Header Ads

test

ನಿಮ್ಮ ಫೋನ್‌ಗಳನ್ನು ನೀವು ಎಲ್ಲಿಡುತ್ತಿದ್ದೀರಿ. ಈ ಜಾಗಗಳಲ್ಲಿ ಇಟ್ಟು ಬಳಸಬಾರದು ಗೊತ್ತೇ..?

ಇಂದಿನ ಜಮಾನದಲ್ಲಿ ಸ್ಮಾರ್ಟ್‍ಫೋನ್‌ಗಳು ನಮ್ಮ ಜೀವನವನ್ನು ಎಷ್ಟೆಲ್ಲಾ ಪ್ರಭಾವಗೊಳಿಸಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ತುಂಬಾ ಕಡಿಮೆ ಬೆಲೆಗೆ ಫೋನ್‌ಗಳು ಲಭಿಸುತ್ತಿವೆ. ಇದರಿಂದ ಅನೇಕ ಮಂದಿ ಕೈಗಳಲ್ಲಿ ಈಗ ಅವು ದರ್ಶನ ನೀಡುತ್ತವೆ. ಸ್ಮಾರ್ಟ್‍ಫೋನ್‌ಗಳು ತುಂಬಾ ಕಡಿಮೆ ಬೆಲೆಗೆ ಸಿಗುತ್ತಿರುವ ಕಾರಣ ಅವನ್ನು ಹೆಚ್ಚು ಮಂದಿ ಬಳಸುತ್ತಿದ್ದಾರೆ. ಆದರೆ ಹೇಗೆ ಬಳಸಿದರೂ ಅವುಗಳಿಂದ ಅಪಾಯ ಇದೆ ಎನ್ನುತ್ತಿದ್ದಾರೆ ವೈದ್ಯರು. ಮುಖ್ಯವಾಗಿ ಫೋನ್‌ಗಳನ್ನು ಕೆಲವು ಜಾಗಗಳಲ್ಲಿ ಇಟ್ಟುಕೊಳ್ಳುವುದರಿಂದ ಅವುಗಳಿಂದ ಬರುವ ರೇಡಿಯೇಷನ್ ನಮಗೆ ಹಾನಿಯನ್ನುಂಟು ಮಾಡುತ್ತದೆ. ಹಾಗಿದ್ದರೆ ಯಾವ್ಯಾವ ಜಾಗದಲ್ಲಿ ಫೋನನ್ನು ಇಟ್ಟುಕೊಳ್ಳಬಾರದು ಎಂಬುದನ್ನು ಈಗ ನೋಡೋಣ.



1. ಚಾರ್ಜರ್ ಮೇಲೆ
ಬಹಳಷ್ಟು ಮಂದಿ ಫೋನನ್ನು ಚಾರ್ಜ್‌ಗೆ ಹಾಕಿದಾಗ ಅವನ್ನು ಕೆಳಗೆ ಇಡಲು ಸ್ಟೂಲ್ ಅಥವಾ ಟೇಬಲ್ ಏನೂ ಇಲ್ಲ ಎಂದು ಚಾರ್ಜರ್ ಮೇಲೆ ಇಡುತ್ತಾರೆ. ಆದರೆ ಈ ರೀತಿ ಮಾಡಬಾರದು. ಇದರಿಂದ ರೇಡಿಯೇಷನ್ ಜಾಸ್ತಿಯಾಗುತ್ತದೆ ಎನ್ನುತ್ತಿದ್ದಾರೆ ವೈದ್ಯರು. ಹಾಗಾಗಿ ಫೋನನ್ನು ಚಾರ್ಜಿಂಗ್‌ಗೆ ಹಾಕಿದಾಗ ಅವನ್ನು ಚಾರ್ಜರ್ ಮೇಲೆ ಇಡಬಾರದು. ಅದೇ ರೀತಿ ಓವರ್‌ನೈಟ್ ಚಾರ್ಜಿಂಗ್ ಸಹ ಮಾಡಬಾರದು. ಇದರಿಂದ ಫೋನ್‍ಗಳು ಬಿಸಿಯಾಗಿ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ.

2. ದಿಂಬಿನ ಕೆಳಗೆ
ಬಹಳಷ್ಟು ಮಂದಿ ದಿಂಬಿನ ಕೆಳಗೆ ಫೋನ್‌ಗಳನ್ನಿಟ್ಟುಕೊಂಡು ಮಲಗುತ್ತಾರೆ. ಆ ರೀತಿ ಮಾಡಬಾರದು. ಈ ರೀತಿ ಇಟ್ಟುಕೊಳ್ಳುವುದರಿಂದ ದೇಹದಲ್ಲಿ ಮೆಲಟೋನಿನ್ ಉತ್ಪತ್ತಿ ಕಡಿಮೆಯಾಗುತ್ತದೆ. ಹಲವು ಅನಾರೋಗ್ಯ ಸಮಸ್ಯೆಗಳು ಬರುತ್ತವೆ. ಮುಖ್ಯವಾಗಿ ಚರ್ಮ ಸಮಸ್ಯೆಗಳು ತಲೆಯೆತ್ತುತ್ತವೆ. ಆದಕಾರಣ ನಿದ್ದೆ ಮಾಡುವಾಗ ಫೋನ್‌ಗಳನ್ನು ದಿಂಬಿನ ಕೆಳಗೆ ಇಡಬೇಡಿ.

3. ಹಿಂಬದಿ ಜೇಬಿನಲ್ಲಿ
ಹುಡುಗಿಯರಿಗೆ ಹೆಚ್ಚಾಗಿ ಈ ರೀತಿ ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಆದರೆ ಈ ರೀತಿ ಮಾಡುವುದರಿಂದ ಫೋನ್‌ನಿಂದ ಬರುವ ರೇಡಿಯೇಷನ್ ಹೊಟ್ಟೆನೋವು, ಕಾಲು ನೋವು ಉಂಟು ಮಾಡುತ್ತದೆ. ಆದಕಾರಣ ಫೋನ್‍ಗಳನ್ನು ಬ್ಯಾಕ್ ಪ್ಯಾಕೆಟ್‌ನಲ್ಲಿ ಇಡಬಾರದು.

4. ಮುಂದಿನ ಜೇಬಿನಲ್ಲಿ
ಪುರುಷರು ಹೆಚ್ಚಾಗಿ ಫೋನನ್ನು ಮುಂದಿನ ಜೇಬಿನಲ್ಲಿ ಇಡುತ್ತಾರೆ. ಈ ರೀತಿ ಮಾಡಿದರೆ ಫೋನ್‌ನಿಂದ ಬರುವ ರೇಡಿಯೇಷನ್ ಕಾರಣದಿಂದ ವೀರ್ಯಾಣುಗಳಿಗೆ ಹಾನಿಯಾಗುತ್ತದೆ. ಇದರಿಂದ ಸಂತಾನಹೀನತೆಯಂತಹ ಸಮಸ್ಯೆಗಳು ಬರುತ್ತವೆ ಎನ್ನುತ್ತಿದ್ದಾರೆ ವೈದ್ಯರು.

5. ತಲೆ ಬಳಿ
ಬಹಳಷ್ಟು ಮಂದಿ ನಿದ್ದೆ ಮಾಡುವಾಗ ತಲೆ ಪಕ್ಕದಲ್ಲೆ ಫೋನನ್ನು ಇಟ್ಟು ಮಲಗುತ್ತಾರೆ. ಈ ರೀತಿ ಮಾಡುವುದರಿಂದ ಮಿದುಳಿನಲ್ಲಿ ಗಡ್ಡೆಗಳು ಬೆಳೆಯುವ ಸಾಧ್ಯತೆಗಳಿವೆ. ಅದು ಬ್ರೈನ್ ಟ್ಯೂಮರ್‌ಗೆ ದಾರಿಯಾಗಬಹುದು ಎನ್ನುತ್ತಿದ್ದಾರೆ ವೈದ್ಯರು. ಆದಕಾರಣ ಈ ಜಾಗಗಳಲ್ಲಿ ಹೊರತುಪಡಿಸಿ ಬೇರೆಲ್ಲಾದರೂ ಫೋನನ್ನು ಇಡುವ ಪ್ರಯತ್ನ ಮಾಡಿ ಎಂಬುದು ವೈದ್ಯರ ಸಲಹೆ.

No comments