ಜೀವನದಲ್ಲಿ ಅತಿ ದೊಡ್ಡ ತಪ್ಪು.. ಪ್ರಚಾರದಲ್ಲಿ ಮುಳುಗಿ ಓಟು ಹಾಕಲು ಮರೆತ ಸರ್ಪಂಚ್ ಅಭ್ಯರ್ಥಿದಂಪತಿಗಳು.. ಒಂದು ಮತದಲ್ಲಿ ಸೋಲು..!
ತೆಲಂಗಾಣದಲ್ಲಿ ಪಂಚಾಯಿತಿ ಚುನಾವಣೆ ಸಂಭ್ರಮ ಜೋರಾಗಿದೆ. ಜನವರಿ 21ರಂದು ಮೊದಲ ಹಂತಹ ಚುನಾವಣೆ ಪೂರ್ಣಗೊಂಡು ಫಲಿತಾಂಶ ಸಹ ಹೊರಬಿದ್ದಿದೆ. ಪಕ್ಷಗಳ ಜತೆ ಸಂಬಂಧ ಇಲ್ಲದ ಈ ಚುನಾವಣೆ ಸಹ ಟಿಆರ್ಎಸ್, ಕಾಂಗ್ರೆಸ್ ಪಕ್ಷಗಳ ಸುತ್ತಲೂ ಗಿರಕಿ ಹೊಡೆಯಿತು. ಮೊದಲ ಹಂತಲ್ಲಿ ಹೆಚ್ಚಾಗಿ ಟಿಆರ್ಎಸ್ನ್ನು ಬಲಪಡಿಸಿದ ಅಭ್ಯರ್ಥಿಗಳೇ ಗೆಲುವನ್ನು ಸಾಧಿಸಿದರು. ಗೆದ್ದವರು ಆನಂದದಲ್ಲಿ ಬೀಗಿದರೆ, ಸೋತವರು ಮಾತ್ರ ಸಪ್ಪೆ ಮುಖ ಹಾಕಿಕೊಂಡರು. ಆದರೆ ಯಾದಾದ್ರಿ ಜಿಲ್ಲೆ ಬೊಮ್ಮಲ ರಾಮಾರಂ ಮಂಡಲದ ರಂಗಾಪುರ ಗ್ರಾಮದಲ್ಲಿ ಸರ್ಪಂಚ್ ಆಗಿ ಸ್ಪರ್ಧಿಸಿ ಸೋತ ಅಭ್ಯರ್ಥಿ ಮಾತ್ರ ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ಜೀವನದಲ್ಲೇ ಮರೆಯದ ತಪ್ಪು ಮಾಡಿದೆ ಎಂದು ಆತಂಕ ಪಡುತ್ತಿದ್ದಾನೆ. ತಮ್ಮ ಊರಿನ ಇತಿಹಾಸದಲ್ಲೇ ತಮ್ಮನ್ನು ಇನ್ನು ಮುಂದೆ ಜೋಕರ್ ತರಹ ನೋಡುತ್ತಾರೆಂದು, ತಮ್ಮ ಮೇಲೆ ಪ್ರತಿಯೊಬ್ಬರೂ ಅನುಕಂಪ ತೋರುತ್ತಾರೆಂದು ನೋವಿನಿಂದ ನುಡಿದಿದ್ದಾರೆ.
ಇಷ್ಟಕ್ಕೂ ಅಸಲಿ ಸಂಗತಿ ಏನೆಂದರೆ... ರಂಗಾಪುರ ಗ್ರಾಮದಲ್ಲಿ ಆಗಂ ರೆಡ್ಡಿ, ರಾಮಿಡಿ ಪ್ರಭಾಕರ್ ರೆಡ್ಡಿ ಸರ್ಪಂಚ್ ಸ್ಪರ್ಧೆಯಲ್ಲಿ ನಿಂತಿದ್ದರು. ಇಬ್ಬರೂ ಸಹ ತೀವ್ರ ಸ್ಪರ್ಧೆಗೆ ಬಿದ್ದರು. ಇಬ್ಬರೂ ತುಂಬಾ ದುಡ್ಡು ಖರ್ಚು ಮಾಡಿದಂತೆಯೂ ತಿಳಿಯುತ್ತದೆ. ವಿಶೇಷ ಎಂದರೆ ಫಲಿತಾಂಶ ಹೊರಬಿದ್ದ ಬಳಿಕ ರಾಮಿಡಿ ಪ್ರಭಾಕರ ರೆಡ್ಡಿ ಒಂದೇ ಒಂದು ಓಟಿನ ಮೂಲಕ ಗೆದ್ದಿದ್ದಾರೆ. ಒಂದು ಮತ ಅಂತರ ಬಂದ ಕಾರಣ ರೀ ಕೌಂಟಿಂಗ್ ಸಹ ಮಾಡಿದರು. ಆದರೂ ಪ್ರಭಾಕರ ರೆಡ್ದಿಗೇ ಹೆಚ್ಚು ಓಟುಗಳು ಬಂದವು. ಹಾಗಾಗಿ ಆಗಂ ರೆಡ್ಡಿ ಸೋತು ಹೋದ. ಇಲ್ಲಿ ಟ್ವಿಸ್ಟ್ ಏನೆಂದರೆ ಆಗಂರೆಡ್ಡಿ ದಂಪತಿಗಳು ಮತದಾರರನ್ನು ಬೂತಿನ ಬಳಿಗೆ ಕಳುಹಿಸುವುದು, ಅವರನ್ನು ತಮಗೆ ಮತ ಹಕಿ ಎಂದು ಹೇಳುವುದಕ್ಕಾಗಿ ಊರೆಲ್ಲಾ ತಿರುಗಾಡಿದರು. ಆ ಗಲಾಟೆಯಲ್ಲಿ ತಮ್ಮ ಓಟಿನ ಹಕ್ಕು ಚಲಾಯಿಸುವುದನ್ನೇ ಮರೆತಿದ್ದರು.
ಸಮಯ ಕಳೆಯುವವರೆಗೂ ಹಾಕೋಣ, ಹಾಕೋಣ ಎಂದುಕೊಂಡು ಕಡೆಗೆ ಓಟು ಹಾಕುವುದನ್ನೇ ಮರೆತಿದ್ದಾರೆ. ಇದರಿಂದ ಅವರು ಮತ ಹಾಕಲು ಸಾಧ್ಯವಾಗಿಲ್ಲ. ಮತ ಚಲಾಯಿಸದಿದ್ದರೂ ತಾವು ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಒಂದೇ ಒಂದು ಮತದ ಅಂತರದಲ್ಲಿ ಸೋತಿದ್ದಾರೆ. ತಮ್ಮ ಎರಡು ಮತಗಳು ಚಲಾಯಿಸಿದ್ದರೆ ಒಂದು ಮತದ ಅಂತರದಲ್ಲಿ ಗೆಲ್ಲುತ್ತಿದ್ದರು. ಇದು ಗೊತ್ತಾಗುತ್ತಿದ್ದರೆ ದಂಪತಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಎಲ್ಲರಿಗೂ ಒಂದೇ ಒಂದು ಮತದ ಬೆಲೆ ಗೊತ್ತೇ ಇರುತ್ತದೆ. ಹಾಗಾಗಿಯೇ ಪ್ರಜಾ ಪ್ರಭುತ್ವದಲ್ಲಿ ನಮಗೆ ನೀಡಿರುವ ಮತದಾನದ ಹಕ್ಕನ್ನು ಬಳಸಿಕೊಳ್ಳಬೇಕು. ನಮ್ಮೊಬ್ಬರ ಮತದ ಮೂಲಕ ಏನಾಗುತ್ತದೆ ಬಿಡು ಎಂಬುವವರಿಗೆ ಉತ್ತರ ಇದೆ.

Post a Comment