Header Ads

test

ತಾಯಿ ಮೃತಪಟ್ಟಾಗ ಆ ಇಬ್ಬರು ನನಗೆ ಜತೆಯಾಗಿದ್ದರು - ಶ್ರೀದೇವಿ ಮಗಳು ಜಾಹ್ನವಿ ಕಪೂರ್!!

ಭಾರತ ಬೆಳ್ಳಿಪರದೆಯ ಮೋಹಕ ತಾರೆ ಶ್ರೀದೇವಿ ನಿಧನ ಅವರ ಕುಟುಂಬನ್ನು ದುಃಖದ ಮಡುವಿಗೆ ನೂಕಿತ್ತು. ಮಾತಿನಲ್ಲಿ ಹೇಳಲಾಗದಷ್ಟು ದುಃಖಕ್ಕೆ ಒಳಗಾಗಿದ್ದರು ಕುಟುಂಬ ಸದಸ್ಯರು. ಶ್ರೀದೇವಿ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಜಾಹ್ನವಿ ಕಪೂರ್, ಖುಷಿ ಕಪೂರ್. ಶ್ರೀದೇವಿ ನಿಧನದ ಬಳಿಕ ಜಾಹ್ನವಿ ಕಪೂರ್ ತನಗೆ ಎದುರಾದ ಅನುಭಗಳ ಬಗ್ಗೆ ಹೇಳಿದ್ದಾರೆ:


ಯಾವುದೇ ಕೆಲಸ ಮಾಡಿದರೂ ತಾಯಿ ನೆನಪಾಗುತ್ತಿದ್ದರು:
ತಾಯಿ ನಿಧನದ ಬಳಿಕ ನನಗೆ ಅರ್ಥವಾಗಲಿಲ್ಲ. ಆ ಶಾಕ್‌ನಿಂದ ಇನ್ನೂ ಹೊರಬಂದಿಲ್ಲ. ನಾನು ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಯಾವುದೇ ಕೆಲಸ ಮಾಡಿದರೂ ಅಮ್ಮ ನೆನಪಾಗುತ್ತಾರೆ ನನಗೆ. ಪ್ರತಿ ನಿತ್ಯ ನೋವನುಭವಿಸುತ್ತಿರುತ್ತೇನೆ ಅಮ್ಮನನ್ನು ನೆನೆಯುತ್ತಾ. ಅಮ್ಮ ಮೃತಪಟ್ಟ ಬಳಿಕ ನಾನು ಹರ್ಷ ಭಯ್ಯಾ (ಅನಿಲ್ ಕಪೂರ್ ಪುತ್ರ) ಒಂದು ರೂಮಿನಲ್ಲಿ ಕುಳಿತಿದ್ದಾಗ ಅರ್ಜುನ್ ಭಯ್ಯಾ, ಅನ್ಷುಲಾ ದೀದಿ ಬಂದರು. ಆಗವರು ನನಗೆ ಧೈರ್ಯ ತುಂಬಿದರು. ಅಂದಿನಿಂದ ಇಂದಿನವರೆಗೂ ನನಗೆ ಜತೆಯಾಗಿದ್ದಾರೆ. ನನ್ನನ್ನು ನನ್ನ ತಂಗಿಯನ್ನು ತುಂಬಾ ಆಪ್ಯಾಯವಾಗಿ ನೋಡಿಕೊಳ್ಳುತ್ತಿದ್ದಾರೆ. ಕಷ್ಟದ ಸಮಯದಲ್ಲಿ ಜತೆಯಾಗಿ ಬೆನ್ನಿಗೆ ನಿಂತರು. ನಮ್ಮ ದೇಹದಲ್ಲಿ ಪ್ರವಹಿಸುತ್ತಿರುವುದು ಒಂದೇ ರಕ್ತ. ಅರ್ಜುನ್ ಅಣ್ಣ, ಅನ್ಷುಲಾ ಅಕ್ಕ ನಮ್ಮೊಂದಿಗೆ ಇರುವಷ್ಟು ದಿನ ನಮಗೆ ಯಾವುದೇ ಭಯ ಇಲ್ಲ.

ಅರ್ಜುನ್, ಅನ್ಷುಲಾ, ಬೋನಿ ಕಪೂರ್ ಮೊದಲ ಪತ್ನಿ ಮಕ್ಕಳು. ಶ್ರೀದೇವಿ ಮಕ್ಕಳ ಜತೆಗೆ ಅರ್ಜುನ್, ಅನ್ಷುಲಾ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಆದರೆ ಶ್ರೀದೇವಿ ಮರಣದ ಬಳಿಕ ಅವರಿಬ್ಬರೂ ಶ್ರೀದೇವಿ ಮಕ್ಕಳಿಗೆ ಬೆಂಬಲವಾಗಿ ನಿಂತರು. ಜಾಹ್ನವಿ ಕಪೂರ್ ತಂಗಿ ಖುಷಿ ಕಪೂರ್ ಸಹ ಸಿನಿಮಾ ಕ್ಷೇತ್ರಕ್ಕೆ ಅಡಿಯಿಡಬೇಕೆಂದು ಆಲೋಚಿಸುತ್ತಿದ್ದಾಳೆ. ಅಕ್ಕ ತಂಗಿ ಇಬ್ಬರೂ ಶ್ರೀದೇವಿ ಹೆಸರು ಉಳಿಸುತ್ತಾರೆ ಎಂದು ಎಲ್ಲರೂ ಬಯಸುತ್ತಿದ್ದಾರೆ.

ಜಾಹ್ನವಿ ಕಪೂರ್ ನಟಿಸಿದ ಧಡಕ್ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಮೊದಲ ಚಿತ್ರವಾದರೂ ತನ್ನ ನಟನೆಯಿಂದ ಸೌಂದರ್ಯದಿಂದ ಯುವ ಜನತೆಯನ್ನು ಆಕರ್ಷಿಸಿದಳು ಜಾಹ್ನವಿ ಕಪೂರ್. ಸದ್ಯಕ್ಕೆ ಜಾಹ್ನವಿ ಕಪೂರ್ ತಕ್ತ್, ರಣ್ ಭೂಮಿ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಎರಡು ಸಿನಿಮಾಗಳು 2020ಕ್ಕೆ ಬಿಡುಗಡೆಯಾಗಲಿವೆ.

ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡುತ್ತಿದ್ದ ಅವರು, ಈ ವರ್ಷ ನನಗೆ ಜೀವನದ ಅತ್ಯಂತ ಕೆಟ್ಟ ಮತ್ತು ಅತ್ಯಂತ ಉತ್ತಮ ಅನುಭವಗಳಾಗಿವೆ. ಈ ವರ್ಷ ನನ್ನ ನಟನೆಯ ಮೊದಲ ಸಿನಿಮಾ ಬಿಡುಗಡೆಯಾಯಿತು. ಈ ಮೂಲಕ ನನ್ನ ಕರಿಯರ್‌ ಆರಂಭವಾಗಿ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿತು. ಆದರೆ ಇದೇ ವರ್ಷ ನನ್ನ ತಾಯಿ ಶ್ರೀದೇವಿಯನ್ನು ನಾನು ಕಳೆದುಕೊಂಡೆ. ಆ ಶಾಕ್‌ನಿಂದ ನಾವು ಇನ್ನೂ ಹೊರಗೆ ಬಂದಿಲ್ಲ ಎಂದು ಜಾಹ್ನವಿ ವಿವರಿಸಿದ್ದಾರೆ.

No comments