Header Ads

test

ಇವರಂಥ ಅಪ್ಪ ಇಲ್ಲ... ಮಕ್ಕಳಿಗೆ ಆಟ ಆಡಲು ಆಟೋ ರಿಕ್ಷಾವನ್ನೇ ತಯಾರಿಸಿಕೊಟ್ಟ ಅಪ್ಪ.! ನೋಡಿದರೆ ನೀವುನಂಬೋದೇ ಇಲ್ಲ!

ಇವರ ಹೆಸರು ಅರುಣ್ ಕುಮಾರ್ ಪುರುಷೋತ್ತಮನ್ ಎಂದು. ಮಕ್ಕಳು ಆಟದ ಸಾಮಗ್ರಿ ಬೇಕು ಎಂದು ಹಠ ಹಿಡಿಯುವುದು ಎಲ್ಲಾ ತಂದೆತಾಯಿಗೆ ಗೊತ್ತೇ ಇರುತ್ತದೆ. ಹಾಗಂತ ಮಕ್ಕಳು ಕೇಳಿದ್ದನ್ನೆಲ್ಲಾ ತೆಗೆದುಕೊಡಲು ಸಾಧ್ಯವಿಲ್ಲ. ಮಕ್ಕಳಿಗೆ ಯಾವುದೇ ಆಟಿಕೆಯ ಬೆಲೆಗಿಂತ ಆ ಆಟಿಕೆ ಮುಖ್ಯವಾಗಿರುತ್ತದೆ. ಒಂದೆರಡು ದಿನ ಅದರ ಜತೆಗೆ ಆಡಿದ ಬಳಿಕ ಅವರ ಮೋಜು ತೀರಿ ಅದನ್ನು ಮೂಲೆಗೆ ಎಸೆಯುತ್ತಾರೆ. ಆದರೆ ಇಲ್ಲೊಬ್ಬ ಅಪ್ಪ ಇದ್ದಾರೆ. ಇವರು ಎಲ್ಲ ಅಪ್ಪಂದಿರಂತೆ ಅಲ್ಲ. ಮಕ್ಕಳು ಆಟಿಕೆ ಕೇಳಿದರೆ ಆಟೋವನ್ನೇ ಮಾಡಿಕೊಟ್ಟಿದ್ದಾರೆ.



ಹೌದು ಕೇರಳ ಮೂಲಕ ಅರುಣ್ ಕುಮಾರ್, ಮಕ್ಕಳಿಗೆಂದೇ ಮಿನಿ ಆಟೋ ತಯಾರಿಸಿಕೊಟ್ಟಿದ್ದಾರೆ. ಹಾಗಂತ ಇದು ಕೇವಲ ಆಟದ ಸಾಮಗ್ರಿ ತರಹ ಇಲ್ಲ. ನಿಜವಾಗಿಯೂ ಆಟೋ ತರವೆ ಇದೆ. ಮಕ್ಕಳು ಇದರಲ್ಲಿ ಕುಳಿತು ಓಡಿಸಬಹುದು. ಹಿಂಬದಿ ಸೀಟು, ಡ್ರೈವರ್ ಸೀಟು, ಹಾರನ್, ಲೈಟು, ಬ್ರೇಕ್ ಎಲ್ಲವೂ ಇದೆ. ಮಿನಿ ಆಟೋ ಎಂಬುದು ಹೊರತು ಪಡಿಸಿದರೆ ಇದರಲ್ಲಿ ಸಕಲವೂ ಇದೆ. ಅರುಣ್ ಅವರು ಇಡುಕ್ಕಿ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಮಕ್ಕಳಿಗೆ ಇದೇ ರೀತಿ ಬುಲೆಟ್, ಜೀಪನ್ನು ತಯಾರಿಸಿಕೊಟ್ಟಿದ್ದರು. ಈಗ ಆಟೋ ರಿಕ್ಷಾ ತಯಾರಿಸಿಕೊಟ್ಟಿದ್ದಾರೆ. ಇದರಲ್ಲಿ ಮಕ್ಕಳು ಕುಳಿತು ಸವಾರಿ ಮಾಡಬಹುದು. ಎಕ್ಸಲೇಟರ್ ಇಟ್ಟರೆ ಮುಂದೆ ಹೋಗುತ್ತದೆ. ಇದು ಬ್ಯಾಟರಿ ಚಾಲಿತ.

ಬಹುಶಃ ಇಂತಹ ಆಟೋ ರಿಕ್ಷಾವನ್ನು ಮಳಿಗೆಯಲ್ಲಿ ತಗೊಳ್ಳುವಂತಿದ್ದರೆ ಸಾವಿರಾರು ರೂಪಾಯಿ ಖರ್ಚಾಗುತ್ತಿತ್ತು. ಆದರೆ ಕಡಿಮೆ ವೆಚ್ಚದಲ್ಲಿ ತಾವೇ ಸ್ವತಃ ಆಟೋವನ್ನು ತಯಾರಿಸಿಕೊಟ್ಟಿದ್ದಾರೆ ಅರುಣ್ ಕುಮಾರ್. ಇದರಿಂದ ಮಕ್ಕಳಿಗೂ ಆಟೋಮೊಬೈಲ್ ಬಗ್ಗೆ ಅರಿವು ಮೂಡುವುದಷ್ಟೇ ಅಲ್ಲ, ಆಟೋ ತಯಾರಿಸುವ ವಿಧಾನ, ಅದು ಕೆಲಸ ಮಾಡುವ ರೀತಿ ಎಲ್ಲವೂ ಗೊತ್ತಾಗುತ್ತದೆ. ಜೊತೆಗೆ ಮನರಂಜನೆ, ಖುಷಿಯೂ ಇರುತ್ತದೆ. ಅಪ್ಪನ ಬೆವರಿನ ಕಷ್ಟವನ್ನೂ ಮಕ್ಕಳಿಗೆ ಅರಿವು ಮಾಡಿಸಿದಂತಾಗುತ್ತದೆ. ಇಂದು ಎಷ್ಟೋ ಮಂದಿ ತಂದೆತಾಯಿ ಮಕ್ಕಳು ಕೇಳಿದ್ದನ್ನು ಕೊಡಿಸುತ್ತಾ, ಅಥವಾ ಅವರ ಬಾಯಿ ಮುಚ್ಚಿಸುತ್ತಾ ಇರುತ್ತಾರೆ. ಆದರೆ ಅರುಣ್ ಕುಮಾರ್ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ಮಕ್ಕಳಿಗೆ ತಾವೇ ಸ್ವತಃ ಆಟಿಕೆ ತಯಾರಿಸಿಕೊಟ್ಟಿರುವುದು ವಿಶೇಷ. ವೀಡಿಯೋ ನೋಡಿ ಆಟೋ ಎಷ್ಟು ಚೆನ್ನಾಗಿದೆ ಎಂದು ಅರ್ಥವಾಗುತ್ತದೆ.

No comments