ್ನು ಮೀನು ಹೊರಗೆ ಬಿಡದಿದ್ದರೆ ಸಮಯ ಸರಿದಂತೆ ಹೆಚ್ಚು ನೀರು ಸೇರುವುದರಿಂದ ಅದರ ದೇಹ ಛಿದ್ರಛಿದ್ರವಾಗುವ ಪರಿಸ್ಥಿತಿ ಬರುತ್ತದೆ.

ಇನ್ನು ಉಪ್ಪು ನೀರಿನ ಮೀನಿನ ವಿಚಾರದಲ್ಲಿ ಈ ಪ್ರಕ್ರಿಯೆ ವಿರುದ್ಧ ದಿಕ್ಕಿನಲಿ ನಡೆಯುತ್ತದೆ. ಇಲ್ಲಿ ಮೀನಿನ ಸುತ್ತಲೂ ಇರುವ ನೀರಿನ ಸಾಂದ್ರತೆ ಹೆಚ್ಚಾಗಿ ಇರುವ ಕಾರಣ ಮೀನಿನ ದೇಹದಲ್ಲಿನ ನೀರು ಹೊರಕ್ಕೆ ಸ್ರವಿಸುತ್ತದೆ. ಹಾಗಾಗಿ ಉಪ್ಪು ನೀರಿನ ಮೀನು ಸಮಯ ಸರಿದಂತೆ ದೇಹದಲ್ಲಿನ ನೀರನ್ನು ಕಳೆದುಕೊಳ್ಳುವ ಕಾರಣ ನಿರ್ಜಲೀಕರಣಗೊಂಡು ಒಣಗುವ ಪರಿಸ್ಥಿತಿ ಬರುತ್ತದೆ. ಈ ರೀತಿ ಆಗದಂತಿರಲು ಆ ಮೀನು ತನ್ನ ಸುತ್ತಲೂ ಇರುವ ನೀರನ್ನು ಕಿವಿರು, ಬಾಯಿಯ ಮೂಲಕ ಕುಡಿಯುತ್ತದೆ. ಆ ನೀರು ಅದರ ದೇಹದೊಳಕ್ಕೆ ಸೇರದ ಮೊದಲೇ ಕಿವಿರುಗಳು ಉಪ್ಪು ನೀರಿನಲ್ಲಿನ ಉಪ್ಪನ್ನು ವಿಸರ್ಜಿಸುತ್ತವೆ. ಈಗ ಗೊತ್ತಾಯಿತಲ್ಲವೇ ಮೀನುಗಳು ನೀರು ಕುಡಿಯುತ್ತವೆಯೋ ಇಲ್ಲವೆ ಎಂಬ ಸಂಗತಿ.

No comments