Header Ads

test

ತಾಳಿ ಸರದಲ್ಲಿ ಪಿನ್‌ಗಳನ್ನು ಹಾಕಿಕೊಳ್ಳಬಾರದೆ..? ಹಾಕಿಕೊಂಡರೆ ಏನಾಗುತ್ತದೆ?

ಪುರಾತನ ಕಾಲದಿಂದ ನಮ್ಮ ಹಿರಿಯರು, ಪೂರ್ವಿಕರು ಪಾಲಿಸುತ್ತಿರುವ ಆಚಾರ, ಸಂಪ್ರದಾಯಗಳು, ಪದ್ಧತಿಗಳು, ವಿಶ್ವಾಸಗಳ ಬಗ್ಗೆ ತುಂಬಾ ಮಂದಿಗೆ ಗೊತ್ತು. ಆದರೆ ಕೆಲವರು ಅವನ್ನು ಮೂಢನಂಬಿಕೆ ಎಂದು ಹೊಡೆದುಕುತ್ತಾರೆ. ಆದರೆ ವಾಸ್ತವವಾಗಿ ಹೇಳಬೇಕೆಂದರೆ ಅವನ್ನು ಪಾಲಿಸಿದರೆ ನಾನು ಕಳೆದುಕೊಳ್ಳುವಂತಹದ್ದು ಏನೂ ಇರಲ್ಲ. ಒಂದು ವೇಳೆ ನಿಜವಾಗಿ ಆ ರೀತಿ ನಡೆದರೆ ನಮಗೆ ಒಳ್ಳೆಯದೇ ಅಲ್ಲವೇ. ಇದರಿಂದ ಆ ನಂಬಿಕೆ ಬಗ್ಗೆ ನಾವು ಇತರರಿಗೆ ಹೇಳುತ್ತೇವೆ. ಆದರೆ ಅಂತಹ ನಂಬಿಕೆಗಳಲ್ಲಿ ಕೆಲವನ್ನು ಈಗ ತಿಳಿದುಕೊಳ್ಳೋಣ.
1. ಮಹಿಳೆಯರು ಮಂಗಳಸೂತ್ರದಲ್ಲಿ ಪಿನ್‌ಗಳನ್ನು ಹಾಕಿಕೊಳ್ಳುತ್ತಾರೆ. ಅದೇ ರೀತಿ ಕೆಲವೊಮ್ಮೆ ಹೇರ್ ಪಿನ್‌ಗಳನ್ನು ಸಹ ಮಂಗಳಸೂತ್ರದಲ್ಲಿ ಹಾಕಿಕೊಳ್ಳುತ್ತಾರೆ. ಆದರೆ ಆ ರೀತಿ ಮಾಡಬಾರದು. ಯಾಕೆಂದರೆ ಮಂಗಳಸೂತ್ರ ವೇದ ಮಂತ್ರಗಳ ಸಹಿತವಾಗಿ ಪ್ರಭಾವಿತವಾಗಿದ್ದು ಅದು ಗಂಡನ ಆಯಸ್ಸಿನ ಗುಟ್ಟು. ಮಂಗಳಸೂತ್ರ ಮಹಿಳೆಯರ ಹೃದಯದ ಬಳಿ ಇರುತ್ತದೆ. ಕಬ್ಬಿಣದ ವಸ್ತುಗಳು (ಪಿನ್, ಕಬ್ಬಿಣದಿಂದ ಮಾಡಿದವು) ದಿವ್ಯ ಶಕ್ತಿಗಳನ್ನು ಆಕರ್ಷಿಸುವ ಗುಣ ಹೊಂದಿರುತ್ತವೆ. ಇವು ಮಂಗಳಸೂತ್ರದಲ್ಲಿನ ದಿವ್ಯ ಶಕ್ತಿಗಳನ್ನು ಆಕರ್ಷಿಸಿ ಗಂಡನನ್ನು ಶಕ್ತಿಹೀನನ್ನಾಗಿ ಮಾಡುತ್ತವೆ. ಇದರಿಂದ ಗಂಡನಿಗೆ ಅನಾರೋಗ್ಯ ಉಂಟಾಗುತ್ತದೆ. ಗಂಡಹೆಂಡತಿಯಲ್ಲಿ ಅನುರಾಗ ಕಡಿಮೆಯಾಗುತ್ತದೆ. ಆದಕಾರಣ ಇಂತಹ ಅಭ್ಯಾಸ ಇದ್ದರೆ ಕೂಡಲೆ ಬಿಟ್ಟುಬಿಡಿ.

2. ಮಹಿಳೆಯರು ಮಣ್ಣಿನ ಬಳೆಗಳನ್ನು ಧರಿಸಿದರೆ ಒಳ್ಳೆಯದು. ಈ ಬಳೆಗಳು ಐಶ್ವರ್ಯವನ್ನು ಉಂಟು ಮಾಡುವುದೇ ಅಲ್ಲ, ಇವುಗಳ ಶಬ್ದ ಶುಭವನ್ನು, ಅನುರಾಗಗಳನ್ನೂ ಹೆಚ್ಚಿಸುತ್ತದೆ.

3. ಮನೆಯಲ್ಲಿ ಕುದುರೆ ಗೊಂಬೆ ಇಡುವುದು ಅಷ್ಟು ಕ್ಷೇಮವಲ್ಲ. ಇದರಿಂದ ಹಣ ವಿಪರೀತವಾಗಿ ಖರ್ಚಾಗುತ್ತದಂತೆ. ಬಂದರೂ ನಿಲ್ಲಲ್ಲ.

4. ಸಂಪತ್ತನ್ನು, ಆಭರಣಗಳನ್ನು ಹೆಚ್ಚಾಗಿ ಪ್ರದರ್ಶಿಸುವುದರಿಂದ ನರಘೋಷ ಉಂಟಾಗುತ್ತದೆ. ಇದರಿಂದ ಕೆಟ್ಟದಾಗುತ್ತದೆ. ಆದಕಾರಣ ಯಾರಾದರೂ ಸಾಧಾರಣ ಅಲಂಕಾರ ಮಾಡಿಕೊಳ್ಳುವುದು ಉತ್ತಮ.

5. ಹೆಣ್ಣುಮಕ್ಕಳು, ಅತ್ತೆಮಾವನ ಜತೆ ಭೇದಭಾವ ಹೆಚ್ಚಾದರೆ, ಅವರು ವಿವಾಹಿತ ಮಹಿಳೆಗೆ ತೊಂದರೆ ಮಾಡುತ್ತಿದ್ದರೆ, ಅವರು ಮಲಗುವ ದಿಂಬಿನ ಕೆಳಗೆ ತುಳಸಿ ಬೇರು ಇಡಬೇಕು. ಇದರಿಂದ ಅವರು ಮಹಿಳೆಯರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಕಡಿಮೆಯಾಗುತ್ತದೆ.

6. ಅಡುಗೆ ಮಾಡುವಾಗ ಎರಡು ಅಕ್ಕಿಕಾಳನ್ನು ತೆಗೆದುಕೊಂಡು ಭಕ್ತಿಯಿಂದ ಅಗ್ನಿಗೆ ಮಹಿಳೆಯರು ಸಮರ್ಪಿಸಬೇಕು. ಇದರಿಂದ ಅಡುಗೆ ತುಂಬಾ ರುಚಿಯಾಗಿ, ಆರೋಗ್ಯಕರವಾಗಿ ಇರುತ್ತದೆ.

7. ಗಂಡ ಕುಡಿದು ಬಂದು ಹಿಂಸೆ ನೀಡುತ್ತಿದ್ದರೆ ಬೆಳಗ್ಗೆ ತಿಂಡಿ ತಿಂದ ಬಳಿಕ ಒಂದು ಚಿಕ್ಕ ಸ್ಫೂನ್ ಅಂದರೆ ಸುಮಾರು ಅರ್ಧ ಗ್ರಾಮ್ ಅಳಲೆಕಾಯಿ ಪುಡಿಯನ್ನು ಆರು ಸ್ಫೂನ್ ನೀರಿನಲ್ಲಿ ಬೆರೆಸಿ ಮಹಿಳೆಯರು ಕುಡಿಸಬೇಕು. ಈ ರೀತಿ 60 ದಿನಗಳ ಕಾಲ ಕುಡಿದರೆ ಕುಡಿತದ ಮೇಲೆ ವಿರಕ್ತಿ ಭಾವ ಉಂಟಾಗುತ್ತದೆ. ಅಳಲೆಕಾಯಿ ಪುಡಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆರಂಭದಲ್ಲಿ ಇದನ್ನು ಕುಡಿಯಲ್ಲ ಎಂದು ಹಠಹಿಡಿಯುತ್ತಾರೆ. ಸ್ವಲ್ಪ ಅಂಗಲಾಚಿಯಾದರೂ ಕುಡಿಸಲು ಅಭ್ಯಾಸ ಮಾಡಬೇಕು. ಈ ಔಷಧ ಕುಡಿತವನ್ನು ಬಿಡಿಸುತ್ತದಂತೆ. ಇದನ್ನು ಕೆಲವರು ಅನುಭವಪೂರ್ವಕವಾಗಿ ಹೇಳುತ್ತಾರೆ.

8. ಸುಖ ಸಂತೋಷಗಳು ಬರಡಾದಾಗ ಹಳದಿ ಬಣ್ಣದ ಹೂಗಳನ್ನು ಮುಡಿಯಬೇಕು. ಇದರಿಂದ ಅವರ ಸ್ಥಿತಿ ಉತ್ತಮವಾಗುತ್ತದೆ.

9. ಸಾಲದ ಭಾದೆ ಹೆಚ್ಚಾಗಿ ಇರುವವರು ಬಿಳಿ ಬಣ್ಣದ ಹೂಗಳನ್ನು ಮುಡಿದರೆ ರುಣ ಬಾಧೆ ನಿವಾರಣೆಯಾಗುತ್ತದೆ.

10. ಆರೋಗ್ಯ ಸರಿಯಾಗಿ ಇಲ್ಲದವರು, ದೇಹದ ನೋವುಗಳುಳ್ಳವರು ಮರುಗ, ಮಂದಾರ ಹೂಗಳನ್ನು ಧರಿಸಬೇಕು. ಇದರಿಂದ 20 ದಿನಗಳಲ್ಲಿ ಫಲಿತಾಂಶ ಕಾಣಿಸುತ್ತದೆ.

11. ಮದುವೆ ಸಂಬಂಧ ಸಂದರ್ಭದಲ್ಲಿ ಕೆಂಪು ಹೂವು, ಹಳದಿ ಹೂಗಳನ್ನು ಬೆರೆಸಿದ ಮಾಲೆ ಧರಿಸಬೇಕು. ವಿವಾಹ ಸಮಯದಲ್ಲಿ ಕನ್ಯೆಯರಿಗೆ ತುಂಬಾ ಶುಭ ಫಲಿತಾಂಶಗಳು ಸಿಗುತ್ತವೆ.

12. ಒಳ್ಳೆಯ ತೀರ್ಥದಲ್ಲಿ ಎರಡು ತುಳಸಿ ದಳಗಳನ್ನು ಹಾಕಿದರೆ ಅವು ಮಾನಸ ಸರೋವರ ನೀರಿನಷ್ಟು ಪವಿತ್ರವಾಗುತ್ತದೆ.

13. ಪೂಜೆ ಮಾಡುವಾಗ ಕುಳಿತುಕೊಳ್ಳುವ ಪೀಠವನ್ನು ಸ್ವಚ್ಛಗೊಳಿಸಿ ನಾಲ್ಕು ಮೂಲೆಗಳಲ್ಲಿ ಕುಂಕುಮವಿಟ್ಟು ಕುಳಿತುಕೊಳ್ಳಬೇಕು. ಚಾಪೆ ಮೇಲಾದರೆ ವಿಭೂತಿ ಬೊಟ್ಟಿರುವ ಬಟ್ಟೆಯನು ಆಸನವಾಗಿ ಬಳಸಿದರೆ ಕುಂಕುಮ ಬೊಟ್ಟನ್ನು ಇಟ್ಟು ಕುಳಿತುಕೊಳ್ಳಬೇಕಾಗುತ್ತದೆ.

14. ಗಂಡ ಹೊರಗೆ ಹೋಗಲು ಶರ್ಟ್ ಹಾಕಿಕೊಳ್ಳುತ್ತಿದ್ದರೆ, ಗುಂಡಿಗಳನ್ನು ಮಹಿಳೆಯರು ಹಾಕಬೇಕು. ಪತ್ನಿಯ ಬಲಗೈಯನ್ನು ತಾಕಿ ಗಂಡ ಹೊರಗೆ ಹೋಗಬೇಕು. ಇದರಿಂದ ಆ ದಿನವೆಲ್ಲಾ ಸಂಪಾದನೆ, ಯಶಸ್ಸು, ಸಂತೋಷ ಜತೆಗೇ ಇರುತ್ತದೆ.

No comments