Header Ads

test

ಇದನ್ನು ಓದಿದ ಬಳಿಕ ಸೀಬೆ ಹಣ್ಣಿಗಿಂತ ಸೀಬೆ ಎಲೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೀರ..!

ಮನುಷ್ಯ ಕಾಯಿಲೆ ಬಿದ್ದ ಬಳಿಕ ಔಷದಿಗಳನ್ನು ಬಳಸಲು ಪ್ರಾರಂಭಿಸುತ್ತಾನೆ. ಆದರೆ ಆ ಖಾಯಿಲೆಗಳು ಬಾರದಂತೆ ನೋಡಿಕೊಳ್ಳಿ ಎಂದರೆ ಮಾತ್ರ ಅಷ್ಟಾಗಿ ಆಸಕ್ತಿ ತೋರಲ್ಲ. ಅದೆಷ್ಟೋ ಕಾಯಿಲೆಗಳು ಬಾರದಂತೆ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕು. ಕ್ಯಾನ್ಸರ್ ಸೇರಿದಂತೆ ಮೊದಲಿಂದಲೂ ಎಚ್ಚರದಿಂದ ಇದ್ದರೆ ಅವೆಲ್ಲವೂ ದೂರ ಇರುತ್ತವೆ. ಆದರೆ ಈ ಬಿಝಿ ಶೆಡ್ಯೂಲ್, ಜೀವನದ ನಡುವೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಎಂಬುದು ಅಸಾಧ್ಯವಾದ ಕೆಲಸವಾಗಿದೆ. ಆದರೆ ನೀವಾದರೂ ಈ ಸಣ್ಣ ಸಣ್ಣ ಮುಂಜಾಗ್ರತೆಗಳನ್ನು ತೆಗೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ. ಸೀಬೆ ಗಿಡದ ಎಳೆ ಎಲೆಗಳನ್ನು ತಿನ್ನುವುದರಿಂದ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಆ ಪ್ರಯೋಜನಗಳು ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ.



ಸೀಬೆ ಎಲೆಗಳಲ್ಲಿ ಟ್ಯಾಕಿನ್ಸ್, ಆಕ್ಸಲೇಟ್‌ಗಳು ಇರುತ್ತವೆ. ಅವು ಒಳ್ಳೆಯ ಆಂಟಿ ಬಯಾಟಿಕ್ಸ್ ಆಗಿ ಕೆಲಸ ಮಾಡುತ್ತವೆ. ಅದರಿಂದ ಹಲವು ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ.ಬಾಯಿ ಹುಣ್ಣು, ಗಾಯಗಳು, ಗಂಟಲು ನೋವು ಇರುವವರು ಹಳದಿ ಬಣ್ಣದ ಸೀಬೆ ಎಲೆಗಳನ್ನು ಜಗಿದು ಸ್ವಲ್ಪ ಹೊತ್ತು ಬಾಯಲ್ಲಿ ಆ ಹಿಪ್ಪೆಯನ್ನು ಚಪ್ಪರಿಸಬೇಕು. ಆ ಬಳಿಕ ಆ ಹಿಪ್ಪೆಯನ್ನು ಉಗುಳಿದರೂ ಪರವಾಗಿಲ್ಲ. ಒಂದು ವೇಳೆ ನುಂಗಿದರೂ ಪರವಾಗಿಲ್ಲ. ನಿತ್ಯ ಬೆಳಗ್ಗೆ, ಸಂಜೆ ಈ ರೀತಿ ಎರಡು ಸಲ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಎಳೆ ಸೀಬೆ ಎಲೆಗಳನ್ನು ನೀರಿನಲ್ಲಿ ಬೇಯಿಸಿ, ಆ ಬಳಿಕ ನೀರಿನಿಂದ ಎಲೆಗಳನ್ನು ತೆಗೆದು ಆ ನೀರನ್ನು ಕುಡಿಯುವುದರಿಂದ ಅಜೀರ್ಣ ಸಮಸ್ಯೆಯ ಜೊತೆಗೆ, ನೆಗಡಿ ಸಹ ಕಡಿಮೆಯಾಗುತ್ತದೆ. ಹೊಟ್ಟೆಯಲ್ಲಿ ಸಮಸ್ಯೆ ಇದ್ದರೂ ಸಹ ಈ ನೀರಿನಿಂದ ಉಪಶಮನ ಪಡೆಯಬಹುದು.ವಾರದಲ್ಲಿ ಒಂದು ಅಥವಾ ಎರಡು ಸಲ ಸೀಬೆ ಎಲೆಗಳ ಕಷಾಯ (ಸೀಬೆ ಎಲೆ ಚೂರ್ಣವನ್ನು ಬಿಸಿ ನೀರಿಗೆ ಹಾಕಬೇಕು) ಮಾಡಿ ಕುಡಿಯುವುದರಿಂದ ಹಲವು ರೀತಿಯ ಕ್ಯಾನ್ಸರ್ ಸಮಸ್ಯೆಗಳು ದೂರವಾಗುತ್ತವೆ ಎಂದು ತಜ್ಞರು ಹೇಳುತ್ತಿದ್ದಾರೆ.ಸೀಬೆ ಎಲೆ ಕಷಾಯ ಎಂಬುದು ದೇಹದಲ್ಲಿನ ಕೊಲೆಸ್ಟರಾಲ್ ಪ್ರಮಾಣವನ್ನು ಸಮಪ್ರಮಾಣದಲ್ಲಿ ಇರುವಂತೆ ಮಾಡುತ್ತದೆ.ಸೀಬೆ ಹಣ್ಣು ತಿನ್ನುವುದರಿಂದ ಉತ್ತಮ ಪ್ರಯೋಜನಗಳಿವೆ. ಆದರೆ ಸೀಬೆ ಎಲೆ ಇನ್ನೂ ಹೆಚ್ಚು ಉಪಯುಕ್ತ. ಹಾಗಾಗಿ ಸೀಬೆ ಎಲೆ ಬಗ್ಗೆ ಎಲ್ಲರಿಗೂ ಗೊತ್ತಾಗುವಂತೆ ಈ ಸಂಗತಿಯನ್ನು ಹಂಚಿಕೊಳ್ಳಿ.

No comments