Header Ads

test

ಅಮೆಜಾನ್ ಡೆಲಿವರಿ ತೆಗೆದುಕೊಂಡ ಬಳಿಕ ಬಂದ ಮೆಸೇಜ್ ನೋಡಿ ಆತ ಶಾಕ್ ಆದ..! ಯಾಕೆ ಗೊತ್ತಾ.?

ಒಂದು ರೂಪಾಯಿಗೆ ಈ ಕಾಲದಲ್ಲಿ ಏನು ಸಿಗುತ್ತದೆ? ರೂ.1ಕ್ಕೆ ನೀವು ಏನು ವಸ್ತು ಕೊಳ್ಳುತ್ತೀರಿ. ಚೆನ್ನಾಗಿ ಆಲೋಚಿಸಿ. ಮಕ್ಕಳು ತಿನ್ನುವ ಪುಟ್ಟ ಚಾಕೋಲೇಟ್, ಬಿಸ್ಕೆಟ್ಸ್, ತಿಂಡಿಗಳು, ದೊಡ್ಡವರಿಗೆ ಸೋಂಪು, ಪಾನ್ ಮಸಾಲಾ ಪ್ಯಾಕೆಟ್‌ಗಳು ಬರುತ್ತವೆ. ಅದು ಬಿಟ್ಟು ಇನ್ನೇನು ಬರಲ್ಲ. ಆದರೂ ರೂಪಾಯಿ ರೂಪಾಯಿ ಅಲ್ಲವೇ? ಹಾಗೆಂದು ಹೇಳಿ ನಮಗೆ ಯಾರ ಬಳಿಯಾದರೂ ರೂಪಾಯಿ ಸಿಗಬೇಕಾದರೆ ಬಿಟ್ಟು ಬಿಡ್ತೀವಾ? ಜೋರು ಮಾಡಿ ವಸೂಲಿ ಮಾಡುತ್ತೇವೆ. ಹೌದು ಮತ್ತೆ. ಎಷ್ಟೇ ಆಗಲಿ ನಮ್ಮ ಹಣ ಅಲ್ಲವೇ.ಕಷ್ಟಪಟ್ಟು ಸಂಪಾದಿಸಿದ್ದು, ಹಾಗಾಗಿ ಒಂದು ರೂಪಾಯಿ ಸಹ ಬಿಡಲ್ಲ. ಬಿಟ್ಟು ಬಿಡಲು ಇಷ್ಟಪಡಲ್ಲ. ಇಂದಿನ ಜಮಾನಾದಲ್ಲಿ ಯಾರೇ ಆಗಲಿ ಇದನ್ನೇ ಮಾಡುವುದು. ಆದರೆ ಆ ಯುವಕ ಮಾತ್ರ ರೂ.1 ಬಿಟ್ಟುಕೊಟ್ಟ. ಆ ರೂಪಾಯಿ ಬರಲ್ಲ ಎಂದುಕೊಂಡ. ಆದರೆ ತಾನು ಬಿಟ್ಟುಬಿಟ್ಟ ರೂಪಾಯಿ ತನ್ನ ಬಳಿಗೆ ಮತ್ತೊಂದು ರೂಪದಲ್ಲಿ ಬಂತು. ಇದರಿಂದ ಆತ ಶಾಕ್‌ ಆದ. ಇಷ್ಟಕ್ಕೂ ನಡೆದದ್ದೇನು ಎಂದು ನೋಡೋಣ ಬನ್ನಿ.


ಆತನ ಹೆಸರು ಸತ್ಪಾಲ್ ಸಿಂಗ್ ರಾಥೋಡ್. ವಿದ್ಯಾರ್ಥಿ. ಅಮೆಜಾನ್‌ನಲ್ಲಿ ಒಂದು ಟ್ರಾವೆಲ್ ಬ್ಯಾಗ್‌ ಆರ್ಡರ್ ಮಾಡಿದ. ಅದರ ಬೆಲೆ ರೂ.1979. ಕ್ಯಾಶ್ ಆನ್ ಡೆಲಿವರಿ ಆದ ಕಾರಣ ಡೆಲಿವರಿಯವನಿಗೆ ಆತ ರೂ.20 ಕೊಟ್ಟ. ಉಳಿದ ಒಂದು ರೂಪಾಯಿ ಸತ್ಪಾಲ್‌ಗೆ ಬರಬೇಕಿತ್ತು. ಆದರೆ ಡೆಲಿವರಿ ಆತ ಆ ರೂಪಾಯಿ ಕೊಡದೆ ಹೊರಟು ಹೋದ. ಆತನ ಬಳಿ ರೂಪಾಯಿ ಚಿಲ್ಲರೆ ಇಲ್ಲವೇನೋ ಎಂದುಕೊಂಡು ಸತ್ಪಾಲ್ ತನ್ನ ರೂಪಾಯಿ ಆಸೆ ಬಿಟ್ಟುಬಿಟ್ಟ. ಆದರೆ ಆತನಿಗೆ ಸ್ವಲ್ಪ ನಿಮಿಷಗಳಲ್ಲಿ ಆ ರೂಪಾಯಿ ಬಂತು.

ಸತ್ಪಾಲ್ ಅಮೆಜಾನ್ ಅಕೌಂಟ್‌ನಲ್ಲಿ ಇರುವ ಅಮೆಜಾನ್ ಪೇ ಬ್ಯಾಲೆನ್ಸ್‌ನಲ್ಲಿ ಆ ರೂಪಾಯಿ ಜಮೆಯಾಗಿತ್ತು. ಹಾಗೆಯೇ ಆತನ ಫೋನ್‌ಗೆ ಮೆಸೇಜ್ ಬಂತು. ಇದರಿಂದ ಆತ ಶಾಕ್ ಆದ.

ಅಂದರೆ ತನ್ನ ಬಳಿ ತೆಗೆದುಕೊಂಡ ಆ ರೂ.1ನ್ನು ಡೆಲಿವರಿ ಆತ ತೆಗೆದುಕೊಳ್ಳಲಿಲ್ಲ. ಕಂಪೆನಿಗೆ ಕೊಟ್ಟ. ಇದರಿಂದ ಕಂಪೆನಿ ಆ ಚಿಲ್ಲರೆಯನ್ನು ತನ್ನ ಅಮೆಜಾನ್ ಪೇ ಖಾತೆಗೆ ಜಮೆ ಮಾಡಿತು. ಹಾಗಾಗಿ ಅವನಿಗೆ ಮೆಸೇಜ್ ಬಂತು. ನಡೆದದ್ದಿಷ್ಟು. ಇದರಿಂದ ಸತ್ಪಾಲ್ ಶಾಕ್ ಆದ. ತನ್ನ ರೂಪಾಯಿ ತನಗೆ ಬಂದಿದೆ ಎಂದು ತಿಳಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಹೌದು ಮತ್ತೆ, ಎಷ್ಟೇ ಆಗಲಿ ಕಷ್ಟಪಟ್ಟು ದುಡಿದ ಹಣ. ರೂಪಾಯಿಯಾದರೂ ಸರಿ ಹೇಗೆ ಬಿಟ್ಟು ಬಿಡಕ್ಕೆ ಸಾಧ್ಯ ಹೇಳಿ. ನಿಜ ಅಲ್ಲವೇ..?

No comments