Header Ads

test

ಮುಕೇಶ್ ಅಂಬಾನಿ ಮಗಳು ಇಷಾ ಅಂಬಾನಿ.ತಾಳಿ ಬೆಲೆ ಎಷ್ಟು ಗೊತ್ತಾ.? ಕೋಟಿ ಎಂದು ಗೊತ್ತಾಗಿದೆ.

ಕೇವಲ ಭಾರತ ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಮುಕೇಶ್ ಅಂಬಾನಿ ಇದ್ದಾರೆ. ಮುಕೇಶ್ ಅಂಬಾನಿ ಮಗಳು ಇಷಾ ಅಂಬಾನಿ. ಇತ್ತೀಚೆಗೆ ಇಷಾ-ಆನಂದ್ ಪಿರಾಮಲ್ ಮದುವೆ ಅದ್ದೂರಿಯಾಗಿ ನಡೆದ ಸಂಗತಿ ಎಲ್ಲರಿಗೂ ಗೊತ್ತೇ ಇರುತ್ತದೆ. ಈ ವಿವಾಹ ಕಾರ್ಯಕ್ರಮದಲ್ಲಿ ಬಹಳಷ್ಟು ಖ್ಯಾತನಾಮರು ಪಾಲ್ಗೊಂಡಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕೇಂದ್ರ ಸಚಿವ ರಾಜ್‍ನಾಥ್ ಸಿಂಗ್, ಅಮಿತಾಬ್, ರಜನಿಕಾಂತ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.

ವೇದ ಪಂಡಿತರು ವೇದ ಮಂತ್ರಘೋಷಗಳ ನಡುವೆ ಇವರ ಮದುವೆ ಅತ್ಯಂತ ಅದ್ದೂರಿಯಾಗಿ ನಡೆಯಿತು. ಏಷ್ಯಾದಲ್ಲೇ ಅತ್ಯಂತ ಅದ್ದೂರಿ ಮದುವೆ ಎಂಬ ದಾಖಲೆಯನ್ನೂ ಸೃಷ್ಟಿಸಿದೆ. ಈ ಮದುವೆಗಾಗಿ ಸುಮಾರು ರೂ. 700 ಕೋಟಿ ಖರ್ಚಾಗಿದೆ ಎಂದು ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಇಷಾ ತಾಳಿ ಬೆಲೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇಷಾ ಅಂಬಾನಿ ಧರಿಸಿರುವ ತಾಳಿ ಬೆಲೆ ರೂ.90 ಕೋಟಿ ಎಂದು ಗೊತ್ತಾಗಿದೆ.



ಅದೇನೇ ಇರಲಿ ತಾಳಿ ಎಂದರೆ ತಾಳಿ ಅಲ್ಲವೇ? ಅದು ಎಷ್ಟು ಬೆಲೆ ಬಾಳಿದ್ದು ಎಂಬುದಕ್ಕಿಂತ ಅದರ ಪಾತಿವ್ರತ್ಯ ಮುಖ್ಯ. ಅದು ಬಿಟ್ಟು ತಾಳಿ ಎಷ್ಟು ಬೆಲೆ ಬಾಳುತ್ತದೆ ಎಂಬುದು ಮುಖ್ಯ ಅಲ್ಲ ಅಲ್ಲವೇ? ಅದೇನೇ ಇರಲಿ ಉಳ್ಳವರು ಶಿವಾಲಯ ಕಟ್ಟುವರಯ್ಯಾ ನಾನೇನು ಮಾಡಲಿ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶ ಎಂದು ಬಸವಣ್ಣನವರು ಹೇಳಿಲ್ಲವೇ?

ಅದೆಷ್ಟೋ ಮಂದಿ ತಾಳಿಯೂ ಇಲ್ಲದೆ ಅರಿಶಿನ ಕೊಂಬು ಕಟ್ಟಿಕೊಂಡು ಸುಖವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ತಾಳಿಯ ಮೌಲ್ಯಕ್ಕಿಂತ ಸಂಬಂಧ ಮುಖ್ಯ. ಇನ್ನೂ ಎಷ್ಟೋ ಮಂದಿ ಚಿನ್ನದ ತಾಳಿ, ಆ ತಾಳಿ ಈ ತಾಳಿ ಎಂದು ಲಕ್ಷಾಂತರ ರೂ.ಗಳ ತಾಳಿ ಬಳಸುತ್ತಿದ್ದು ದಾಂಪತ್ಯದಲ್ಲಿ ಬಿರುಕು, ಗಂಡ ಹೆಂಡತಿ ನಡುವೆ ಮನಸ್ತಾಪಗಳನ್ನು ಕಾಣುತ್ತಿದ್ದೇವೆ. ಅದೇನೇ ಇರಲಿ ತಾಳಿಗಿಂತ ಸಂಬಂಧ ಮುಖ್ಯ ಅಲ್ಲವೇ?

ಇಷಾ ಅಂಬಾನಿ ಹಾಗೂ ಆನಂದ್ ಪಿರಾಮಲ್ ಅವರ ನಿಶ್ವಿತಾರ್ಥ ಇಟಲಿಯ ಲೇಕ್ ಕೊಮೊದಲ್ಲಿ ಅದ್ದೂರಿಯಾಗಿ ನಡೆದಿತ್ತು. ಅದಾದ ಬಳಿಕ ಅವರ ಮದುವೆ ಅಂಬಾನಿ ಅವರ ಮುಂಬೈ ನಿವಾಸದಲ್ಲಿ ನೆರವೇರಿತ್ತು.

No comments