Header Ads

test

ಪುರುಷರ ಸೇನಾ ತುಕಡಿಯನ್ನು ಮುನ್ನಡೆಸಿದ ಭಾರತದ ಮೊದಲ ವನಿತೆ ಲೆಫ್ಟಿನೆಂಟ್ ಭಾವನಾ ಕಸ್ತೂರಿ..ನಿಮಗೆಗೊತ್ತಿಲ್ಲದ ಸಂಗತಿಗಳು..!

2019ನೇ ವರ್ಷ ಹಲವಾರು ಆರಂಭಗಳಿಗೆ ಮುನ್ನುಡಿ ಬರೆದಿದೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಗೆ ಭಾರತ ಪಾತ್ರವಾಗಿದೆ. ಅದೇ ರೀತಿ ಜನವರಿ 15ರಂದು ನಡೆದ ಆರ್ಮಿ ಡೇ ಪರೇಡ್‌ನಲ್ಲಿ ಪುರುಷ ಸೇನಾ ತುಕಡಿಯನ್ನು ಮುನ್ನಡೆಸಿದ ಭಾರತದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಯಿತು.

ಒಟ್ಟು 144 ಮಂದಿ ಇದ್ದ ಸೇನಾ ತುಕಡಿಯನ್ನು ಲೆಫ್ಟಿನೆಂಟ್ ಭಾವನಾ ಕಸ್ತೂರಿ ಮುನ್ನಡೆಸಿದ್ದಾರೆ. ಈ ಮೂಲಕ ಭಾರತೀಯ ಸೇನಾ ಇತಿಹಾಸದಲ್ಲೇ ಹೊಸ ದಾಖಲೆಗೆ ಪಾತ್ರರಾದರು. ಕಾರಣ ಇದುವರೆಗೆ ಯಾವ ಮಹಿಳೆಯೂ ಮೂರೂ ಸೇನಾ ಪಡೆಗಳಲ್ಲಿ ಸೇನಾ ತುಕಡಿಯನ್ನು ಮುನ್ನಡೆಸಿರಲಿಲ್ಲ. ಭಾವನಾ ಅವರೇ ಮೊದಲಿಗರು ಎಂಬುದು ಹೆಮ್ಮೆಯ ಸಂಗತಿ.71ನೇ ಆರ್ಮಿ ಡೇ ಪರೇಡ್‌ನಲ್ಲಿ ಭಾವನಾ ಅವರು ಇಂಡಿಯನ್ ಆರ್ಮಿ ಸರ್ವಿಸ್ ಕಾರ್ಪ್ಸ್ (ಎಎಸ್‌ಸಿ) ತುಕಡಿಯನ್ನು ಮುನ್ನಡೆಸಿದ್ದಾರೆ. ನಾರಿ ಶಕ್ತಿಯನ್ನು ತೋರಿಸಲು ಅವಕಾಶ ನೀಡಿದ್ದಕ್ಕಾಗಿ ಲೆಫ್ಟಿನೆಂಟ್ ಭಾವನಾ ಕಸ್ತೂರಿ ಸೇನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಂತಹ ಅವಕಾಶಗಳು ಮಹಿಳೆಯರಿಗೆ ಎಲ್ಲಾ ರಂಗದಲ್ಲಿ ಮುಂದುವರಿಯಲು ಪ್ರೇರಣೆ ಎಂದು ಅವರು ಹೇಳಿದ್ದಾರೆ.

"ನಮ್ಮ ಕೇಂದ್ರ ಬೆಂಗಳೂರು. ನಾನೂ ಸಹ ಅಲ್ಲಿನವಳು. ಕಳೆದ ಆರು ತಿಂಗಳಿಂದ ಪ್ರಾಕ್ಟೀಸ್ ಮಾಡಿದ್ದೇವೆ. ನನ್ನ ಜತೆಗೆ ಇಬ್ಬರು ಪುರುಷ ಅಧಿಕಾರಿಗಳು ಇದೇ ಕೇಂದ್ರದವರು ಪ್ರಾಕ್ಟೀಸ್ ಮಾಡುತ್ತಿದ್ದಾರೆ ಎಂದಿದ್ದಾರೆ ಕಸ್ತೂರಿ. ತಮಗೆ ಈ ಅವಕಾಶ ನೀಡಿರುವುದು ಮುಂದೆ ಹಲವಾರು ಮಹಿಳೆಯರಿಗೂ ಇದರಿಂದ ನೆರವಾಗಲಿದೆ. ಇನ್ನಷ್ಟು ಮಹಿಳೆಯರು ಮುಂದೆ ಬರುತ್ತಾರೆ ಎಂಬ ಆಶಾ ಭಾವನೆಯನ್ನು ಕಸ್ತೂರಿ ಅವರು ವ್ಯಕ್ತಪಡಿಸಿದ್ದಾರೆ.

https://twitter.com/PIB_India/status/1089030694464942080

ಜನವರಿ 1949ರಂದು ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರಿಂದ ಲೆಫ್ಟಿನೆಂಟ್ ಜನರಲ್ ಕೆ ಎಂ ಕಾರಿಯಪ್ಪ ಅಧಿಕಾರ ಸ್ವೀಕರಿಸಿದ ದಿನದಿಂದ ಪ್ರತಿ ವರ್ಷ ಜನವರಿ 15ರಂದು ಆರ್ಮಿ ದಿನಾವಣೆ ಆಚರಿಸಲಾಗುತ್ತದೆ. ಇದೇ ದಿನ ನಮ್ಮ ದೇಶಕ್ಕಾಗಿ, ಜನರಿಗಾಗಿ ಪ್ರಾಣಾರ್ಪಣೆ ಮಾಡಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಲಾಗುತ್ತದೆ.

No comments