Header Ads

test

ರೈಲು ಟಿಕೆಟ್ ಕನ್ಫರ್ಮ್ ಆಗಲಿಲ್ಲ, ಸೀಟುಕೊಟ್ಟ.ರಾತ್ರಿಯಲ್ಲಾ ಜರ್ನಿ, ಬಳಿಕ ಏನಾಯಿತು..?

ನಮ್ಮ ಅಂಕಲ್‌ಗೆ ಆರೋಗ್ಯ ಚೆನ್ನಾಗಿಲ್ಲದ ಕಾರಣ... ನಮ್ಮ ಪೇರೆಂಟ್ಸ್ ಅವರನ್ನು ನೋಡಲು ಬಿಹಾರಕ್ಕೆ ಹೋದರು. ಹೋದ ಎರಡು ದಿನಗಳಿಗೆ ಅಲ್ಲಿಂದ ನಮ್ಮ ಅಮ್ಮ ಫೋನ್ ಮಾಡಿ, ಮಾವ ತೀರಿಕೊಂಡರು ನೀನು ಕೂಡಲೆ ಹೊರಟು ಬಾ ಎಂದು ಹೇಳಿದರು. ತಕ್ಷಣ ರೈಲು ಟಿಕೆಟ್ ಬುಕ್ ಮಾಡಿಕೊಂಡೆ.. ಸೀಟ್ ಇನ್ನೂ ಕನ್ಫರ್ಮ್ ಆಗಲಿಲ್ಲ. ವೆಯಿಟಿಂಗ್ ಲಿಸ್ಟ್‌ನಲ್ಲಿತ್ತು. ಆದರೂ ಸರಿ ಹೋಗಲೇಬೇಕಾಗಿತ್ತು... ರೈಲು ಹತ್ತಿದೆ. ಯಾವುದಾದರೂ ಸೀಟ್ ಖಾಲಿ ಇದ್ದರೆ ಕುಳಿತುಕೊಳ್ಳೋಣ ಎಂದುಕೊಂಡೆ... ಆದರೆ ಎಲ್ಲಾ ಫಿಲ್ ಆಗಿತ್ತು. ಅದಾಗಲೆ ಸಂಜೆ 7 ಗಂಟೆ ಆಗುತ್ತಿದೆ. ಇನ್ನು ಮಾಡುವುದೇನು ಇಲ್ಲದೆ ರೈಲಿನ ಡೋರ್ ಬಳಿ ನಿಂತುಕೊಂಡೆ. ಅಷ್ಟರಲ್ಲಿ ಒಬ್ಬಾತ ಬಂದು... ಮೇಡಂ ನಿಮಗೆ ಸೀಟ್ ಬೇಕಾ? ಎಂದು ಕೇಳಿದ.



ಹ್ಞಾಂ... ಹೌದು ಎಂದೆ. ಇದು ನನ್ನ ಬರ್ತ್.. ಸೋ "ನೀವು ಮಲಗಿ" ನಾನು ಡೋರ್ ಬಳಿ ಕೂರುತ್ತೇನೆ ಎಂದ. ಆ ರೀತಿ ಅಲ್ಲ ಎಂದು ಫೈನಲ್ ಆಗಿ ಒಂದು ತೀರ್ಮಾನಕ್ಕೆ ಬಂದೆವು. ಇರುವ ಒಂದು ಬರ್ತ್‌‍ನಲ್ಲಿ ಮಲಗದೆ.. ಇಬ್ಬರೂ ಕುಳಿತುಕೊಳ್ಳೋಣ ಎಂದು.. ಆತ ಓಕೆ ಎಂದ. ರಾತ್ರಿಯಲ್ಲಾ ಆತ ಅತ್ತ ಕಡೆ, ನಾನು ಇತ್ತ ಕಡೆ ಚೇರ್‌ನಲ್ಲಿ ಕುಳಿತು ಮಾತನಾಡಿಕೊಳ್ಳುತ್ತಾ ಕಳೆದೆವು. ಆತ ಅಮೆರಿಕಾದಲ್ಲಿ ಜಾಬ್ ಮಾಡುತ್ತಾನೆಂದು, 4 ದಿನ ರಜೆ ಹಾಕಿ ಸ್ವಂತ ಊರಿಗೆ ಬಂದಿರುವುದಾಗಿ ತಿಳಿಸಿದ. ಆ ಮಾತಿನಲ್ಲೇ ಇಬ್ಬರ ಫೋನ್ ನಂಬರ್‌ಗಳೂ ವಿನಿಯೋಗವಾದವು. ಬೆಳಗ್ಗೆ ನಾನು ಇಳಿಯುವ ಸ್ಟೇಷನ್ ಬಂದ ಕಾರಣ ಆತನಿಗೆ ಕೃತಜ್ಞತೆ ತಿಳಿಸಿ ರೈಲು ಇಳಿದೆ.

ಕಟ್ ಮಾಡಿದರೆ.. ಸರಿಯಾಗಿ ಒಂದು ವರ್ಷದ ಬಳಿಕ ಆತನೊಂದಿಗೆ ನನ್ನ ಮದುವೆ ಆಯಿತು. ಆದರೆ ಅದು ಹಿರಿಯರು ನಿಶ್ಚಯಿಸಿದ ಮದುವೆಯಾದ ಕಾರಣ ಇಲ್ಲಿ ಹೇಳಿಕೊಳ್ಳಬೇಕಾದ ಸಂಗತಿ. ನಮ್ಮ ವೈವಾಹಿಕ ಜೀವನ ತುಂಬಾ ಆನಂದಮಯವಾಗಿ ಕಳೆಯುತ್ತಿದೆ. ನಮ್ಮಿಬ್ಬರ ದಾಂಪತ್ಯ ಜೀವನದ ನೆನಪಿಗೆ ಒಂದು ಮಗುವಾಗಿದೆ. ಈಗ ನಮ್ಮವರು ಅಮೆರಿಕಾ ಕೆಲಸವನ್ನು ರಿಸೈನ್ ಮಾಡಿ... ಇಲ್ಲೇ ಅದಕ್ಕಿಂತಲೂ ಒಳ್ಳೆಯ ಜಾಬ್‍ಗೆ ಜಾಯಿನ್ ಆಗಿದ್ದಾರೆ. ಜೀವನದಲ್ಲಿ ಎಲ್ಲವೂ ಊಹಿಸಿದಂತಹವು ನಡೆಯಲ್ಲ. ಅದಕ್ಕೆ ಪ್ರತ್ಯಕ್ಷ ಉದಾಹರಣೆ ನನ್ನ ಲವ್ ಸ್ಟೋರಿ. ಈ ರೀತಿಯ ಲವ್ ಸ್ಟೋರಿ ನೀವು ಕೇಳಿರಲ್ಲ ಅಲ್ಲವೇ?

No comments