ತೆಂಗಿನ ಚಿಪ್ಪು ಬೇಕಾ ಗುರು? ಅಮೆಜಾನ್ನಲ್ಲಿ ಇದರ ಬೆಲೆ ಎಷ್ಟು ಗೊತ್ತಾ..!
ಆನ್ಲೈನ್ ರೀಟೈಲರ್ ಅಮೆಜಾನ್ ಮಾರಾಟ ಮತ್ತೊಮ್ಮೆ ಸುದ್ದಿಯಾಗಿದೆ. ಅಮೆಜಾನ್ ಬ್ರಾಂಡೆಡ್ ಬಟ್ಟೆಗಳು, ಸ್ಮಾರ್ಟ್ಫೋನ್ ಮಾರಾಟದಲ್ಲಿ, ಪ್ರಮುಖ ಎಲಕ್ಟ್ರಾನಿಕ್ಸ್ ಮಾರಾಟದಲ್ಲಷ್ಟೇ ಅಲ್ಲ, ಅತ್ಯಂತ ಬೆಲೆ ಬಾಳುವ ಪುರಾತನ ವಸ್ತುಗಳು ಅಲ್ಲವೇ ಅಲ್ಲ, ಇದುವರೆಗೆ ಬೆರಣಿ, ರೆಡಿಮೇಡ್ ಸಗಣಿ ಸಹ ಅಮೆಜಾನ್ ಆನ್ಲೈನ್ ಸ್ಟೋರ್ನಲ್ಲಿ ಮಾರಲಾಗಿದೆ. ಇದೀಗ ತೆಂಗಿನ ಚಿಪ್ಪು ಕಪ್ ಲಿಸ್ಟ್ನಲ್ಲಿ ಕಾಣಿಸಿದೆ. ನ್ಯಾಚುರಲ್ ಕೋಕೋನಟ್ ಷೆಲ್ ಕಪ್ ಹೆಸರಿನಲ್ಲಿ ಇದನ್ನು ಮಾರಾಟಕ್ಕಿಡಲಾಗಿದೆ.
ಈ ಬಗ್ಗೆ ನೆಟ್ಟಿಗರು ಬಿಡುತ್ತಿರುವ ವ್ಯಂಗ್ಯಾಸ್ತ್ರಗಳಿಂದ ನ್ಯಾಚುರಲ್ ಕೋಕೋನಟ್ ಷೆಲ್ ಕ್ಷಣಗಳಲ್ಲೇ ವೈರಲ್ ಆಗಿ ಬದಲಾಯಿತು. ನ್ಯಾಚುರಲ್ ಕೋಕೋನಟ್ ಷೆಲ್ ಬೆಲೆ ರೂ.1289ರಿಂದ ಆರಂಭ. ಡಿಮಾಂಡ್ ಹೆಚ್ಚಾದರೆ ರೂ.2499ರವರೆಗೂ ಇರುತ್ತದೆ ಎಂದು ಇದು ಅಮೆಜಾನ್ನಲ್ಲಿ ಕಾಣಿಸಿದೆ. ಮಿಗಿಲಾಗಿ ಶೇ.55ರಷ್ಟು ವಿಶೇಷ ರಿಯಾಯಿತಿಯೊಂದಿಗೆ ರೂ.1365ಕ್ಕೆ (ತೆಂಗಿನ ಚಿಪ್ಪಿನ ಬೆಲೆ ರೂ.3 ಸಾವಿರ) ನೀಡಲಾಗುತ್ತಿದೆ..!
ಈ ಬೆಲೆಗೆ ಒಳ್ಳೆಯ ಪವರ್ ಬ್ಯಾಂಕ್, ಅಥವಾ ಬ್ರಾಂಡೆಡ್ ಹೆಡ್ಸೆಟ್ ಕೊಳ್ಳಬಹುದು. ನೋಕಿಯಾ ಫೀಚರ್ ಫೋನ್ ಸಹ ಖರೀದಿಸಬಹುದು. ಎರಡು ಸೋನಿ ಹೆಡ್ ಸೆಟ್ಸ್ ಸಹ ಬರುತ್ತವೆ ಎಂದು ಟ್ವಿಟರ್ನಲ್ಲಿ ಜೋಕ್ಗಳು ಹರಿದಾಡುತ್ತಿವೆ. ನಮ್ಮ ಮನೆ ಬಳಿ ರಾಶಿರಾಶಿ ತೆಂಗಿನ ಚಿಪ್ಪುಗಳಿವೆ, ಅಮೆಜಾನ್ಗೆ ಅವು ಉಚಿತ ಎಂದು ಇನ್ನೊಬ್ಬ ನೇಟಿಜನ್ ಕಾಮೆಂಟ್ ಮಾಡಿದ್ದಾನೆ. ಹಾಗಾಗಿ ಟ್ವಿಟರ್ನಲ್ಲಿ ದೊಡ್ಡ ಚರ್ಚೆ ಆರಂಭವಾಗಿದೆ.
ಇನ್ನು ಈ ನ್ಯಾಚುರಲ್ ಕೋಕೋನಟ್ ಷೆಲ್ ಕಪ್ ವಿಶೇಷಗಳನ್ನು ನೀವೊಮ್ಮೆ ನೋಡಲೇಬೇಕು. ಇನ್ನೊಂದು ಕಡೆ ಸದ್ಯಕ್ಕೆ ಈ ಕಪ್ ಲಭ್ಯವಿಲ್ಲ ಎಂಬ ಮಾಹಿತಿ ಅಮೆಜಾನ್ ಸೈಟ್ನಲ್ಲಿ ಕಾಣಿಸುತ್ತದೆ. ಇದು ಸಖತ್ ವಿಚಿತ್ರ ಅನ್ನಿಸುತ್ತದೆ ಅಲ್ಲವೇ?
ಆನ್ಲೈನ್ನಲ್ಲಿ ತೆಂಗಿನ ಚಿಪ್ಪು ಮಾರಾಟ ಮಾಡುವುದರಲ್ಲಿ ತಪ್ಪೇನು ಇಲ್ಲ. ಆದರೆ ಅದಕ್ಕೆ ಒಂದು ಬೆಲೆ ಬೇಡವೇ? ಈ ರೀತಿ ಸಾವಿರಕ್ಕೂ ಹೆಚ್ಚು ಬೆಲೆ ಇಟ್ಟು ಯಾರ ಕೈಗೆ ಚಿಪ್ಪು ಕೊಡಬೇಕು ಎಂದುಕೊಂಡಿದ್ದಾರೋ ಏನೋ? ಒಟ್ನಲ್ಲಿ ಇದನ್ನು ತೆಗೆದುಕೊಂಡವರ ಕೈಗೆ ಚಿಪ್ಪೇ ಗತಿ..! ನ್ಯಾಚುರಲ್ ಕಪ್ಪು ಎಂದು ಚಿಪ್ಪು ಮಾರುತ್ತಿದ್ದಾರೆ...ನೀವು ಗಪ್ ಚಿಪ್ ಆಗಿರದೆ ಕಾಮೆಂಟ್ ಮಾಡಿ ಪ್ಲೀಸ್..!

Post a Comment